ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದ ಸ್ಕಿಲ್ ಇಂಡಿಯಾ ಡಿಜಿಟಲ್ ಗೆ ಚಾಲನೆ
ಈ ಪ್ಲಾಟ್ ಫಾರಂ ಉತ್ತಮ ಅವಕಾಶಗಳು ಮತ್ತು ಉಜ್ವಲ ಭವಿಷ್ಯವನ್ನು ನಿರೀಕ್ಷಿಸುವ ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಪೂರೈಸಲಿದ್ದು ಇದು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯದ ಕೋರ್ಸ್ ಗಳು, ಉದ್ಯೋಗಾವಕಾಶಗಳು ಮತ್ತು ಉದ್ಯಮಶೀಲತೆಯ ಬೆಂಬಲವನ್ನು ವಿಸ್ತರಿಸಲಿದೆ.
ಬೆಂಗಳೂರು: ಪ್ರತಿ ಭಾರತೀಯನಿಗೂ ಗುಣಮಟ್ಟದ ಕೌಶಲ್ಯಾಭಿವೃದ್ಧಿ, ಅವಶ್ಯಕ ಅವಕಾಶಗಳು ಮತ್ತು ಉದ್ಯಮಶೀಲತೆಯ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಇಂದು ಭಾರತದಲ್ಲಿ ಕೌಶಲ್ಯಗಳು, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಕ್ಷೇತ್ರವನ್ನು ಸಮನ್ವಯಗೊಳಿಸುವ ಮತ್ತು ಪರಿವರ್ತಿಸುವ ಸಮಗ್ರ ಡಿಜಿಟಲ್ ಪ್ಲಾಟ್ ಫಾರಂ ಸ್ಕಿಲ್ ಇಂಡಿಯಾ ಡಿಜಿಟಲ್(ಎಸ್.ಐ.ಡಿ)ಯನ್ನು ಇಂದು ಪ್ರಾರಂಭಿಸಿದ್ದಾರೆ.
ಈ ಪ್ಲಾಟ್ ಫಾರಂ ಉತ್ತಮ ಅವಕಾಶಗಳು ಮತ್ತು ಉಜ್ವಲ ಭವಿಷ್ಯವನ್ನು ನಿರೀಕ್ಷಿಸುವ ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಪೂರೈಸಲಿದ್ದು ಇದು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯದ ಕೋರ್ಸ್ ಗಳು, ಉದ್ಯೋಗಾವಕಾಶಗಳು ಮತ್ತು ಉದ್ಯಮಶೀಲತೆಯ ಬೆಂಬಲವನ್ನು ವಿಸ್ತರಿಸಲಿದೆ. ಈ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್, ಐಟಿಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಕೂಡಾ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಳ್ಳಭಟ್ಟಿಗೆ ಕಡಿವಾಣ ಹಾಕಿ ಬಡವರ ಆರೋಗ್ಯ-ಆದಾಯ ಕಾಪಾಡಿ: ಸಿಎಂ ಸಿದ್ದರಾಮಯ್ಯ
ಎಸ್.ಐ.ಡಿ. ಭಾರತದಲ್ಲಿ ಕೌಶಲ್ಯ, ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯ ಇಕೊಸಿಸ್ಟಂಗೆ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್(ಡಿಪಿಐ) ಆಗಿದೆ. ಕೌಶಲ್ಯಾಭಿವೃದ್ಧಿಯನ್ನು ಹೆಚ್ಚು ಆವಿಷ್ಕಾರಕ, ಲಭ್ಯ ಮತ್ತು ವೈಯಕ್ತಿಕಗೊಳಿಸುವ ಗುರಿಯಿಂದ ಇದು ಡಿಜಿಟಲ್ ತಂತ್ರಜ್ಞಾನ ಮತ್ತು ಇಂಡಸ್ಟ್ರಿ 4.0 ಕೌಶಲ್ಯಗಳಿಗೆ ಆದ್ಯತೆ ನೀಡಿದ್ದು ಈ ಅತ್ಯಾಧುನಿಕ ಪ್ಲಾಟ್ ಫಾರಂ ಕುಶಲಿ ಪ್ರತಿಭೆಗಳ ನೇಮಕ ಹೆಚ್ಚಿಸುವ, ಜೀವನಪೂರ್ತಿ ಕಲಿಕೆ ಮತ್ತು ವೃತ್ತಿ ಬೆಳವಣಿಗೆಯನ್ನು ಒದಗಿಸುವಲ್ಲಿ ಮಹತ್ತರ ಪ್ಲಾಟ್ ಫಾರಂ ಆಗಿದೆ. ಈ ಪ್ಲಾಟ್ ಫಾರಂ ಜಿ20 ಫ್ರೇಮ್ ವರ್ಕ್ ನಲ್ಲಿ ಡಿಪಿಐ ಮತ್ತು ಡಿಜಿಟಲ್ ಅರ್ಥವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಡಿಜಿಟಲ್ ಕೌಶಲ್ಯಗಳು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವ ಗುರಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇದು ಎಲ್ಲ ಸರ್ಕಾರದ ಕೌಶಲ್ಯ ಮತ್ತು ಉದ್ಯಮಶೀಲತೆಯ ಉಪಕ್ರಮಗಳಿಗೆ ಸಮಗ್ರ ಮಾಹಿತಿಯ ಹೆಬ್ಬಾಗಿಲಾಗಿದ್ದು ವೃತ್ತಿಯಲ್ಲಿ ಮುಂದುವರಿಕೆ ಮತ್ತು ಜೀವನಪೂರ್ತಿ ಕಲಿಕೆಯನ್ನು ಅನ್ವೇಷಿಸುವ ನಾಗರಿಕರಿಗೆ ಆದ್ಯತೆಯ ಕೇಂದ್ರವಾಗಲಿದೆ.
ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಹಣ ನೀಡದ ಕಾಂಗ್ರೆಸ್ ಸರ್ಕಾರ!: ಬಿಜೆಪಿ ಆಕ್ರೋಶ
ಈ ಪ್ರಾರಂಭ ಕುರಿತು ಶ್ರೀ ಧರ್ಮೇಂದ್ರ ಪ್ರಧಾನ್, ಸ್ಕಿಲ್ ಇಂಡಿಯಾ ಡಿಜಿಟಲ್ ಅತ್ಯಾಧುನಿಕ ಪ್ಲಾಟ್ ಫಾರಂ ಆಗಿದ್ದು ಎಲ್ಲ ಕೌಶಲ್ಯದ ಉಪಕ್ರಮಗಳನ್ನು ಒಟ್ಟಿಗೆ ತರುತ್ತದೆ. ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಭಾರತದ ಪ್ರತಿಪಾದನೆ ಮತ್ತು ಕೌಶಲ್ಯದ ಅಂತರಗಳನ್ನು ತುಂಬುವುದು ಭಾರತದ ಯಶಸ್ವಿ ಜಿ20ರ ಅಧ್ಯಕ್ಷತೆಯ ಕೇಂದ್ರಬಿಂದುವಾಗಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೃಷ್ಟಿಸುವಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯಾಗಿ ಎಂ.ಎಸ್.ಡಿ.ಇ. ಭಾರತದ ವಿಸ್ತಾರ ಜನ ಸಮೂಹದ ಕೌಶಲ್ಯದ ಅಗತ್ಯಗಳನ್ನು ಪೂರೈಸಲು ಮುಕ್ತವಾದ ಪ್ಲಾಟ್ ಫಾರಂ ಸೃಷ್ಟಿಸಿದೆ. ಸ್ಕಿಲ್ ಇಂಡಿಯಾ ಡಿಜಿಟಲ್ ನಮ್ಮ ಜನಸಂಖ್ಯೆಯ ಡಿವಿಡೆಂಟ್ ಅನ್ನು ಬಳಸಿಕೊಳ್ಳುವಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತವನ್ನು ಜಾಗತಿಕ ಕೌಶಲ್ಯಗಳ ಕೇಂದ್ರವಾಗಿ ರೂಪಿಸಲಿದೆ ಎಂದರು. ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಒಂದು ಕ್ರಾಂತಿಯಾಗಿರುವ ಸ್ಕಿಲ್ ಇಂಡಿಯಾ ಡಿಜಿಟಲ್ ಎಲ್ಲರಿಗೂ, ಎಲ್ಲಿಯೇ ಆಗಲಿ, ಯಾವುದೇ ಸಮಯದಲ್ಲಾಗಲಿ ಕೌಶಲ್ಯ ನೀಡಿಕೆ ಸಾಧ್ಯವಾಗಿಸುತ್ತದೆ ಎಂದರು.
ಜಿ20 ಶೃಂಗಸಭೆಯ ಯಶಸ್ಸಿನ ಕೆಲವೇ ದಿನಗಳ ನಂತರ ಶ್ರೀ ರಾಜೀವ್ ಚಂದ್ರಶೇಖರ್, ಈ ಶೃಂಗಸಭೆಯಲ್ಲಿ ನಡೆದ ಅತ್ಯಂತ ಗಮನಾರ್ಹ ಒಪ್ಪಂದಗಳು ಡಿಪಿಐಗಳ ಮೇಲೆ ಎಂದರು. ಸ್ಕಿಲ್ ಇಂಡಿಯಾ ಡಿಜಿಟಲ್ ಯುವಜನರಿಗೆ ಖಂಡಿತವಾಗಿಯೂ ಅತ್ಯಂತ ಪ್ರಮುಖ ಡಿಪಿಐಗಳಲ್ಲಿ ಒಂದಾಗಿದೆ ಮತ್ತು ಪ್ರಧಾನಮಂತ್ರಿಗಳ ಹೊಸ ಭಾರತದ ವಿಷನ್ ನ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದ ಅತ್ಯಂತ ಪ್ರಮುಖ ಅಂಶಗಳ ಸಂಯೋಜನೆ ಹೊಂದಿದೆ. ಈ ಶಕ್ತಿಯುತ ಯೋಜನೆಗಳ ಏಕೈಕ ಗುರಿ ಯುವಜನರನ್ನು ಭವಿಷ್ಯ ಸನ್ನದ್ಧ ಕೌಶಲ್ಯಗಳೊಂದಿಗೆ ಸನ್ನದ್ಧರಾಗಿಸುವುದು.ಇದು ಹಲವಾರು ಅವಕಾಶಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಕೋವಿಡ್ ನಂತರದ ವಿಶ್ವದಲ್ಲಿ ಡಿಜಿಟಲ್ ಕೌಶಲ್ಯಗಳ ಕುರಿತು ಅಪಾರ ಅರಿವಿದೆ. ಸ್ಕಿಲ್ ಇಂಡಿಯಾ ಡಿಜಿಟಲ್ ಉದ್ಯಮಶೀಲತೆ ಮತ್ತು ಭವಿಷ್ಯ ಸನ್ನದ್ಧ ಕಾರ್ಯಪಡೆಯನ್ನು ಸಾಧ್ಯವಾಗಿಸುತ್ತದೆ ಎಂದರು.
ಈ ಕೆಳಗಿನ ಅಂಶಗಳು ಎಸ್.ಐ.ಡಿ ಪ್ಲಾಟ್ ಫಾರಂ ಅನ್ನು ಉನ್ನತಗೊಳಿಸುತ್ತವೆ ಮತ್ತು ಅಸಂಖ್ಯ ಅನುಕೂಲಗಳನ್ನು ಒದಗಿಸುತ್ತವೆ:
1. ಆಧಾರ್/ಎಐ ಸನ್ನದ್ಧ ಮುಖ ಗುರುತಿಸುವಿಕೆ
2. ಡಿಜಿಟಲ್ ವೆರಿಫೈಯಬಲ್ ಕ್ರೆಡೆನ್ಷಿಯಲ್ಸ್(ಡಿವಿಸಿ)
3. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಮೆಷಿನ್ ಲರ್ನಿಂಗ್(ಎಂಎಲ್) ಶಿಫಾರಸುಗಳು
4. ಆಧಾರ್ ಆಧರಿತ ಇಕೆವೈಸಿ
5. ಡಿಜಿಟಲ್ ಕಲಿಕೆ
6. ನಾಗರಿಕ-ಕೇಂದ್ರಿತ ವಿಧಾನ
7. ಮೊಬೈಲ್-ಪ್ರಥಮ ವಿಧಾನ
8. ವ್ಯಾಪ್ತಿ ಮತ್ತು ವೇಗ
9. ಭದ್ರತಾ ಕ್ರಮಗಳು
10. ಇಂಟರ್ ಆಪರಬಿಲಿಟಿ
11. ವಾಟ್ಸಾಪ್ ಚಾಟ್ ಬೊಟ್
12. ಈಸ್ ಆಫ್ ಡೂಯಿಂಗ್ ಬಿಸಿನೆಸ್
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್, ಐಟಿಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೆಖರ್ ಅವರು ದೇಶದಲ್ಲಿ ಪರಿವರ್ತನೆ ಮತ್ತು ಸಬಲೀಕರಣ ರೂಪಿಸಲು ನಿರ್ಮಾಣವಾದ ಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್ ಫಾರಂ ನಿರ್ಮಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದ ತಂತ್ರಜ್ಞಾನ ತಂಡದೊಂದಿಗೆ ಸಂವಹನ ನಡೆಸಿದರು. ಈ ಪ್ಲಾಟ್ ಫಾರಂನ ಪ್ರತಿ ವಿಭಾಗವೂ ನಾಗರಿಕರ ವಿಸ್ತಾರ ಅಗತ್ಯಗಳನ್ನು ಪೂರೈಸುತ್ತದೆ.
ಸ್ಕಿಲ್ ಇಂಡಿಯಾ ಡಿಜಿಟಲ್ ಬಳಕೆದಾರ-ಸ್ನೇಹಿಯಾಗುವ ಬದ್ಧತೆಯೊಂದಿಗೆ ತನ್ನ ಪ್ರಯಾಣ ಪ್ರಾರಂಭಿಸಿತು. ಇದು ಹಲವಾರು ಡಿವೈಸ್ ಗಳಲ್ಲಿ ಅಳವಡಿಸಿಕೊಳ್ಳಬಲ್ಲ ಸುಲಭ ಬಳಕೆಯ ಇಂಟರ್ಫೇಸ್ ಅನ್ನು ಒದಗಿಸುವ ಮೂಲಕ ಪ್ರಸ್ತುತ ಇರುವ ಅಡೆತಡೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಇದು ವಿಸ್ತಾರ ಹಿನ್ನೆಲೆಯ ಜನರಿಗೆ ಈ ಪ್ಲಾಟ್ ಫಾರಂ ಅನ್ನು ಅವರಲ್ಲಿ ಯಾವುದೇ ತಂತ್ರಜ್ಞಾನವಿರಲಿ ಪ್ರಯತ್ನರಹಿತವಾಗಿ ಬಳಸಲು ಅವಕಾಶ ಕಲ್ಪಿಸುತ್ತದೆ. ಹಲವಾರು ಭಾಷೆಗಳ ಈ ದೇಶದಲ್ಲಿ ಸ್ಕಿಲ್ ಇಂಡಿಯಾ ಡಿಜಿಟಲ್ ಹಲವು ಭಾಷೆಗಳನ್ನು ಬೆಂಬಲಿಸುವ ಮೂಲಕ ಅಂತರಗಳನ್ನು ತುಂಬುತ್ತದೆ, ಒಳಗೊಳ್ಳುವಿಕೆ ಉತ್ತೇಜಿಸುತ್ತದೆ ಮತ್ತು ಎಲ್ಲ ಬಳಕೆದಾರರಿಗೆ ವಿಸ್ತಾರ ಕಲಿಕೆಯ ವಾತಾವರಣ ನೀಡುತ್ತದೆ. ಸುರಕ್ಷಿತ ಬಳಕೆಯು ಆಧಾರ್-ಆಧರಿತ ಇಕೆವೈಸಿಯಲ್ಲಿ ಬಂದಿರುವುದು ಮಹತ್ತರ ಕಾರ್ಯವಾಗಿದೆ. ಈ ಸದೃಢ ವೆರಿಫಿಕೇಷನ್ ಪ್ರಕ್ರಿಯೆಯು ಸ್ಕಿಲ್ ಇಂಡಿಯಾ ಡಿಜಿಟಲ್ ಗೆ ತಳಹದಿಯಾಗಿದ್ದು ಅದರ ಕೊಡುಗೆಗಳಿಂದ ಅಧಿಕೃತ ಭಾಗವಹಿಸುವವರು ಮಾತ್ರ ಪ್ರಯೋಜನ ಪಡೆದುಕೊಳ್ಳುವುದನ್ನು ದೃಢೀಕರಿಸುತ್ತದೆ.
ಈ ಪ್ಲಾಟ್ ಫಾರಂನ ಮೊಬೈಲ್-ಪ್ರಥಮ ವಿಧಾನವನ್ನು ಸ್ಮಾರ್ಟ್ ಫೋನ್ ಗಳನ್ನು ಆಧರಿಸಿರುವ ಆಧುನಿಕ ವಿಶ್ವಕ್ಕೆ ಅಳವಡಿಸಲಾಗಿದ್ದು ಅದು ಕೈಗಳಲ್ಲಿ ಹಿಡಿದ ಡಿವೈಸ್ ಗಳ ಮೂಲಕ ತಡೆರಿತ ಕಲಿಕೆಯ ಅನುಭವಗಳನ್ನು ನೀಡುತ್ತದೆ, ಸಾಂಪ್ರದಾಯಿಕ ಕಲಿಕಾ ವಿಧಾನಗಳನ್ನು ಪರಿವರ್ತಿಸುತ್ತದೆ ಮತ್ತು ಬಳಕೆದಾರರಿಗೆ ಈ ಪ್ಲಾಟ್ ಫಾರಂನ ಸಂಪನ್ಮೂಲಗಳನ್ನು ಯಾವುದೇ ಸಮಯ ಮತ್ತು ಎಲ್ಲ ಕಡೆ ದೊರೆಯುವಂತೆ ಮಾಡುತ್ತದೆ.
ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ಸ್ಕಿಲ್ ಇಂಡಿಯಾ ಡಿಜಿಟಲ್ ವ್ಯಕ್ತಿಯ ಕೌಶಲ್ಯಗಳು ಮತ್ತು ಅರ್ಹತೆಗಳನ್ನು ಪ್ರದರ್ಶಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಆವಿಷ್ಕಾರವು ಡಿಜಿಟಲಿ ವೆರಿಫೈಡ್ ಕ್ರೆಡೆನ್ಷಿಯಲ್ ವಿಧಾನದಲ್ಲಿ ಬಂದಿದ್ದು ಇದು ಅರ್ಹತೆಗಳನ್ನು ಪ್ರದರ್ಶಿಸುವ ಮತ್ತು ಗುರುತಿಸುವ ವಿಧಾನವನ್ನು ಮೂಲಭೂತವಾಗಿ ಬದಲಾಯಿಸಿದೆ. ಸ್ಕಿಲ್ ಇಂಡಿಯಾ ಡಿಜಿಟಲ್ ಸುರಕ್ಷಿತ, ತಿದ್ದಲಾಗದ ಮತ್ತು ಪರಿಶೀಲಿಸಬಹುದಾದ ಪರಿಹಾರವನ್ನು ಒದಗಿಸಲು ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ಬಳಸುತ್ತಿದೆ. ತನ್ನ ಕೇಂದ್ರದಲ್ಲಿ ಡಿಜಿಟಲಿ ವೆರಿಫೈಡ್ ಕ್ರೆಡೆನ್ಷಿಯಲ್ ಬಳಕೆದಾರರಿಗೆ ಅವರ ಅರ್ಹತೆಗಳು, ಅನುಭವಗಳು ಮತ್ತು ಸರ್ಟಿಫಿಕೇಷನ್ ಗಳನ್ನು ಡಿಜಿಟಲ್ ಮಾದರಿಯಲ್ಲಿ ಪ್ರಸ್ತುತಪಡಿಸಲು ಅವಕಾಶ ನೀಡುತ್ತದೆ ಅದು ಆಂತರಿಕ ವಿಶ್ವಾಸಾರ್ಹತೆಯ ಆಂತರಿಕ ಪದರ ಹೊಂದಿರುತ್ತದೆ.
ಅಲ್ಲದೆ ಸ್ಕಿಲ್ ಇಂಡಿಯಾ ಡಿಜಿಟಲ್ ವೈಯಕ್ತಿಗೊಳಿಸಿದ ಕ್ಯೂಆರ್ ಕೋಡ್ ಗಳ ಮೂಲಕ ಡಿಜಿಟಲ್ ಸಿವಿಗಳನ್ನು ಪರಿಚಯಿಸುವ ಮೂಲಕ ಈ ಪರಿವರ್ತನೀಯ ಪರಿಕಲ್ಪನೆಯನ್ನು ವಿಸ್ತರಿಸಿದೆ. ಸರಳವಾದ ಸ್ಕ್ಯಾನ್ ನಿಂದ ಈ ಸಂಭವನೀಯ ಉದ್ಯೋಗದಾತರು ಅಥವಾ ಪಾಲುದಾರರ ವ್ಯಕ್ತಿಯ ಕೌಶಲ್ಯಗಳು, ಅರ್ಹತೆಗಳು, ಅನುಭವಗಳು ಮತ್ತು ಸಾಧನೆಗಳನ್ನು ಒಳಗೊಂಡ ಡಿಜಿಟಲ್ ಪೋರ್ಟ್ ಫೋಲಿಯೊ ಪಡೆಯಬಹುದು. ಸ್ಕಿಲ್ ಇಂಡಿಯಾ ಡಿಜಿಟಲ್(ಎಸ್.ಐ.ಡಿ)ಯಲ್ಲಿ ಸಕಾಲಿಕ ಅಪ್ಡೇಟ್ ಗಳ ಅಳವಡಿಕೆಯು ಬಳಕೆದಾರರ ಅನುಭವಗಳ ಅನಿವಾರ್ಯ ಅಂಶವಾಗಿ ಬೆಳೆದಿದೆ. ಸ್ಕಿಲ್ ಇಂಡಿಯಾ ಡಿಜಿಟಲ್ ನ ಪ್ರಮುಖ ಅಂಶಗಳಲ್ಲಿ ಒಂದು ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಗೆ ಸಮಗ್ರ ವಿಧಾನ. ಈ ಪ್ಲಾಟ್ ಫಾರಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ತರಬೇತಿ ಕಾರ್ಯಕ್ರಮಗಳನ್ನು ಒಳಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು ಈ ಪ್ಲಾಟ್ ಪಾರಂ ಕೌಶಲ್ಯಾಭಿವೃದ್ಧಿ ಉಪಕ್ರಮಗಳಿಗೆ ಏಕೀಕೃತ ಮತ್ತು ಕೇಂದ್ರೀಕೃತ ಹಬ್ ಸೃಷ್ಟಿಸಲು ಉದ್ದೇಶಿಸಿದೆ. ಈ ವಿಧಾನವು ಹಲವಾರು ಸರ್ಕಾರಿ ಸಂಸ್ಥೆಗಳು ವಿಸ್ತಾರ ವಲಯಗಳು ಮತ್ತು ಪ್ರದೇಶಗಳಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಸಕ್ರಿಯವಾಗಿ ತೊಡಗಿಕೊಂಡಿವೆ ಎನ್ನುವುದನ್ನು ಗುರುತಿಸಿದೆ.
ಈ ವಿಶೇಷತೆಗಳನ್ನು ಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್ ಫಾರಂ ಒಳಗಡೆ ಅನುಷ್ಠಾನಗೊಳಿಸುವುದು ಭಾರತದಲ್ಲಿ ಕೌಶಲ್ಯದ ವಲಯವನ್ನು ಕ್ರಾತಿಕಾರಕಗೊಳಿಸಲಿದ್ದು, ಉನ್ನತೀಕರಿಸಿದ ಲಭ್ಯತೆ, ವೈಯಕ್ತಿಕಗೊಳಿಸಿದ ಕಲಿಕೆಯ ಅನುಭವಗಳು, ಸುಸೂತ್ರಗೊಳಿಸಿದ ವೆರಿಫಿಕೇಷನ್ ಪ್ರಕ್ರಿಯೆಗಳು ಮತ್ತು ಸುಧಾರಿಸಿದ ವೃತ್ತಿ ಮಾರ್ಗದರ್ಶನ ಒಳಗೊಂಡಿದೆ. ಇದು ಬಳಕೆದಾರರಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಪಡೆದುಕೊಳ್ಳಲು, ಉದ್ಯಮದ ಪ್ರವೃತ್ತಿಗಳ ಅಪ್ಡೇಟ್ ಆಗಿರಲು ಮತ್ತು ಪರಿಣಾಮಕಾರಿಯಾಗಿ ಭಾರತದ ಉದ್ಯೋಗ ಪಡೆಯ ಅಭಿವೃದ್ಧಿಗೆ ಕೊಡುಗೆ ನೀಡಲು ಸನ್ನದ್ಧವಾಗಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸ್ಕಿಲ್ಲಿಂಗ್ ಸುಧಾರಣೆ, ಉದ್ಯಮದ ಭಾಗವಹಿಸುವಿಕೆ ಉತ್ತೇಜನ ಮತ್ತು ಕಲಿಯುವವರ ತೊಡಗಿಕೊಳ್ಳುವಿಕೆ ಹೆಚ್ಚಿಸುವ, ಎಐಸಿಟಿಇ, ಎನ್.ಐ.ಇ.ಎಲ್.ಐ.ಟಿ., ಇನ್ಫೋಸಿಸ್, ಮೈಕ್ರೊಸಾಫ್ಟ್, ಎಡಬ್ಲ್ಯೂಎಸ್(ಅಮೆಜಾನ್), ರೆಡ್ ಹ್ಯಾಟ್, ವಾಧ್ವಾನಿ ಫೌಂಡೇಷನ್, ಯೂನಿಸೆಫ್, ಫ್ಯೂಚರ್ ಸ್ಕಿಲ್ಸ್ ಪ್ರೈಮ್, ಸ್ಯಾಪ್, ಟೆಕ್ ಮಹಿಂದ್ರಾ ಫೌಂಡೇಷನ್ ಮುಂತಾದವರ ನಡುವೆ ಹಲವಾರು ಪರಡ್ಪರ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಉದ್ಯಮದ ಅನುಕೂಲ ಮತ್ತು ರಾಷ್ಟ್ರೀಯ ಕನ್ವರ್ಜೆನ್ಸ್ ಗೆ ವೈಯಕ್ತಿಕಗೊಳಿಸಿದ ಕಲಿಕೆ ಮತ್ತು ಸುರಕ್ಷಿತ ದೃಢೀಕರಣಕ್ಕೆ ಸ್ಕಿಲ್ ಇಂಡಿಯಾ ಡಿಜಿಟಲ್ ಆವಿಷ್ಕಾರ ಮತ್ತು ಪ್ರಗತಿಯ ಬೆಳಕಿನ ಕಿರಣವಾಗಿದೆ. ಸ್ಫೂರ್ತಿ ತುಂಬುವ ಮತ್ತು ಸಬಲೀಕರಿಸುವ ಇದರ ಪ್ರಯಾಣವು ಭಾರತದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ದೀರ್ಘಕಾಲೀನ ಪರಿಣಾಮ ಉಳಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.