ಲಂಡನ್: Manufacturing Satellite - ನಿಮ್ಮ ಮನೆಯ ಯಾವುದೇ ಯಾವುದೇ ಒಂದು ವಸ್ತುವಿನ ಮೇಲೆ 'ಮೇಡ್ ಇನ್ ಸ್ಪೇಸ್' (Made In Space) ಎಂದು ಬರೆದಿದ್ದರೆ, ನಿಸ್ಸಂಶಯವಾಗಿ ಈ ವಿಷಯವು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ಆದರೆ ಭವಿಷ್ಯದಲ್ಲಿ ಇದು ನಿಜ ಎಂದು ಸಾಬೀತಾಗಲಿದೆ. ಏಕೆಂದರೆ, ಬ್ರಿಟನ್ ಬಾಹ್ಯಾಕಾಶದಲ್ಲಿ ಕಾರ್ಖಾನೆಯನ್ನು ಸ್ಥಾಪಿಸುತ್ತಿದೆ, ಅದರಲ್ಲಿ ನೀವು ಬಳಸುವ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ .
ಹೈಪರ್ಫಾರ್ಮೆನ್ಸ್ ಉತ್ಪನ್ನಗಳ ಉತ್ಪಾದನೆ (High Performance Products)
ವಿಜ್ಞಾನಿಗಳ ಪ್ರಕಾರ, ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಉತ್ಪನ್ನಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಗುರುತ್ವಾಕರ್ಷಣೆಯ ಕಡಿತವನ್ನು ಬಳಸಿಕೊಂಡು ಈ ಉತ್ಪನ್ನಗಳನ್ನು ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಭೂಮಿಯ ಮೇಲೆ ಅಂತಹ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿಲ್ಲ. ಇದಕ್ಕಾಗಿ, ಸ್ಪೇಸ್ ಫೋರ್ಜ್ (Space Forge) ಹೆಸರಿನ ಕಂಪನಿಯು ತನ್ನ ರೋಬೋಟಿಕ್ ForgeStar-1 ಆರ್ಬಿಟಲ್ ವಾಹನವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಮತ್ತು ಅದರ ಆಕಾರವು ಒಲೆಯಂತೆ ಇರಲಿದೆ.
ಇದನ್ನೂ ಓದಿ-BIG Discovery: ಬಾಹ್ಯಾಕಾಶದಲ್ಲಿ ದೊರೆತ ಭೂಮಿಯ ಪರ್ಯಾಯ ಆಯ್ಕೆ!
ಈ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಗುವುದು ಮತ್ತು ಉಪಗ್ರಹವನ್ನು ಭೂಮಿಯಿಂದ ಸುಮಾರು 300 ರಿಂದ 500 ಮೈಲಿ ದೂರದಲ್ಲಿ ಇರಿಸಲಾಗುವುದು. ಇದು ಬಾಹ್ಯಾಕಾಶದಲ್ಲಿ ಸ್ವಯಂಚಾಲಿತವಾಗಿ ಹೆಚ್ಚಿನ ಕಾರ್ಯಕ್ಷಮತೆಯ ಉತ್ಪನ್ನಗಳನ್ನು ತಯಾರಿಸಲಿದೆ.
ಇದನ್ನೂ ಓದಿ-Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್
ಶಕ್ತಿಯ ಬಳಕೆ ಕಡಿಮೆಯಾಗಲಿದೆ
ಮೈಕ್ರೊಗ್ರಾವಿಟಿ ಪರಿಸರವು ಈ ಉತ್ಪನ್ನಗಳನ್ನು ತಯಾರಿಸಲಿದೆ. ಇದು ಮಾನವ ಅಗತ್ಯಗಳಿಗಾಗಿ ಅರೆವಾಹಕಗಳು, ಮಿಶ್ರಲೋಹಗಳು ಮತ್ತು ಔಷಧಗಳನ್ನು ತಯಾರಿಸಬಹುದು. ಬಾಹ್ಯಾಕಾಶದಲ್ಲಿ ಮಾಡಿದ ಅರೆವಾಹಕಗಳು ಭೂಮಿಯ ಮೇಲೆ ಮಾಡಿದ ಅರೆವಾಹಕಗಳಿಗಿಂತ ಉತ್ತಮವಾಗಿರುತ್ತವೆ ಎಂದು ಸ್ಪೇಸ್ ಫೋರ್ಜ್ ಹೇಳಿದೆ. ಇನ್ನೊಂದೆಡೆ ಇದು ತನ್ನ ಸಾಮರ್ಥ್ಯದ ಮೇಲೆ ಭೂಮಿಯ ಮೇಲಿನ ಶಕ್ತಿಯನ್ನು ಕಡಿಮೆ ಮಾಡಲಿದೆ ಎಂದು ವಿಜ್ಞಾನಿಗಳು ಹಕ್ಕು ಮಂಡಿಸಿದ್ದಾರೆ.
ಇದನ್ನೂ ಓದಿ-NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.