ನವದೆಹಲಿ : ಹಬ್ಬದ ಸೀಸನ್ ಆರಂಭದೊಂದಿಗೆ, ಆನ್‌ಲೈನ್ ಶಾಪಿಂಗ್ (Online shopping) ಪ್ಲಾಟ್‌ಫಾರ್ಮ್‌ಗಳಲ್ಲಿ ಅದ್ಭುತವಾದ ಸೇಲ್ ಅನ್ನು ಕಾಣಬಹುದು. ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಹೊರತಾಗಿ ಅನೇಕ ವಸ್ತುಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ರಿಯಾಯಿತಿಗಳು (discount) ತುಂಬಾ ಅದ್ಭುತವಾಗಿದ್ದು, ಅನೇಕ ಜನರು ಅಗತ್ಯವಲ್ಲದ ವಸ್ತುಗಳನ್ನು ಕೂಡಾ ಖರೀದಿಸುತ್ತಾರೆ. ಹೀಗೆ ಮಾಡಿ ಪ್ರತಿ ಬಾರಿ ಹಣ ಉಳಿತಾಯ ಮಾಡಿದ್ದೇವೆ ಅಂದು ಕೊಳ್ಳುತ್ತಾರೆ. ಆದರೆ  ಪ್ರತಿ ಬಾರಿಯೂ ಹಾಗಾಗುವುದಿಲ್ಲ. ಭಾರೀ ರಿಯಾಯಿತಿಗಳ ಆಸೆಗೆ ಬಿದ್ದು, ಅನೇಕ ಜನರು ವಂಚನೆಗೆ ಒಳಗಾಗುತ್ತಾರೆ.   


COMMERCIAL BREAK
SCROLL TO CONTINUE READING

ಅಧಿಕೃತ ವೆಬ್‌ಸೈಟ್‌ನಿಂದ ಶಾಪಿಂಗ್ ಮಾಡಿ :
ಸಾಮಾನ್ಯವಾಗಿ ಕೆಲವರಿಗೆ ವಾಟ್ಸಾಪ್ (whatsapp) ಅಥವಾ ಇಮೇಲ್‌ನಲ್ಲಿ ದೊಡ್ಡಮಟ್ಟದ ರಿಯಾಯಿತಿ ಆಫರ್‌ಗಳ ಮೆಸೇಜ್  ಬರುತ್ತದೆ.  ಆಕರ್ಷಕ ರಿಯಾಯಿತಿಯೊಂದಿಗೆ ಉತ್ಪನ್ನವನ್ನು ಖರೀದಿಸಲು ಹೇಳಲಾಗುವ ಲಿಂಕ್ ಅನ್ನು ಕೂಡಾ ನೀಡಲಾಗುತ್ತದೆ. ನಿಮಗೂ ಇಂಥ ಲಿಂಕ್‌ ಬಂದಿದ್ದರೆ, ತಪ್ಪಿಯೂ ಕೂಡಾ,  ಅವುಗಳ ಮೇಲೆ ಕ್ಲಿಕ್ ಮಾಡಬೇಡಿ. ಇದು ನಿಮ್ಮನ್ನು ಬಲೆಗೆ ಬೀಳಿಸಲು ಕೆಲವು ಕೆಟ್ಟ ವಂಚನೆಯ ಟ್ರಿಕ್ ಆಗಿರಬಹುದು. ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಕ್ಲೋನ್ ಮಾಡಿದ  ವೆಬ್‌ಸೈಟ್ ತೆರೆಯುತ್ತದೆ. ಅದು ನೋಡುವುದಕ್ಕೆ ಮೂಲ ವೆಬ್‌ಸೈಟ್‌ನಂತೆಯೇ (website) ಕಾಣುತ್ತದೆ.  ಇಲ್ಲಿ ಶಾಪಿಂಗ್ ಸೆಲೆಕ್ಟ್ ಮಾಡಿದರೆ, ಮೋಸ ಹೋಗಬಹುದು. ಹಾಗಾಗಿ, ಇ-ಕಾಮರ್ಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಆಪ್‌ನಿಂದಲೇ ಯಾವಾಗಲೂ ಶಾಪಿಂಗ್ ಮಾಡಿ.


ಇದನ್ನೂ ಓದಿ : Space Factory:ಬಾಹ್ಯಾಕಾಶದಿಂದ ನಿಮ್ಮ ಮನೆಗೆ ಬರಲಿದೆ ಸರಕು, ನಿರ್ಮಾಣಗೊಳ್ಳುತ್ತಿದೆ ಈ ಫ್ಯಾಕ್ಟರಿ


ಕ್ಯಾಶ್ ಆನ್ ಡೆಲಿವರಿ ಆಯ್ಕೆ :
ಶಾಪಿಂಗ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ (Cash on delivery) ಆಯ್ಕೆಯನ್ನೇ ಆಯ್ದುಕೊಳ್ಳಿ. ಆನ್‌ಲೈನ್ ಪಾವತಿ ಮಾಡುವ ಮೂಲಕ, ನೀವು ಎಷ್ಟು ಹೆಚ್ಚು ಉಳಿಸುತ್ತೀರೋ ಅಷ್ಟು ಹಣ ನಿಮ್ಮ ಬ್ಯಾಂಕ್‌ನಲ್ಲಿ (bank) ಸುಭದ್ರವಾಗಿರುತ್ತದೆ. ನೀವು ಎಂದಿಗೂ ಯಾವುದೇ ವಂಚನೆಗೆ ಬಲಿಯಾಗುವುದಿಲ್ಲ. ಇದು ಮಾತ್ರವಲ್ಲ, ಉತ್ಪನ್ನವನ್ನು ಓಪನ್ ಮಾಡುವಾಗ ವೀಡಿಯೊ ರೆಕಾರ್ಡ್ ಮಾಡಿ. ಅದರಲ್ಲಿ ಯಾವುದೇ ದೋಷವಿದ್ದರೂ, ನಿಮಗೆ ಪ್ರೂಫ್ ಆಗಿ ಉಪಯೋಗಕ್ಕೆ ಬರುತ್ತದೆ. ನಕಲಿ ಉತ್ಪನ್ನವನ್ನು ನಿಮಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ನಕಲಿ ಉತ್ಪನ್ನವನ್ನು ಕಳುಹಿಸಿದ್ದರೂ, ಅದರ ಮರುಪಾವತಿಯನ್ನು ಪಡೆದುಕೊಳ್ಳಬಹುದು. 


ATM ಕಾರ್ಡ್ ವಿವರಗಳನ್ನು ಸೇವ್ ಮಾಡಬೇಡಿ : 
ಆನ್‌ಲೈನ್ ಶಾಪಿಂಗ್‌ಗೆ ಆದ್ಯತೆ ನೀಡುವ ಜನರು ಪಾವತಿ ಮಾಡುವಾಗ ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Credit card) ವಿವರಗಳನ್ನು ಶಾಪಿಂಗ್ ಸೈಟ್‌ನಲ್ಲಿ ಸ್ವೆ ಮಾಡಿ ಇಡುತ್ತಾರೆ.  CVV ಅಥವಾ PIN ಇಲ್ಲದೆ ಯಾರೂ ನಿಮ್ಮ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ, ಮುನ್ನೆಚ್ಚರಿಕೆಯಾಗಿ, ಕಾರ್ಡ್ ವಿವರಗಳನ್ನು ಸೇವ್ ಮಾಡುವುದನ್ನು ತಪ್ಪಿಸಿ. ಕಾರ್ಡ್ ವಿವರಗಳನ್ನು ಸೇವ್ ಮಾಡದೆ ಕೂಡಾ ಆನ್‌ಲೈನ್‌ನಲ್ಲಿ (Online) ಖರೀದಿಸಬಹುದು.


ಇದನ್ನೂ ಓದಿ : Amazon Great Indian Festival Sale 2021: ಶಾಪಿಂಗ್ ಮಾಡುವವರಿಗೆ HDFC Bank ನೀಡುತ್ತಿದೆ Good News, ಏನದು ಗೊತ್ತಾ ?


ಬಜೆಟ್ ಮಾಡಿದ ನಂತರವೇ ಶಾಪಿಂಗ್ ಮಾಡಿ: 
ಹಬ್ಬದ ಸೀಸನ್ ಬಂದಾಗಲೆಲ್ಲಾ, ಬಜೆಟ್ ತಯಾರಿಸುವ ಮೂಲಕ ಯಾವಾಗಲೂ ಶಾಪಿಂಗ್ ಮಾಡಬೇಕು. ಇದರೊಂದಿಗೆ ನೀವು ಅನಿವಾರ್ಯವಲ್ಲದ ವಸ್ತುಗಳ ಮೇಲೆ ಹಣವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬಹುದು. ಅಲ್ಲದೆ, ಕ್ರೆಡಿಟ್ ಕಾರ್ಡ್ (Credit card)  ಬದಲಿಗೆ, ಡೆಬಿಟ್ ಕಾರ್ಡ್ ಅಥವಾ ನಗದು ಮೂಲಕ ಪಾವತಿಸಿ. ಇದರೊಂದಿಗೆ, ಅನಗತ್ಯ ಖರ್ಚುಮಾಡುವುದು ಉಳಿಯುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.