ನವದೆಹಲಿ: ಬಜೆಟ್ ನಂತರ ಮೊಬೈಲ್ ಫೋನ್ ಬಳಕೆದಾರರಿಗೆ ಆಘಾತಕಾರಿ ಸುದ್ದಿ ಎದುರಾಗಿದೆ.  ಟೆಲಿಕಾಂ ಕಂಪನಿ ಈಗ ತನ್ನ  ಯೋಜನೆಗಳನ್ನು ದುಬಾರಿಯಾಗಿಸುತ್ತಿದೆ. Vi ತನ್ನ ಕೆಲವು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ದುಬಾರಿಯನ್ನಾಗಿ ಮಾಡಿದೆ.


COMMERCIAL BREAK
SCROLL TO CONTINUE READING

ಫ್ಯಾಮಿಲಿ ಪೋಸ್ಟ್ ಪೇಯ್ಡ್ ಯೋಜನೆಗಳು ದುಬಾರಿಯಾಗಿದೆ :
ಟೆಕ್ ಸೈಟ್ ಟೆಲಿಕಾಂಟಾಕ್ (Telecomtalk) ಪ್ರಕಾರ, Vi ತನ್ನ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ದರವನ್ನು ಹೆಚ್ಚಿಸಿದೆ. ಮಾಹಿತಿಯ ಪ್ರಕಾರ, 598 ಮತ್ತು 699 ರೂಗಳ ಯೋಜನೆಗಳು ಈಗ ದುಬಾರಿಯಾಗಿದೆ. ಈ ಎರಡೂ ಯೋಜನೆಗಳಿಗೆ ಇನ್ನು  649 ಮತ್ತು 799 ರೂಗಳನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : ಉಚಿತ ವೈ-ಫೈ ರೂಟರ್ ಪಡೆಯುವುದು ಹೇಗೆ? ಇಲ್ಲಿದೆ ವಿವರ


ಈ ಐದು ವಲಯಗಳಲ್ಲಿ ಹೊಸ ದರಗಳು ಅನ್ವಯ:
ವರದಿಯ ಪ್ರಕಾರ Vi ಐದು ವಲಯಗಳಲ್ಲಿ ಹೊಸ ದರಗಳನ್ನು ಜಾರಿಗೆ ತಂದಿದೆ. ಚೆನ್ನೈ (Chennai), ತಮಿಳುನಾಡು, ಕೋಲ್ಕತಾ (Kolkata), ಮಹಾರಾಷ್ಟ್ರ ಮತ್ತು ಗೋವಾ ವಲಯಗಳಲ್ಲಿ ಹೊಸ ದರಗಳು ಜಾರಿಗೆ ಬಂದಿವೆ. ಯುಪಿ ಈಸ್ಟ್ ಸರ್ಕಲ್‌ನಲ್ಲಿ ಸ್ವಲ್ಪ ಸಮಯದ ಹಿಂದೆ  ಹೊಸ ದರಗಳನ್ನು ಜಾರಿಗೆ ತರಲಾಗಿದೆ. 


 ಐದು ಪೋಸ್ಟ್‌ಪೇಯ್ಡ್ ಯೋಜನೆಗಳು : 
ಲಭ್ಯ ಮಾಹಿತಿಯ ಪ್ರಕಾರ, ಈಗ ಚೆನ್ನೈ, ತಮಿಳುನಾಡು, ಕೋಲ್ಕತಾ, ಮಹಾರಾಷ್ಟ್ರ (Maharastra) ಮತ್ತು ಗೋವಾಗಳಲ್ಲಿ (Goa) ಐದು ಪೋಸ್ಟ್‌ಪೇಯ್ಡ್ ಯೋಜನೆಗಳಿವೆ. ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ 649, 799, 999, 948 ಮತ್ತು 1348 ರೂಗಳಲ್ಲಿ ಒಂದನ್ನು ಬಳಕೆದಾರರು ಆಯ್ಕೆ ಮಾಡಬಹುದು.


ಇದನ್ನೂ ಓದಿ : Samsung Galaxy M02 Features 7000ಕ್ಕೂ ಕಡಿಮೆ ಬೆಲೆಗೆ ಲಾಂಚ್ ಆಗಿದೆ Smsungನ 'Mera M'


ಇತರ ದರಗಳು ಇತರ ವಲಯಗಳಲ್ಲಿ ಅನ್ವಯಿಸುತ್ತವೆ :
6 ವಲಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಪ್ರಸ್ತುತ ಯಾವುದೇ ಹೊಸ ಸ್ಲ್ಯಾಬ್ ಜಾರಿಯಾಗಿಲ್ಲ.  ಇತರ ವಲಯಗಳ Vi ಬಳಕೆದಾರರು ಇನ್ನೂ 598, 749, 899 ಮತ್ತು 999 ರೂಗಳಿಗೆ ಪೋಸ್ಟ್‌ಪೇಯ್ಡ್ (Postpaid) ಯೋಜನೆಯನ್ನು ಬಳಸಬಹುದು.


 ಫ್ಯಾಮಿಲಿ ಪೋಸ್ಟ್ ಪೇಯ್ಡ್ ಯೋಜನೆಯಿಂದಾಗುವ ಪ್ರಯೋಜನ : 
  Vi  ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ, ಬಳಕೆದಾರರಿಗೆ ಎರಡು ಸಂಪರ್ಕಗಳನ್ನು ನೀಡಲಾಗುತ್ತದೆ.  ಈ  ಯೋಜನೆಯಲ್ಲಿ ಬಳಕೆದಾರರು 80 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದರಲ್ಲಿ,  50 ಜಿಬಿ ಡೇಟಾವನ್ನು (Data) ಪ್ರಾಥಮಿಕ ಸಂಪರ್ಕ ಹೊಂದಿರುವವರು ಸ್ವೀಕರಿಸಿದರೆ, ಉಳಿದ 30 ಜಿಬಿ ಡೇಟಾವನ್ನು ದ್ವಿತೀಯ ಬಳಕೆದಾರರಿಗೆ ನೀಡಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.