Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್

UAE, China And NASA Race To Mars - ಯುನೈಟೆಡ್ ಅರಬ್ ಎಮಿರೇಟ್ಸ್ ನ ಹೋಪ್ ಆರ್ಬಿಟರ್, ನಾಸಾದ ರೋವರ್ ಹಾಗೂ ಚೀನಾದ ತಿಯಾನ್ ವೆನ್-1 ಮಂಗಳನ ಕಕ್ಷೆಗೆ ಪ್ರವೇಶಿಸಲಿವೆ. ಮಂಗಳನ ಅಂಗಳದಲ್ಲಿ ಜೀವನದ ಸಂಕೇತಗಳ ಹುಡುಕಾಟ ಈ ಮೂರೂ ಮಿಷನ್ ಗಳ ಪ್ರಮುಖ ಉದ್ದೇಶವಾಗಿದೆ. ಈ ಮೂರೂ ಬಾಹ್ಯಾಕಾಶ ಚಟುವಟಿಕೆಗಳ ಮೇಲೆ ವಿಜ್ಞಾನಿಗಳು ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

Written by - Nitin Tabib | Last Updated : Jan 6, 2021, 11:49 AM IST
  • ಬಾಹ್ಯಾಕಾಶ ವಿಜ್ಞಾನಕ್ಕೆ ಫೆಬ್ರುವರಿ ತಿಂಗಳು ಕುತೂಹಲಕಾರಿಯಾಗಿದೆ.
  • ಫೆವ್ರುವರಿ ತಿಂಗಳಿನಲ್ಲಿ ಒಟ್ಟು ಮೂರು ಅಂತರಿಕ್ಷಯಾನಗಳು ಮಂಗಳನ ಕಕ್ಷೆಗೆ ಸೇರಲಿವೆ.
  • ಮಂಗಳನ ಅಂಗಳದಲ್ಲಿ ಜೀವನದ ಅಸ್ತಿತ್ವ ಹುಡುಕಾಟ ಈ ಮೂರು ಮಿಷನ್ ಗಳ ಮುಖ್ಯ ಉದ್ದೇಶ.
Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್  title=
UAE, NASA And China Race To Mars (File Photo)

ನವದೆಹಲಿ: UAE, China And NASA Race To Mars - ಬಾಹ್ಯಾಕಾಶ ವಿಜ್ಞಾನದ ವಿಷಯದಲ್ಲಿ ಮುಂಬರುವ ತಿಂಗಳು ತುಂಬಾ ಕುತೂಹಲಕಾರಿ ಹಾಗೂ ಹಲವು ಪ್ರಮುಖ ಚಟುವಟಿಕೆಗಳಿಂದ ಕೂಡಿರಲಿದೆ ಏಕೆಂದರೆ, ಒಂದಲ್ಲ , ಎರಡಲ್ಲ ಒತ್ತು ಮೂರು ಬಾಹ್ಯಾಕಾಶ ನೌಕೆಗಳು ಮಂಗಳನ ಕಕ್ಷೆಯನ್ನು ಪ್ರವೇಶಿಸಲಿವೆ. ಇವುಗಳಲ್ಲಿ UAE ದೇಶದ ಹೋಪ್ ಆರ್ಬಿಟರ್, NASAದ ರೋವರ್ ಹಾಗೂ ಚೀನಾ ದೇಶದ ತಿಯಾನ್ವೇನ್-1 ಶಾಮೀಲಾಗಿವೆ. ಈ ಮೂವರ ಉದ್ದೇಶ ಒಂದೇ ಆಗಿದೆ. ಅಂದರೆ, ಮಂಗಳನ ಅಂಗಳದಲ್ಲಿ ಜೀವನದ ಸಂಕೇತಗಳನ್ನು ಪತ್ತೆಹಚ್ಚುವುದು ಈ ಈ ಮೂರು ನೌಕೆಗಳ ಪ್ರಮುಖ ಉದ್ದೇಶವಾಗಿದೆ. ಖಗೋಳ ವಿಜ್ಞಾನಿಗಳು ಈ ಮೂರು ನೌಕೆಗಳ ಚಟುವಟಿಕೆಗಳ ಮೇಲೆ ತಮ್ಮ ಗಮನ ಕೆಂದ್ರೀಕರಿಸಿದ್ದಾರೆ. ಈ ಎಲ್ಲ ನೌಕೆಗಳು ಫೆಬ್ರುವರಿ ತಿಂಗಳಿನಲ್ಲಿ ಮಂಗಳನ ಕಕ್ಷೆಗೆ ಪ್ರವೇಶ ಪಡೆಯಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.

ಸೌದಿ ಅರಬ್ ದೇಶದ 'Hope'
ಸಂಯುಕ್ತ ಅರಬ್ ಎಮಿರೇಟ್ಸ್ (UAE) ದೇಶದ ಹೋಪ್ ಆರ್ಬಿತರ್ ಎಲ್ಲಕ್ಕಿಂತ ಮೊದಲು ಮಂಗಳನ ಕಕ್ಷೆ ಸೇರಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. UAEಯ ಈ ಬಾಹ್ಯಾಕಾಶ ಅಭಿಯಾನದಿಂದ ಸಾಕಷ್ಟು ನಿರೀಕ್ಷೆಗಳಿವೆ. ಏಕೆಂದರೆ ಯಾವುದೇ ಒಂದು ಮುಸ್ಲಿಂ ರಾಷ್ಟ್ರದ ಮೊದಲ ಮಿಷನ್ ಮಂಗಲ್ ಇದಾಗಿದೆ. ಕಳೆದ ವರ್ಷ ಜುಲೈ 20 ರಂದು ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ H2-A ಹೆಸರಿನ ರಾಕೆಟ್ ಸಹಾಯದಿಂದ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಬಿಡಲಾಗಿದೆ. ಇದು ಫೆಬ್ರುವರಿ 9 ರಂದು ಮಂಗಳನ ಕಕ್ಷೆಗೆ ಪ್ರವೇಶಿಸುವ ಸಾಧ್ಯತೆ ವರ್ತಿಸಲಾಗಿದೆ. ಅಷ್ಟೇ ಅಲ್ಲ ಫೆಬ್ರುವರಿ 9 ರಂದು ಸಂಯುಕ್ತ ಅರಬ್ ಎಮಿರೇಟ್ಸ್ ಸ್ಥಾಪನೆಗೊಂಡು 50 ವರ್ಷ ಪೂರ್ಣಗೊಳ್ಳಲಿರುವ ಕಾರಣ ಈ ದಿನಾಂಕ ಭಾರಿ ಮಹತ್ವ ಪಡೆದುಕೊಂಡಿದೆ. ಮಂಗಳನ ಮೇಲ್ಮೈ ಮೇಲೆ ತಲುಪಿದ ಬಳಿಕ ಹೋಪ್ ಮಂಗಳನ ಅಂಗಳದಲ್ಲಿನ ವಾತಾವರಣ ಹಾಗೂ ಜಲವಾಯು ಅಧ್ಯಯನ ನಡೆಸಲಿದೆ. ಮಂಗಳ ಗ್ರಹದಲ್ಲಿನ ಕೆಳಮಟ್ಟದ ವಾತಾವರಣವನ್ನು ಅಳೆಯಲು ಇದರಲ್ಲಿ ಸ್ಪೆಕ್ಟ್ರೋಮೀಟರ್ ಅಳವಡಿಸಲಾಗಿದೆ.

ಇದನ್ನು ಓದಿ- NASA ಬಿಡುಗಡೆ ಮಾಡಿರುವ ಮಂಗಳ ಗ್ರಹದ ಹೊಸ ಚಿತ್ರದಲ್ಲಿ ಏಲಿಯನ್!

ಮಂಗಳನ ಅಂಗಳದಲ್ಲಿ ಚೀನಾ ಮೊದಲ ಹೆಜ್ಜೆ
UAE ಬಳಿಕ ಚೀನಾ ದೇಶದ ತಿಯಾನ್ವೇನ್-1 ಮಂಗಳನ ಕಕ್ಷೆಗೆ ಪ್ರವೇಶಿಸಲಿದೆ. ಫೆಬ್ರುವರಿ 10 ರಂದು ಇದು ಮಂಗಳನ ಕಕ್ಷೆಗೆ ಪ್ರವೇಶಿಸುವ ನಿರೀಕ್ಷೆ ವರ್ತಿಸಲಾಗಿದೆ. ಇದೊಂದು ಲಾಂಗ್ ಮಾರ್ಚ್ ಫೈವ್ ರಾಕೆಟ್ ಆಗಿದ್ದು, ಇದನ್ನು ಕಳೆದ ವರ್ಷ ಹೈನಾನ್ ದ್ವೀಪದಿಂದ ಉಡಾವಣೆಗೊಂಡಿತ್ತು. ಚೈನೀಸ್ ಭಾಷೆಯಲ್ಲಿ ತಿಯಾನ್ವೇನ್ ಎಂದರೆ 'ಸ್ವರ್ಗದ ಸವಾಲುಗಳು' ಎಂದರ್ಥ. ಅಂದರೆ, ಚೀನಾದ ತಿಯಾನ್ವೇನ್-1 ಉದ್ದೇಶ ಬಾಹ್ಯಾಕಾಶದ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ಆಗಿದೆ. ಮಂಗಳ ಗ್ರಹವನ್ನು ಸುತ್ತುವರೆಯುವುದು, ಗ್ರಹದಲ್ಲಿ ಇಳಿಯುವುದು ಹಾಗೂ ಅಲ್ಲಿ ರೋವರ್ ಇಳಿಸುವುದು ಇದರ ಪ್ರಮುಖ ಚಟುವಟಿಕೆಗಳಾಗಿರಲಿವೆ. ಚೀನಾ ಅಕಾಡೆಮಿ ಆಫ್ ಸ್ಪೇಸ್ ಟೆಕ್ನಾಲಜಿ ಪ್ರಕಾರ ಪ್ರಸ್ತುತ ಇದು ಸುಮಾರು 23 ಕಿ.ಮೀ ಪ್ರತಿ ಸೆಕೆಂಡ್ ವೇಗದಲ್ಲಿ ಮಂಗಳನತ್ತ ಧಾವಿಸುತ್ತಿದೆ. ಅಂದರೆ, ನಿತ್ಯ ಸುಮಾರು ಎರಡು ಮಿಲಿಯನ್ ಕಿ.ಮೀ. ಮಂಗಳ ಗ್ರಹಕ್ಕೆ ಚೀನಾ ದೇಶದ ಇದು ಮೊದಲ ಮಿಷನ್ ಆಗಿರಲಿದೆ.

ಇದನ್ನು ಓದಿ-ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ

NASA ರೋವರ್
ತಿಯಾನ್ವೇನ್-1 ರ ಬಳಿಕ NASA ರೋವರ್ ಮಂಗಳನ ಕಕ್ಷೆಗೆ ಪ್ರವೇಶಿಸಲಿದೆ. ಫೆಬ್ರುವರಿ 18ರಂದು ಇದು ಅಲ್ಲಿಗೆ ತಲುಪುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. NASAದ ಈ ಮಿಶನ್ ಅನ್ನು ಜುಲೈ 2020ರಲ್ಲಿ ಕೇಪ್ ಕೆನ್ವಿರಾಲ್ ಬಾಹ್ಯಾಕಾಶ ಕೇಂದ್ರದಿಂದ ಉದಾಯಿಸಲಾಗಿದೆ. ಮಿಷನ್ ಉದ್ದೇಶ, ಮಂಗಳನ ಮೇಲ್ಮೈ ಮೇಲೆ ರೋವರ್ ವೆಹಿಕಲ್ ಇಳಿಕೆಯಾಗಿದೆ. ನಂತರ Jezero Crater ಸೈಟ್ ಗಳ ಅನ್ವೇಷಣೆ ಇದು ನಡೆಸಲಿದೆ. ಇದು ಕೂಡ ಜೀವನದ ಸಂಕೇತ ಹುಡುಕಾಟದ ಒಂದು ಭಾಗವಾಗಿದೆ. ಈ ಕುರಿತು ಹೇಳಿಕೆ ನೀಡಿರುವ NASA ಸುಮಾರು 40 ಬಂಡೆಗಳ ಹಾಗೂ ಎಣ್ಣೆಯ ನಮೂನೆಗಳನ್ನು ಸಂಗ್ರಹಿಸಲಾಗುವುದು ಎಂದಿದೆ. ಬಳಿಕ ಬೇರೊಂದು ಮಿಷನ್ ಸಹಾಯದಿಂದ ಅವುಗಳನ್ನು ಭೂಮಿಗೆ ತರಲು ಟ್ಯೂಬ್ ಗಳನ್ನು ರಚಿಸಲಾಗುವುದು ಎಂದಿದೆ.

ಇದನ್ನು ಓದಿ- NASA ದಿಂದ ಐತಿಹಾಸಿಕ ಮಾನವ ಮಿಶನ್ ಉಡಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News