ನವದೆಹಲಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಆನ್ ಲೈನ್ ಖದೀಮರು ಹೊಸ ಮಾರ್ಗಗಳನ್ನ ಹುಡುಕಿದ್ದಾರೆ. ಈ ಖದೀಮರು ಈಗ ಅಮೆಜಾನ್ ಪ್ರೈಮ್ ವಿಡಿಯೋ(Amazon Prime Video) ಅಥವಾ ನೆಟ್‌ಫ್ಲಿಕ್ಸ್‌(Netflix) ನಂತಹ ವೀಡಿಯೊ ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಎಂಟ್ರಿ ನೀಡುವ ದುರುದ್ದೇಶಪೂರಿತ ಲಿಂಕ್‌ಗಳನ್ನು ಕಳುಹಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ನಿಮ್ಮ ವಾಟ್ಸಾಪ್‌(WhatsApp)ನಲ್ಲಿ ನೀವು ಇದೇ ರೀತಿಯ ಮೆಸೇಜ್ ಲಿಂಕ್ ಗಳು ಬಂದಿರುತ್ತವೆ, ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ಡೇಟಾವನ್ನು ಖದೀಮರ ಕೈ ಸೇರುತ್ತದೆ ಎಚ್ಚರ. ಖದೀಮರು ಸಧ್ಯ ಈ ಮಾರ್ಗದ ಮೂಲಕ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಸಹ ಕದಿಯಬಹುದು.


ಇದನ್ನೂ ಓದಿ : Xiaomi ಯಿಂದ Mi 11 Ultra ಫೋನ್ ಲಾಂಚ್, ಇದರಲ್ಲಿದೆ ಅತಿ ದೊಡ್ಡ ಕ್ಯಾಮೆರಾ ಸೆನ್ಸಾರ್


ಈ ಕುರಿತು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ದೆಹಲಿ ಪೊಲೀಸ್ ಸೈಬರ್ ಕ್ರೈಮ್(Delhi Police Cybercrime) ಒಂದು ಎಚ್ಚರಿಕೆಯ ಪೋಸ್ಟ್ ಮಾಡಿದೆ, ಈ ರೀತಿಯ ಅಂತಹ ಯಾವುದೇ ಲಿಂಕ್‌ಗಳನ್ನ ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರಿಗೆ ಬೇರೆಯರಿಗೂ ಶೇರ್ ಅಥವಾ ಫಾರ್ವರ್ಡ್ ಮಾಡದಂತೆ ಎಚ್ಚರಿಕೆ ನೀಡಿ ಎಂದು ಕಾನೂನು ಜಾರಿ ಸಂಸ್ಥೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ. ಈ ರೀತಿಯ ಬಹು ಆಂಟಿವೈರಸ್ ಎಂಜಿನ್‌ಗಳು ಈಗಾಗಲೇ ಲಿಂಕ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನ ಬಂದ್ ಮಾಡಲಾಗಿದೆ.


ಇದನ್ನೂ ಓದಿ : Realme 8 5G Price in India: ಕೈಗೆಟಕುವ ದರದಲ್ಲಿ 5G ಸ್ಮಾರ್ಟ್‌ಫೋನ್‌ ಬಿಡುಗಡೆ, ಅದರ ವೈಶಿಷ್ಟ್ಯ ತಿಳಿಯಿರಿ


“ಈ ಮೆಸೇಜ್ ಗಳು URL / ಲಿಂಕ್‌ಗಳಿವೆ, ಇವುಗಳನ್ನು ಬಹು ಆಂಟಿವೈರಸ್ ಎಂಜಿನ್‌ ಫ್ಲ್ಯಾಗ್(Multiple Antivirus Engines) ಮಾಡಲಾಗಿದೆ. ಲಿಂಕ್‌ಗಳನ್ನು ನಿರ್ಬಂಧಿಸಲಾಗಿದೆ ಎಚ್ಚರಿಕೆ ಈ ರೀತಿಯ ಲಿಂಕ್‌ಗಳನ್ನು  ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಯಾರಿಗೂ ಎಂದಿಗೂ ಫಾರ್ವರ್ಡ್ ಮಾಡಬೇಡಿ ”ಎಂದು ಡಿಸಿಪಿ ಸೈಬರ್‌ಸೈಮ್‌ನ ಟ್ವೀಟ್ ನಲ್ಲಿ ಬರೆದಿದ್ದರೆ.


ಇದನ್ನೂ ಓದಿ : Google Chrome:ಕಡಿಮೆ ಡೇಟಾದೊಂದಿಗೆ ಪಡೆಯಿರಿ ಈ ಎಲ್ಲಾ ಲಾಭ


ದೆಹಲಿ ಪೊಲೀಸರು(Delhi Police) ಈ ಕುರಿತು ವಾಟ್ಸಾಪ್ ನಲ್ಲಿ ಬಂದಿರುವ ಈ ಖದೀಮರ ಹೊಸ ಮಾರ್ಗದ ಲಿಂಕ್ ಗಳ  ಸ್ಕ್ರೀನ್ ಶಾಟ್ ಗಳನ್ನ  ಹಂಚಿಕೊಂಡಿದ್ದಾರೆ. ಲಿಂಕ್ ನಲ್ಲಿ  “60 ದಿನಗಳವರೆಗೆ ವಿಶ್ವದ ಎಲ್ಲಿಯಾದರೂ 2 ತಿಂಗಳ ಅಮೆಜಾನ್ ಪ್ರೀಮಿಯಂ ಉಚಿತ ಪಡೆಯಿರಿ. http://profilelist.xyz/?livestream ”ಅಂತಹ ಒಂದು ಸಂದೇಶವನ್ನು  ಕೂಡ ನೀಡಿದ್ದಾರೆ. 


ಇದನ್ನೂ ಓದಿ : Govt Giving Free Recharge ! ಸರ್ಕಾರ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ನೀಡುತ್ತಿದೆ! ನಿಮಗೂ ಈ SMS ಬಂದಿದೆಯೇ?


ಇದು ಆನ್ಲೈನ್ ಖದೀಮರ ಕೆಲಸ ಎಂಬುವುದನ್ನು ನೀವು ತುಂಬಾ ಸರಳವಾಗಿ ಪತ್ತೆ ಹಚ್ಚಬಹುದು. ನಿಮಗೆ ಬಂದಿರುವ ಮೆಸೇಜ್ ನಲ್ಲಿ  ‘ಅಮೆಜಾನ್ ಪ್ರೈಮ್’(Amazon Prime) ಬದಲಿಗೆ ‘ಅಮೆಜಾನ್ ಪ್ರೀಮಿಯಂ’(Amazon Premium) ಎಂದು ಬರೆಯಲಾಗಿದೆ.


ಇದನ್ನೂ ಓದಿ : OLA Electric Scooter : ಜನರ ಮನಗೆದ್ದ 'OLA ಎಲೆಕ್ಟ್ರಿಕ್ ಸ್ಕೂಟರ್' : ಜುಲೈನಲ್ಲಿ ಮಾರಕಟ್ಟೆಗೆ!


ಅಲ್ಲದೆ, ನೀವು ಈ ಲಿಂಕ್ URL ನ ‘ಪ್ರೊಫೈಲ್ ಲಿಸ್ಟ್’(Profilelist) ಅನ್ನು ನೋಡಿದರೆ, ಈ ಲಿಂಕ್ ಆನ್ ಲೈನ್ ಖದೀಮರ ಕೆಲಸ ಎಂಬುವುದು ಗೊತ್ತಾಗುತ್ತದೆ.. ಗ್ಯಾಜೆಟ್ಸ್ ನೌ ವರದಿಯ ಪ್ರಕಾರ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳಂತಹ ನಿಮ್ಮ ಹಣಕಾಸಿನ ವಿವರಗಳನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಈ ಖದೀಮರು ಪ್ರಯತ್ನಿಸುತ್ತಾರೆ ಎಚ್ಚರ ಎಂದು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.