Shocking News: ಉಬರ್ಗೆ ಕರೆ ಮಾಡಿ 5 ಲಕ್ಷ ಕಳೆದುಕೊಂಡ ವ್ಯಕ್ತಿ!
Uber Customer Care Scam: ಇತ್ತೀಚಿನ ದಿನಗಳಲ್ಲಿ ಪ್ರಯಾಣಕ್ಕಾಗಿ ಸ್ವಂತ ಕಾರ್ ಇಲ್ಲದಿದ್ದರೂ ಪರವಾಗಿಲ್ಲ, ಗಮ್ಯಸ್ಥಾನವನ್ನು ತಲುಪಲು ಪ್ರಸ್ತುತ ಓಲಾ, ಉಬರ್‌ನಂತಹ ಬಾಡಿಕೆ ಟ್ಯಾಕ್ಸಿ ಸೌಲಭ್ಯಗಳು ಲಭ್ಯವಿವೆ. ಆನ್‌ಲೈನ್ ಆಟೋ/ಕಾರ್ ಬುಕ್ ಮಾಡಲು ಈ ಆಪ್ ಗಳು ಅನುವು ಮಾಡಿಕೊಡುತ್ತವೆ. ಆದರೆ, ತಂತ್ರಜ್ಞಾನ ಮುಂದುವರೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
Uber Customer Care Scam: ಪ್ರಸ್ತುತ ಓಲಾ, ಉಬರ್‌ನಂತಹ ಬಾಡಿಕೆ ಟ್ಯಾಕ್ಸಿ, ಆಟೋಗಳು ಸಾರ್ವಜನಿಕರಿಗೆ ಒಂದೆಡೆಯಿಂದ ಮತ್ತೊಂದೆಡೆ ಪ್ರಯಾಣಿಸಲು ತುಂಬಾ ಪ್ರಯೋಜನಕಾರಿ ಆಗಿವೆ. ಆದರೆ, ಈ ಅಪ್ಲಿಕೇಷನ್ ಗಳನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದ ಇರುವುದು ಕೂಡ ಅತ್ಯಗತ್ಯ. ಇಲ್ಲದಿದ್ದರೆ, ನೀವು ಮೋಸ ಹೋಗಬಹುದು. ಇದಕ್ಕೆ ಸಾಕ್ಷಿ ಇತ್ತೀಚೆಗೆ ಮುನ್ನಲೆಗೆ ಬಂದಿರುವ ಉಬರ್ ಕಸ್ಟಮರ್ ಕೇರ್ ಹಗರಣ.
ಹೌದು, ಇತ್ತೀಚಿನ ದಿನಗಳಲ್ಲಿ ಪ್ರಯಾಣಕ್ಕಾಗಿ ಸ್ವಂತ ಕಾರ್ ಇಲ್ಲದಿದ್ದರೂ ಪರವಾಗಿಲ್ಲ, ಗಮ್ಯಸ್ಥಾನವನ್ನು ತಲುಪಲು ಪ್ರಸ್ತುತ ಓಲಾ, ಉಬರ್‌ನಂತಹ ಬಾಡಿಕೆ ಟ್ಯಾಕ್ಸಿ ಸೌಲಭ್ಯಗಳು ಲಭ್ಯವಿವೆ. ಆನ್‌ಲೈನ್ ಆಟೋ/ಕಾರ್ ಬುಕ್ ಮಾಡಲು ಈ ಆಪ್ ಗಳು ಅನುವು ಮಾಡಿಕೊಡುತ್ತವೆ. ಇವುಗಳ ಸಹಾಯದಿಂದ ನೀವು ಅಗತ್ಯವಿದ್ದಾಗ ಕಾರ್/ಆಟೋ ಬುಕ್ ಮಾಡಿ ಪ್ರಯಾಣಿಸಬಹುದು. ಯಾವುದೇ ವಿಷಯದಲ್ಲಿ ಸಮಸ್ಯೆ ಎಂಬುದು ಇದ್ದೇ ಇರುತ್ತದೆ, ಇಂತಹ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದ್ರೂ ಸಹ ನಿಮ್ಮ ಖಾತೆ ಸಂಪೂರ್ಣವಾಗಿ ಖಾಲಿಯಾಗಬಹುದು. ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುನ್ನಲೆಗೆ ಬಂದಿದೆ.
ಏನಿದು ಪ್ರಕರಣ?
ಇತ್ತೀಚೆಗೆ ದೆಹಲಿಯ ಎಸ್‌ಜೆ ಎನ್‌ಕ್ಲೇವ್‌ನ ನಿವಾಸಿ ಪ್ರದೀಪ್ ಚೌಧರಿ, ಗುರುಗ್ರಾಮ್‌ಗೆ ಪ್ರಯಾಣಿಸಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಬುಕ್ಕಿಂಗ್ ಸಮಯದಲ್ಲಿ ಪ್ರಯಾಣ ದರ 205ರೂ. ಎಂದು ತೋರಿಸಲಾಗಿದೆ. ಆದರೆ, ಗಮ್ಯಸ್ಥಾನವನ್ನು ತಲುಪಿದ ನಂತರ ಪ್ರಯಾಣ ದರ 318 ರೂ. ಆಗಿತ್ತು. ಇದರಿಂದ ಗಾಬರಿಗೊಂಡ ಪ್ರಯಾಣಿಕ ಪ್ರದೀಪ್ ಚೌಧರಿ ಉಬರ್ ಗ್ರಾಹಕ ಸಹಾಯಕ್ಕಾಗಿ ಉಬರ್ ಗ್ರಾಹಕ ಸೇವೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ- ಇನ್ಸ್ಟಾಗ್ರಾಮ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಸ್ಟಾನಲ್ಲಿ ಇನ್ಮುಂದೆ ನೀವು ಇದನ್ನೂ ಮಾಡಬಹುದು!
ಪ್ರದೀಪ್ ಚೌಧರಿ ಅವರು ನೀಡಿರುವ ದೂರಿನನ್ವಯ, ಮರುಪಾವತಿಗಾಗಿ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸುವಂತೆ ಉಬರ್ ಚಾಲಕ ಸಲಹೆ ನೀಡಿದ್ದಾನೆ. ಈ ಸಂದರ್ಭದಲ್ಲಿ ಗೂಗಲ್ ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನು ಪಡೆದ ಇವರು ಗೂಗಲ್‌ನಿಂದ '6289339056' ಸಂಖ್ಯೆಯನ್ನು ಪಡೆದು ಈ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ಕರೆ ಮಿಶ್ರಾ ಎಂಬುವವರಿಗೆ '9832459993' ಗೆ ಮರುನಿರ್ದೇಶಿಸಲಾಗಿದೆ.
ಬಳಿಕ ಮಿಶ್ರಾ ಎಂಬುವರೊಂದಿಗೆ ಕರೆಯಲ್ಲಿ ಮಾತನಾಡಿದ ಸಂತ್ರಸ್ತ ಪ್ರದೀಪ್ ಚೌಧರಿ ಅವರಿಗೆ, ಗೂಗಲ್ ಪ್ಲೇ ಸ್ಟೋರ್‌ನಿಂದ 'ರಸ್ಟ್ ಡೆಸ್ಕ್ ಆ್ಯಪ್' ಅನ್ನು ಡೌನ್‌ಲೋಡ್ ಮಾಡಲು ಸೂಚಿಸಲಾಗಿದೆ. ಸೂಚನೆಯನ್ವಯ ಪ್ರದೀಪ್ ರಸ್ಟ್ ಡೆಸ್ಕ್ ಆ್ಯಪ್' ಅನ್ನು ಡೌನ್‌ಲೋಡ್ ಮಾಡಿ ಆ್ಯಪ್ ಓಪನ್ ಮಾಡಿದ್ದಾರೆ. ಇದರಲ್ಲಿ ಅವರ ಫೋನ್‌ಗೆ ನಕಲಿ ಮರುಪಾವತಿ ಸಂದೇಶವನ್ನು ಕಳುಹಿಸಲಾಗಿದ್ದು 112 ರೂಪಾಯಿ ಮರುಪಾವತಿ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಇನ್ನೂ ಮರುಪಾವತಿಗಾಗಿ ಖಾತೆ ಪರಿಶೀಲನೆ ಉದ್ದೇಶಕ್ಕಾಗಿ ಫೋನ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗಿದ್ದು ಅದನ್ನು ತಿಳಿಸುವಂತೆ ಮಿಶ್ರಾ ಕೇಳಿದ್ದಾರೆ. ಸೂಚನೆಗಳನ್ನು ಸಂಪೂರ್ಣವಾಗಿ ಅನುಸರಿಸಿದ ನಂತರ, ಸಂತ್ರಸ್ತ ಪ್ರದೀಪ್ ಚೌಧರಿ ಅವರ ಬ್ಯಾಂಕ್ ಖಾತೆಯಿಂದ ಅನಧಿಕೃತ ವಹಿವಾಟು ನಡೆದಿರುವುದು ಕಂಡು ಬಂದಿದ್ದು, ಇದರಲ್ಲಿ ಬರೋಬ್ಬರಿ 5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ- ಹೆಲಿಪ್ಯಾಡ್, ಗೋಲ್ಡನ್ ಬಾತ್ ರೂಂ, ಐಷಾರಾಮಿ ರೂಮ್ಸ್ ಒಳಗೊಂಡ ಈ ಐಷಾರಾಮಿ ಸೂಪರ್‌ಯಾಚ್ ಎಂತಹವರನ್ನೂ ಬೆರಗುಗೊಳಿಸುತ್ತೆ!
ದೂರಿನಲ್ಲಿ ಉಲ್ಲೇಖಿಸಿರುವಂತೆ 3 ವಹಿವಾಟುಗಳನ್ನು ಪೇಟಿಎಂ ಮೂಲಕ ಮಾಡಲಾಗಿದ್ದು, ಉಳಿದ ಒಂದು ವಹಿವಾಟನ್ನು ಪಿಎನ್‌ಬಿ ಬ್ಯಾಂಕ್ ಮೂಲಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಂಚನೆ ಕುರಿತಂತೆ ಪ್ರದೀಪ್ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.