ಬೆಂಗಳೂರು : ಇದು ಸ್ಮಾರ್ಟ್ ಪೋನ್ (Smartphone) ಜಮಾನ. ಎಲ್ಲಾ ಕೆಲಸವೂ ಮೊಬೈಲಿನಲ್ಲೇ ಫಟಾಫಟ್ ಆಗುತ್ತೆ. ಅದೇ ಹೊತ್ತಲ್ಲಿ ಮೊಬೈಲಿನ ಬ್ಯಾಟರಿ (Mobile battery) ಚಾರ್ಜ್ ಕೂಡಾ ಫಟಾಪಟ್ ಖಾಲಿಯಾಗುತ್ತದೆ. ಮೊಬೈಲ್ ರಿಚಾರ್ಜ್ ಗೆ ಇಟ್ಟರೆ, ಫುಲ್ ಆಗಬೇಕಾದರೆ ಕನಿಷ್ಠ ಒಂದೂವರೆ ಗಂಟೆ ಕಾಯಬೇಕು. ಇವತ್ತು ನಿಮಗೆ ಒಂದಷ್ಟು ಟಿಪ್ಸ್ ಹೇಳುತ್ತೇವೆ. ಅದನ್ನು ಫಾಲೋ ಮಾಡಿದರೆ, ಸ್ಮಾರ್ಟ್ ಪೋನ್  ಫಟಾಫಟ್ 15 - 20 ನಿಮಿಷಕ್ಕೆ ಭರ್ತಿಯಾಗುತ್ತದೆ. 


COMMERCIAL BREAK
SCROLL TO CONTINUE READING

1. ಮೊಬೈಲ್ ಸ್ವಿಚ್ ಆಫ್ ಮಾಡಿ, ಚಾರ್ಜಿಗೆ ಇಡಿ: 
ಇದು ನಿಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಸ್ವಿಚ್ ಆಫ್ (Switch off)ಆದ ಮೊಬೈಲ್ 30% ವೇಗವಾಗಿ ಚಾರ್ಜ್ ಆಗುತ್ತದೆ. ಸ್ಪೀಡ್ ಚಾರ್ಜ್ ಆಗಬೇಕಾದರೆ ಮೊದಲ ಆಯ್ಕೆ ಸ್ವಿಚ್ ಆಫ್ ಮಾಡಿ ಮೊಬೈಲ್ (Mobile)ಚಾರ್ಜಿಗೆ ಇಡುವುದು


ಇದನ್ನೂ ಓದಿ : Paytm Holi Sale 2021: ಗೃಹೋಪಯೋಗಿ ವಸ್ತುಗಳಿಂದ ಸ್ಮಾರ್ಟ್‌ಫೋನ್‌ಗಳವರೆಗೆ ಭಾರಿ ರಿಯಾಯಿತಿ


2. ಏರೋಪ್ಲೇನ್ ಮೋಡ್ ಗೆ   ಹಾಕಿ ಚಾರ್ಜಿಗೆ ಇಡಿ.
ಏರೋಪ್ಲೇನ್ ಮೋಡ್ ಗೆ ಹಾಕಿ ಚಾರ್ಜಿಗೆ ಇಟ್ಟರೂ ಬ್ಯಾಟರಿ (Battery) ಬೇಗ ಚಾರ್ಜ್ ಆಗುತ್ತದೆ. ಏರೋಪ್ಲೇನ್ ಮೋಡಿನಲ್ಲಿ (Aeroplane mode) ಮೊಬೈಲಿನ ಯಾವ ಪರಿಕರವೂ ಆಕ್ಟಿವ್ ಆಗಿ ಇರಲ್ಲ. ಕೇವಲ ಸ್ಕ್ರೀನ್ ಮಾತ್ರ ಸ್ವಲ್ಪ ಹೊತ್ತು ಬ್ಲಿಂಕ್ ಆಗುತ್ತದೆ.  ಹೀಗೆ ಮಾಡಿದರೂ, ಮೊಬೈಲ್ ಬೇಗ ಚಾರ್ಜ್ ಆಗುತ್ತದೆ.


3. ಕಂಪನಿ ಚಾರ್ಜರ್ ಬಳಸಬೇಕು:
ಲೋಕಲ್ ಚಾರ್ಜರ್ (Charger) ಕಡಿಮೆ ಬೆಲೆಗೆ ಸಿಗುತ್ತದೆ ನಿಜ. ಆದರೆ, ಅದು ನಿಮ್ಮ ಮೊಬೈಲಿಗೆ ಹಾನಿ ಉಂಟು ಮಾಡುತ್ತದೆ. ಯಾವತ್ತಿಗೂ ಕಂಪನಿಯ ಒರಿಜನಲ್ ಚಾರ್ಜರ್ ಬಳಸಿ. ಅದರಿಂದ ಚಾರ್ಜ್ ಸ್ಪೀಡ್ ಆಗುತ್ತದೆ. 


ಇದನ್ನೂ ಓದಿ : Free Disney+ Hotstar ಪಡೆಯಲು ಹೀಗೆ ಮಾಡಿ..!


4. ಬ್ರೌವ್ಸಿಂಗ್ ಮಾಡಬೇಡಿ:
ಮೊಬೈಲ್ ಚಾರ್ಜ್ ಗೆ ಇಟ್ಟಿರುವಾಗ ಅದರಲ್ಲಿ ಬ್ರೌಸಿಂಗ್ (Browsing) ಮಾಡಬೇಡಿ. WiFi  ಬ್ಲೂಟೂತ್, ಲೊಕೇಶನ್, GPS ಎಲ್ಲಾ ಆಫ್ ಮಾಡಿಡಿ. ಹೀಗೆ ಮಾಡಿದರೂ, ಮೊಬೈಲ್ ಫಟಾಫಟ್ ಚಾರ್ಜ್ ಆಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.