Supermassive Black Hole Disappeared - ನವದೆಹಲಿ: ಕಪ್ಪುಕುಳಿಗಳ ಬಗ್ಗೆ ವಿಜ್ಞಾನಿಗಳು ಹೊಂದಿರುವ ಮಾಹಿತಿಗಳಷ್ಟೇ ಕಪ್ಪುಕುಳಿಗಳು ಕೂಡ ನಿಗೂಢವಾಗಿವೆ. ಪ್ರಸ್ತುತ, ವಿಜ್ಞಾನಿಗಳು ಈ ರಹಸ್ಯಗಳನ್ನು ಪರಿಹರಿಸುವಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಮತ್ತೊಂದು ಪ್ರಶ್ನೆ ವಿಜ್ಞಾನಿಗಳನ್ನು ಕಾಡಲಾರಂಭಿಸಿದೆ. ಹೌದು, ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ (NASA) ಚಂದ್ರನ ಎಕ್ಸರೆ ವೀಕ್ಷಣಾಲಯ ಮತ್ತು ಹಬಲ್ ಬಾಹ್ಯಾಕಾಶ ದೂರದರ್ಶಕದಿಂದ ಹುಡುಕಾಟ ನಡೆಸಿದರೂ ಕೂಡ ವಿಶಾಲ ಗಾತ್ರದ ಕಪ್ಪು ಕುಳಿಯೊಂದು ಇದ್ದಕ್ಕಿದ್ದಂತೆ ಮಾಯವಾಗಿದೆ.


COMMERCIAL BREAK
SCROLL TO CONTINUE READING

ತನ್ನ ಜಾಗ ಬದಲಾಯಿಸಿದೆ ಕಪ್ಪು ಕುಳಿ
ನಮ್ಮ ಗ್ಯಾಲಕ್ಸಿಯಲ್ಲಿ  ಆಧಾರದ ಮೇಲೆ ಈ ಕಪ್ಪು ಕುಳಿಯ ತೂಕ ಸೂರ್ಯನ ತೂಕಕ್ಕಿಂದ ಸುಮಾರು 100 ಪಟ್ಟು ಹೆಚ್ಚಾಗಿದೆ. ಆದರೆ ವಿಜ್ಞಾನಿಗಳಿಗೆ ಅದು ಅದರ ಸ್ಥಾನದಲ್ಲಿ ಕಾಣುತ್ತಿಲ್ಲ. ಭೂಮಿಯಿಂದ 2.7 ಶತಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಗ್ಯಾಲಕ್ಸಿ ಕ್ಲಸ್ಟರ್ ಆಗಿರುವ  ಅಬೆಲ್ 2261ನಲ್ಲಿ ಈ ವಿಶಾಲ ಬ್ಲಾಕ್ ಹೋಲ್ ಇರಬೇಕಿತ್ತು. ಆದರೆ, ಇದು ತನ್ನ ಜಾಗದಲ್ಲಿಲ್ಲ.


ಪ್ರತಿಯೊಂದು ಆಕಾಶಗಂಗೆಗಳಲ್ಲಿ ಕಪ್ಪುಕುಳಿಗಳಿವೆ
ಪ್ರತಿಯೊಂದು ಆಕಾಶಗಂಗೆಯ ಮಧ್ಯಭಾಗದಲ್ಲೊಂದು ವಿಶಾಲ ಗಾತ್ರದ ಕಪ್ಪು ಕುಳಿ ಇರುತ್ತದೆ (Supermassive Black Hole). ಇವುಗಳ ದ್ರವ್ಯರಾಶಿ ನಮ್ಮ ಸೂರ್ಯನಿಗಿಂತ ಕೋಟಿ- ಶತಕೋಟಿ ಪಟ್ಟು ಹೆಚ್ಚಾಗಿರುತ್ತದೆ. ಈ ನಕ್ಷತ್ರಪುಂಜವು ಬ್ರಹ್ಮಾಂಡದ ಅತಿದೊಡ್ಡ ಕಪ್ಪು ಕುಳಿಗಳಲ್ಲಿ ಒಂದನ್ನು ಹೊಂದಿರಬೇಕು ಎಂದು ಖಗೋಳಶಾಸ್ತ್ರಜ್ಞರು ನಂಬುತ್ತಾರೆ.  


1999 ಮತ್ತು 2004 ರಲ್ಲಿ ಚಂದ್ರನ ಮೇಲ್ಮೈಯಿಂದ ಪಡೆಯಲಾಗಿರುವ ಮಾಹಿತಿಯಆಧಾರದ ಮೇಲೆ ಹುಡುಕಾಟವನ್ನು ಪ್ರಾರಂಭಿಸಲಾಗಿದೆ. ಕಪ್ಪುಕುಳಿಗಳಲ್ಲಿ ಬಿದ್ದ ಕಾರಣ ಬಿಸಿಯಾದ ಮತ್ತು ಎಕ್ಸ್ ರೇ ಹೊರಸೂಸುತ್ತಿರುವ ಪದಾರ್ಥಗಳ ಹುಡುಕಾಟದಲ್ಲಿ ವಿಜ್ಞಾನಿಗಳು ನಿರತರಾಗಿದ್ದರು. ಆದರೆ, ಅವರಿಗೆ ಇಂತಹ ಯಾವುದೇ ಪದಾರ್ಥ ದೊರೆತಿಲ್ಲ.


ಎರಡು ಕಪ್ಪು ಕುಳಿಗಳ ಒಂದುಗೂಡುವಿಕೆಯಿಂದ ನಿರ್ಮಾಣಗೊಂಡ ದೊಡ್ಡ ಬ್ಲಾಕ್ ಹೋಲ್
2018 ರಲ್ಲಿ, ಮಿಚಿಗನ್ ವಿಶ್ವವಿದ್ಯಾಲಯದ ಕೀಹ್ನ್ ಗುಲ್ಟೆಕಿನ್ ತಂಡವು ಗ್ಯಾಲಕ್ಸಿ ಕೇಂದ್ರದಲ್ಲಿ ಕಪ್ಪು ಕುಳಿಗಳ ಸಾಧ್ಯತೆಗಳ ಮೇಲೆ ನಿಗಾವಹಿಸಲು ಆರಂಭಿಸಿತು. ಎರಡು ಗೆಲಕ್ಸಿಗಳು ಒಂದಕ್ಕೊಂದು ಸೇರಿಕೊಂಡು ಒಂದು ಸೂಪರ್ ಮ್ಯಾಸಿವ್ ಗ್ಯಾಲಕ್ಸಿಯನ್ನು ರೂಪಿಸಿವೆ ಎಂಬುದನ್ನು ಅವರು ಪತ್ತೆಹಚ್ಚಿದ್ದಾರೆ. ಅಂತಹ ಘಟನೆ ಸಂಭವಿಸಿದಾಗ, ಅದು ಗುರುತ್ವಾಕರ್ಷಣೆಯ ಅಲೆಗಳನ್ನು ಉತ್ಪಾದಿಸುತ್ತದೆ.


ಇದನ್ನು ಓದಿ- Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್


ಈ ಗುರುತ್ವಾಕರ್ಷಣ ಅಲೆಗಳು ಒಂದೇ ದಿಕ್ಕಿನಲ್ಲಿದ್ದರೆ, ಕಪ್ಪು ಕುಳಿ ಕೇಂದ್ರ ಸ್ಥಾನದಿಂದ ದೂರ ಸರಿಯುತ್ತದೆ. ಇದನ್ನು Recoiling Black Hole ಪ್ರಕ್ರಿಯೆ ಎಂದು ಕರೆಯಲಾಗುತ್ತದೆ.


ಇದನ್ನು ಓದಿ- ಎಚ್ಚರ..ಎಚ್ಚರ..! ಭಾನುವಾರ ಭುವಿಯ ಸನಿಹಕ್ಕೆ ಬರಲಿದೆ ಅತಿದೊಡ್ಡ ಕ್ಷುದ್ರಗ್ರಹ..!


ಆಕಾಶದಲ್ಲಿ ನಿಗೂಢವಾಗಿ ಸಂಚರಿಸುತ್ತಿದೆ ಈ ಬ್ಲಾಕ್ ಹೋಲ್
ಇತ್ತೀಚೆಗಷ್ಟೇ ವಿಜ್ಞಾನಿಗಳು Recoiling Black Hole ಕುರಿತು ಪತ್ತೆಹಚ್ಚಿದ್ದರು. ಆದರೆ, ಇದುವರೆಗೆ ವಿಜ್ಞಾನಿಗಳು ಅದರ ನಿಶ್ಚಿತ ಜಾಗವನ್ನು ಪತ್ತೆಹಚ್ಚಿಲ್ಲ. ಕೇಂದ್ರ ಸ್ಥಾನದಿಂದ ಹೊರಬಂದ ಬಳಿಕ ಇದು ಆಕಾಶದಲ್ಲಿ ನಿಗೂಢವಾಗಿ ಸಂಚರಿಸುತ್ತಿದೆ ಎನ್ನಲಾಗುತ್ತಿದೆ. . Abell 2261 ಗ್ಯಾಲಕ್ಸಿಯಲ್ಲಿಯೂ ಕೂಡ ಇಂತಹ ಬ್ಲಾಕ್ ಹೋಲ್ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ.


ಇದನ್ನು ಓದಿ- ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA


ಹಬಲ್ ಮತ್ತು ಸುಬಾರು ಆಪ್ಟಿಕಲ್ ಅವಲೋಕನಗಳಲ್ಲಿ ಗ್ಯಾಲಕ್ಸಿಯ ಕೋರ್ ಕಂಡುಬಂದಿದೆ, ಅದರೊಳಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ನಕ್ಷತ್ರಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಈ ಗ್ಯಾಲಕ್ಸಿ ಗಾತ್ರಕ್ಕೆ ಅನುಗುಣವಾಗಿ ಇದನ್ನು ಸಾಮಾನ್ಯ ಎಂದು ಭಾವಿಸಲಾಗುತ್ತಿಲ್ಲ.


ಇದನ್ನು ಓದಿ- ಎಚ್ಚರ! ಭೂಮಿ ಬಗ್ಗೆ ಹೊಸ ಭವಿಷ್ಯ ನುಡಿದ ನಾಸಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.