Smartphone Tips And Tricks: ಪ್ರಸ್ತುತ ಎಲ್ಲರ ಜೀವನದಲ್ಲೂ ದೈನಂದಿನ ಬದುಕಿನ ಪ್ರಮುಖ ಭಾಗವಾಗಿರುವ ಸ್ಮಾರ್ಟ್​ಫೋನ್ ನಿಧಾನವಾಗಿ ಚಾರ್ಜ್ ಆಗ್ತಾ ಇದ್ಯಾ?  ಇಲ್ಲ, ಸ್ಮಾರ್ಟ್​ಫೋನ್ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಹಾಗಂತ, ನೂರಾರು ರೂಪಾಯಿ ಕೊಟ್ಟು ರಿಪೇರಿ ಮಾಡಿಸುವ ತಲೆಬಿಸಿಯೂ ಬೇಡ. ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸಿ ನೀವೇ ಸುಲಭವಾಗಿ ಈ ಸಮಸ್ಯೆ ಪರಿಹರಿಸಬಹುದು. 


COMMERCIAL BREAK
SCROLL TO CONTINUE READING

ಹೌದು, ಕೆಲಸದ ಒತ್ತಡ ಹೆಚ್ಚಾದಾಗ ಮನುಷ್ಯರು ಬಳಲುವಂತೆ ಫೋನ್ ಬಳಕೆ ಹೆಚ್ಚಾದಂತೆ ಅದರ ಕಾರ್ಯಕ್ಷಮತೆಯೂ ಕುಗ್ಗುತ್ತದೆ. ದೇಹದ ಬಳಲಿಕೆ ದೂರ ಮಾಡಲು ಎನರ್ಜಿ ಫುಡ್ ತೆಗೆದುಕೊಳ್ಳುವಂತೆ, ಸ್ಮಾರ್ಟ್​ಫೋನ್ನ ಸಮಸ್ಯೆ ದೂರ ಪಡಿಸಲು ಅದನ್ನು ಬೂಸ್ಟ್ ಮಾಡುವುದು ಅಗತ್ಯ. 


ಇದನ್ನೂ ಓದಿ- ಕೇವಲ 7 ರೂಪಾಯಿಗಳ ದೈನಂದಿನ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ನೀಡಿದ ಬಿ‌ಎಸ್‌ಎಲ್‌ಎನ್  


ವಾಸ್ತವವಾಗಿ, ಸ್ಮಾರ್ಟ್​ಫೋನ್ ಬಳಕೆ ಹೆಚ್ಚಾದಂತೆ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ, ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಕಪ್ ಕಡಿಮೆಯಾಗಬಹುದು. ಇದಲ್ಲದೆ, ಫೋನ್ ಚಾರ್ಜಿಂಗ್ ನಲ್ಲಿಟ್ಟು ಬಳಸುವುದರಿಂದಲೂ ಇದು ಅದರ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್ ಅಪ್ಡೇಟ್ ಮಾಡದೇ ಇರುವುದು. ಹೀಗೆ, ಇವೆಲ್ಲವೂ ಫೋನ್ ನಿಧಾನವಾಗಿ ಚಾರ್ಜ್ ಆಗಲು ಕಾರಣವಾಗಿರಬಹುದು. 


ಇದಲ್ಲದೆ, ಸ್ಮಾರ್ಟ್​ಫೋನ್ ಚಾರ್ಜಿಂಗ್ ಮಾಡುವಾಗ ದುರ್ಬಲ ಕನೆಕ್ಟರ್ ಬಳಕೆ, ವೈರ್ಲೆಸ್ ಚಾರ್ಜಿಂಗ್ ಮಾಡುವುದು, ಚಾರ್ಜಿಂಗ್ ಪೋರ್ಟ್ ನಲ್ಲಿ ಧೂಳು ಸಂಗ್ರಹವಾಗುವುದು. ಹೀಗೆ, ಇವೆಲ್ಲವೂ ಕೂಡ ಚಾರ್ಜಿಂಗ್ ನಿಧಾನವಾಗಲು ಕಾರಣವಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಫೋನ್ ಸೂಪರ್ಫಾಸ್ಟ್ ಆಗಿ ಚಾರ್ಜ್ ಆಗುತ್ತೆ. 


ಇದನ್ನೂ ಓದಿ- ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!


ಸ್ಮಾರ್ಟ್​ಫೋನ್ ಚಾರ್ಜಿಂಗ್ ವೇಗಗೊಳಿಸಲು ಸುಲಭ ಪರಿಹಾರ: 
* ನೀವು ಯಾವ ಸ್ಮಾರ್ಟ್​ಫೋನ್ ಬಳಸುತ್ತೀರೋ ಅದೇ ಕಂಪನಿಯ ಚಾರ್ಜಿಂಗ್ ಬಳಸಿ. 
* ಚಾರ್ಜಿಂಗ್ ಇಟ್ಟಾಗ ಫೋನ್ ಬಳಸುವುದನ್ನು ತ್ಪಪಿಸಿ. 
* ಆಗಾಗ್ಗೆ ಫೋನ್ ಪೌಚ್ ತೆಗೆದು ಕ್ಲೀನ್ ಮಾಡಿ, ಜೊತೆಗೆ ಫೋನ್ ಅನ್ನು ಒಮ್ಮೆ ಶುದ್ಧವಾದ ಬಟ್ಟೆಯಿಂದ ಒರೆಸಿ. 
* ವಾರದಲ್ಲಿ ಒಮ್ಮೆಯಾದರೂ ಸ್ಮಾರ್ಟ್​ಫೋನ್ ಅಪ್ಡೇಟ್ ಮಾಡಿ. ನಿಯಮಿತವಾಗಿ ಈ ಟ್ರಿಕ್ಸ್ ಅನುಸರಿಸುವುದರಿಂದ ಸ್ಮಾರ್ಟ್​ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.