BSNL ತಂದಿದೆ 19 ರೂಪಾಯಿಯ ರಿಚಾರ್ಜ್ ಪ್ಲಾನ್ .! Jio-Airtel ಗ್ರಾಹಕರಿಗೆ ನಷ್ಟ

ಕಳೆದ ವರ್ಷ, ಎಲ್ಲಾ ಮೂರು ಕಂಪನಿಗಳು ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಈ ಕಂಪನಿಗಳ ಅಗ್ಗದ ಯೋಜನೆಗಳು ಈಗ ದುಬಾರಿಯಾಗಿವೆ. ಈಗ ಇದರ ಲಾಭವನ್ನು  BSNL ಪಡೆದುಕೊಂಡಿದೆ.

Written by - Ranjitha R K | Last Updated : Jul 25, 2022, 11:49 AM IST
  • BSNL 19 ಪ್ರಿಪೇಯ್ಡ್ ಯೋಜನೆ
  • ಒಂದು ತಿಂಗಳ ಮಾನ್ಯತೆಯನ್ನು ಹೊಂದಿರುತ್ತದೆ
  • ಕರೆಯ ದರವು 20 ಪೈಸೆಗೆ ಇಳಿಯುತ್ತದೆ.
BSNL ತಂದಿದೆ  19 ರೂಪಾಯಿಯ ರಿಚಾರ್ಜ್ ಪ್ಲಾನ್ .! Jio-Airtel ಗ್ರಾಹಕರಿಗೆ ನಷ್ಟ  title=
BSNL Recharge plan (file photo)

ಬೆಂಗಳೂರು : ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ತಮ್ಮ ಬಳಕೆದಾರರಿಗೆ ಅನೇಕ ಕೈಗೆಟುಕುವ ಯೋಜನೆಗಳನ್ನು ನೀಡುತ್ತವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಕಾರಣದಿಂದಾಗಿ ಈ ಯೋಜನೆಗಳು ಜನಪ್ರಿಯವಾಗಿವೆ. ಆದರೆ ಕಳೆದ ವರ್ಷ, ಎಲ್ಲಾ ಮೂರು ಕಂಪನಿಗಳು ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಈ ಕಂಪನಿಗಳ ಅಗ್ಗದ ಯೋಜನೆಗಳು ಈಗ ದುಬಾರಿಯಾಗಿವೆ. ಈಗ ಇದರ ಲಾಭವನ್ನು  BSNL ಪಡೆದುಕೊಂಡಿದೆ. BSNL ಸದ್ದಿಲ್ಲದೆ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. 

BSNL 19 ಪ್ರಿಪೇಯ್ಡ್ ಯೋಜನೆ :
BSNLನ 19 ರೂ ಪ್ರಿಪೇಯ್ಡ್ ಪ್ಲಾನ್‌ನ ವಿಶೇಷವೆಂದರೆ ಅದು 30 ದಿನಗಳ ಅಂದರೆ ಒಂದು ತಿಂಗಳ ಮಾನ್ಯತೆಯನ್ನು ಹೊಂದಿರುತ್ತದೆ. ಈ ರೀಚಾರ್ಜ್ ಮಾಡಿದ ನಂತರ, ಕರೆಯ ದರವು 20 ಪೈಸೆಗೆ ಇಳಿಯುತ್ತದೆ. ಈ ಯೋಜನೆಯನ್ನು ತೆಗೆದುಕೊಂಡ ನಂತರ,  ಮತ್ತೆ ಯಾವುದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ. 

ಇದನ್ನೂ ಓದಿ : ಕೇವಲ ಐದು ಕಪ್ ನೀರು ಬಳಸಿ 80 ಸೆಕೆಂಡ್ ಗಳಲ್ಲಿ ಬಟ್ಟೆಗೆ ಹೊಳಪು ನೀಡುತ್ತದೆ ಈ ವಾಷಿಂಗ್ ಮೆಷಿನ್

BSNL 75 ಪ್ರಿಪೇಯ್ಡ್ ಯೋಜನೆ :
BSNLನ ಈ ಯೋಜನೆಯು ಸಾಕಷ್ಟು ಜನಪ್ರಿಯವಾಗಿದೆ. ಇದು ಹೆಚ್ಚು ಬಳಕೆದಾರು ಉಪಯೋಗಿಸುತ್ತಿದ್ದಾರೆ. ಈ ಯೋಜನೆಯಲ್ಲಿ, ಇಡೀ ತಿಂಗಳು 200 ನಿಮಿಷಗಳ ಟಾಕ್ ಟೈಮ್ ಇರುತ್ತದೆ. ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಕೂಡಾ ಇದರಲ್ಲಿ ಮಾಡಬಹುದು. ಇಷ್ಟೇ ಅಲ್ಲ, ಈ ಯೋಜನೆಯಲ್ಲಿ 2GB ಡೇಟಾ ಕೂಡ ಲಭ್ಯವಿದೆ. ಆದರೆ ಈ ಯೋಜನೆಯಲ್ಲಿ SMS ಸೌಲಭ್ಯ ಇರುವುದಿಲ್ಲ.

BSNL 147 ಪ್ರಿಪೇಯ್ಡ್ ಯೋಜನೆ : 
ಈ ಯೋಜನೆಯು ಇಡೀ ತಿಂಗಳು ಬರುತ್ತದೆ. ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ಡೇಟಾ ಸಹ ಲಭ್ಯವಿದೆ. ಈ ಯೋಜನೆಯ ಮಾನ್ಯತೆ 30 ದಿನಗಳು ಮತ್ತು 10GB ಡೇಟಾ ಸಿಗುತ್ತದೆ. ಉಚಿತ BSNL ಟ್ಯೂನ್‌ಗಳು ಸಹ ಇದರಲ್ಲಿ ಲಭ್ಯವಿದೆ. 

ಇದನ್ನೂ ಓದಿ : Flipkart Big Saving Days: ಕೇವಲ 700 ರೂ.ಗೆ Nokia ಸ್ಮಾರ್ಟ್ ಟಿವಿ ಖರೀದಿಸಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News