ವಾಟ್ಸಾಪ್ ಹೊಸ ವೈಶಿಷ್ಟ್ಯ : ಪ್ರಪಂಚದಾದ್ಯಂತದ ಬಳಕೆದಾರರ ಹೃದಯವನ್ನು ಗೆದ್ದಿರುವ ವಾಟ್ಸಾಪ್ ಬಳಕೆದಾರರ ಬಹು ದಿನಗಳ ಬೇಡಿಕೆ ಆಗಿದ್ದ ಹೊಸ ಫೀಚರ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ವಾಟ್ಸಾಪ್ ಹೊಸ ವೈಶಿಷ್ಟ್ಯವು ನಿಮ್ಮ  ಆನ್‌ಲೈನ್ ಸ್ಟೇಟಸ್ ಅನ್ನು ಮರೆಮಾಡಲು ಸಹಕಾರಿ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವೈಶಿಷ್ಟದ ವಿಶೇಷತೆ ಏನು? ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಏನಿದು ವಾಟ್ಸಾಪ್ ಹೊಸ ಫೀಚರ್?
ವಾಟ್ಸಾಪ್ ಶೀಘ್ರದಲ್ಲೇ ಬಳಕೆದಾರರು ತಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ.  WABetaInfo ಈ ವೈಶಿಷ್ಟ್ಯದ ಬಗ್ಗೆ ಮಾಹಿತಿ ನೀಡಿದೆ. ಅದಾಗ್ಯೂ, ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿ- ಬಜೆಟ್ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೋ, ಇಲ್ಲಿದೆ ಇದರ ವೈಶಿಷ್ಟ್ಯ


ಈ ಹೊಸ ಫ್ಯೂಚರ್ ಸಹಾಯದಿಂದ ಬಳಕೆದಾರರು ಯಾವಾಗ ಬೇಕಾದರೂ ಯಾರಿಗಾದರೂ ಸಂದೇಶವನ್ನು ಕಳುಹಿಸಬಹುದು. ಇದರ ವಿಶೇಷತೆ ಎಂದರೆ ನೀವು  ಆನ್‌ಲೈನ್‌ನಲ್ಲಿದ್ದೀರಾ ಅಥವಾ ಇಲ್ಲವೇ ಎಂದು ಬೇರೆಯವರಿಗೆ ತಿಳಿಯುವುದಿಲ್ಲ. ವಾಟ್ಸಾಪ್‌ನಲ್ಲಿ ಸ್ವಲ್ಪ ಸಮಯದವರೆಗೆ ಪ್ರೊಫೈಲ್ ಫೋಟೋ, ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಅನ್ನು ಮರೆಮಾಡುವ ಆಯ್ಕೆ ಲಭ್ಯವಿದೆ. ಆದರೆ, ಆನ್‌ಲೈನ್ ಸ್ಥಿತಿಯನ್ನು ಮರೆಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಈ ವೈಶಿಷ್ಟ್ಯವೂ ಲಭ್ಯವಾಗಲಿದೆ. 


ಇದನ್ನೂ ಓದಿ- BSNL ತಂದಿದೆ 19 ರೂಪಾಯಿಯ ರಿಚಾರ್ಜ್ ಪ್ಲಾನ್ .! Jio-Airtel ಗ್ರಾಹಕರಿಗೆ ನಷ್ಟ


ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ?
ಈ ವೈಶಿಷ್ಟ್ಯವನ್ನು ವಾಟ್ಸಾಪ್‌ನ 2.22.16.12 Android ಬೀಟಾ ಆವೃತ್ತಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. WABetaInfo ತನ್ನ ವರದಿಯಲ್ಲಿ ಅದರ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದೆ. 


* ಈ ವೈಶಿಷ್ಟ್ಯವನ್ನು ಬಳಸಲು, ನೀವು ನಿಮ್ಮ ಫೋನ್‌ನಲ್ಲಿ ವಾಟ್ಸಾಪ್ ಅನ್ನು ತೆರೆಯಬೇಕು.
* ಅದರ ಸೆಟ್ಟಿಂಗ್‌ಗಳಿಗೆ ಹೋಗಿ, ನಂತರ 'ಅಕೌಂಟ್' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ 'ಗೌಪ್ಯತೆ' ನಲ್ಲಿ ನೀವು 'ಕೊನೆಯದಾಗಿ ನೋಡಿದ ಮತ್ತು ಆನ್‌ಲೈನ್' ಎಂಬ ಆಯ್ಕೆಯನ್ನು ನೋಡುತ್ತೀರಿ. 
* ಅದನ್ನು ಆಯ್ಕೆ ಮಾಡುವ ಮೂಲಕ, ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.