ನವದೆಹಲಿ : ಇದು ಕರೋನಾಯುಗ. ಮನೆಯಿಂದ ಹೊರಗೆ ಹೋಗಲು ಎಲ್ಲರೂ ಹೆದರುತ್ತಾರೆ. ಹೀಗಿರುವಾಗ ಮನೆಯಲ್ಲಿದ್ದುಕೊಂಡೇ ನಿಮ್ಮ ಹಳೆಯ ಸ್ಮಾರ್ಟ್‍ಫೋನ್ (Old smartphone) , ಟೀವಿ ಇತ್ಯಾದಿ ಒಳ್ಳೆಯ ರೇಟಿಗೆ ಮಾರಿ ಬಿಡಬಹುದು. ಅಂಥಹ ಕೆಲವು ವೆಬ್ ಸೈಟ್ ಗಳ (Website) ಬಗ್ಗೆ ನಾವಿಂದು ಹೇಳುತ್ತೇವೆ. ಈ ಸೈಟ್ ಗಳಲ್ಲಿ ಫೋನ್ ಅಲ್ಲದೆ, ಟೀವಿ, ಲ್ಯಾಪ್ ಟಾಪ್ ಇತ್ಯಾದಿ ಗಜೆಟ್ ಗಳನ್ನೂ ಸೇಲ್ ಮಾಡಬಹುದು. ಅಂಥಹ ವೆಬ್ ಸೈಟ್ ಗಳು ಇಲ್ಲಿವೆ


COMMERCIAL BREAK
SCROLL TO CONTINUE READING

1. ಕ್ಯಾಶಿಫೈ www.cashify.in
www.cashify.in  ಈ ವೆಬ್‍ಸೈಟಿನಲ್ಲಿ ಫೋನಿಗೆ ಉತ್ತಮ ಬೆಲೆ ಸಿಗುತ್ತದೆ.  ಬೇರೆ ಸೈಟ್ ಗೆ ಹೋಲಿಸಿದರೆ ಈ ಸೈಟಿನಲ್ಲಿ ನಿಮ ವಸ್ತುವಿಗೆ ಉತ್ತಮ ಬೆಲೆ ಸಿಗುತ್ತದೆ. www.cashify.inಗೆ ಲಾಗಿಇನ್ ಆಗಿ ನಿಮ್ಮ ಹಳೆಯ ಟೀವಿ, ಲ್ಯಾಪ್ ಟಾಪ್ (laptop) , ಮೊಬೈಲ್ ಇತ್ಯಾದಿ ಮಾರಾಟ ಮಾಡಬಹುದು. 


ಇದನ್ನೂ ಓದಿ : Whatsapp, Facebook ಗೆ ನೋಟಿಸ್ ನೀಡಿದ 'ದೆಹಲಿ ಹೈಕೋರ್ಟ್'..!


2. ಕರ್ಮ ರಿಸೈಕ್ಲಿಂಗ್  www.karmarecycling.in 
www.karmarecycling.in ಇಲ್ಲಿಯೂ ಕೂಡಾ ನೀವು ನಿಮ್ಮ ಹಳೆಯ, ಹಾಳಾದ ಸ್ಮಾರ್ಟ್‍ಫೋನ್ (smartphone) ಸೇಲ್ ಮಾಡಬಹುದು. ಕರ್ಮ ರಿಸೈಕ್ಲಿಂಗ್ ಇದುವರೆಗೆ ಮೂರು ಲಕ್ಷದ 60 ಸಾವಿರ ಗ್ಯಾಜೆಟ್‍ಗಳನ್ನು (Gadget) ಖರೀದಿಸಿದೆ. 15 ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ.


3.ಇನ್‍ಸ್ಟಾಕ್ಯಾಶ್ getinstacash.in
getinstacash.in ಈ ಸೈಟಿನಲ್ಲೂ ಸುಲಭದಲ್ಲಿ ನಿಮ್ಮ ಹಳೆಯ ಗ್ಯಾಜೆಟ್ ಸೇಲ್ ಮಾಡಿಬಿಡಬಹುದು. ಒಳ್ಳೆಯ ರೇಟೂ ಸಿಗುತ್ತೆ ಬಿಡಿ. ಬುಕಿಂಗ್ ಮಾಡಿದ ತಕ್ಷಣ ಕಂಪನಿ ಹುಡುಗ ನಿಮ್ಮ ಮನೆಗೆ ಬಂದು ಫೋನ್ (phone) ತೆಗೆದುಕೊಂಡು ಹೋಗುತ್ತಾನೆ. ಒಳ್ಳೆಯ ರೇಟೂ ಸಿಗುತ್ತೆ. ಒಂದು ನಿಮಿಷದಲ್ಲಿ ನಿಮ್ಮ ಫೋನ್ ಸೇಲ್ ಮಾಡಿ ಬಿಡಬಹುದು ಎಂದು ಕಂಪನಿ ಹೇಳಿಕೊಳ್ಳುತ್ತಿದೆ. 


ಇದನ್ನೂ ಓದಿ : Infinix Hot 10S- 6000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ಹಾಟ್ 10 ಎಸ್


4. ಯಂತ್ರ www.yaantra.com
www.yaantra.com ಸೈಟಿನಲ್ಲೂ ನಿಮ್ಮ ಹಳೆಯ ಫೋನ್, ಗ್ಯಾಜೇಟ್ ಮಾರಿ ಬಿಡಬಹುದು. ಒಳ್ಳೆಯ ರೇಟ್ ಕೂಡಾ ಸಿಗುತ್ತದೆ.  60 ಸೆಕೆಂಡಿನಲ್ಲಿ ಹಳೆಯ ಫೋನ್ ಮಾರಿಬಿಡಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.