ಮುಂಬೈ: ಹಲವೊಮ್ಮೆ ಶುಲ್ಕವನ್ನು ಪಾವತಿಸಿ ನಾವು ಕ್ಯಾಬ್‌ನಿಂದ ಇಳಿದ ನಂತರ ಶುಲ್ಕವು ದೈನಂದಿನಕ್ಕಿಂತ ಅನೇಕ ಪಟ್ಟು ಹೆಚ್ಚು ಎಂದು ಭಾಸವಾಗುತ್ತದೆ. ಈ ಬಗ್ಗೆ ಟ್ಯಾಕ್ಸಿ ಡ್ರೈವರ್‌ಗೆ ದೂರು ನೀಡಿದರೆ ಅವರು ನೇರವಾಗಿ ಮೀಟರ್ ಅನ್ನು ತೋರಿಸುತ್ತಾರೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ರಸ್ತೆ ಒಂದೇ ಆಗಿರುವಾಗ - ದೈನಂದಿನ ದಟ್ಟಣೆ ಒಂದೇ ಆಗಿದ್ದರೆ, ನಂತರ ಶುಲ್ಕ ಹೇಗೆ ಹೆಚ್ಚಾಗುತ್ತದೆ...?
ವಾಸ್ತವವಾಗಿ ಇದು ತಾಂತ್ರಿಕ ದೋಷ ಮತ್ತು ಜಿಪಿಎಸ್ (GPS) ಹಾಳಾಗಿರುವುದರ ಪರಿಣಾಮವಾಗಿದೆ. ಇದರಿಂದ ಪಾರಾಗಲು ಇರುವ ಒಂದೇ ಮಾರ್ಗ ಎಂದರೆ ಗ್ರಾಹಕರು ಹುಷಾರಾಗಿರುವುದು.
ಗಂಟೆ ಲೆಕ್ಕಾಚಾರದಲ್ಲಿ ಆಟೋ ಬಾಡಿಗೆ, ಈ ನಗರಗಳಲ್ಲಿ Uber ಆರಂಭಿಸಿದೆ ನೂತನ ಸೇವೆ
ಮುಂಬೈ ಪೊಲೀಸರು ಇತ್ತೀಚೆಗೆ ಜಿಪಿಎಸ್ ಅನ್ನು ಹಾಳುಮಾಡುವ ಮೂಲಕ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಲು ಹೆಚ್ಚುವರಿ ಕಿಲೋಮೀಟರ್ಗಳನ್ನು ತೋರಿಸಿ ಮೋಸ ಮಾಡುತ್ತಿದ್ದ 3 ಓಲಾ ಚಾಲಕರನ್ನು ಬಂಧಿಸಿದ್ದಾರೆ. ಮುಂಬೈ ಪೊಲೀಸ್ ಅಪರಾಧ ಶಾಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಅನೇಕ ಕ್ಯಾಬ್ ಚಾಲಕರು ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಂದ ಹೆಚ್ಚಿನ ಶುಲ್ಕ ಪಡೆಯುತ್ತಿದ್ದಾರೆ. ಪೊಲೀಸರು OLA executives ಗೂ ಕೂಡ ಈ ಸಂಬಂಧ ಸಮನ್ಸ್ ಕಳುಹಿಸಿದ್ದಾರೆ.
ಈ ನಂಬರ್‌ಗೆ ಕರೆ ಮಾಡಿದರೆ ನಿಮ್ಮನ್ನು ಉಚಿತವಾಗಿ ಆಸ್ಪತ್ರೆ ತಲುಪಿಸಲಿದೆ OLA
ಮುಂಬೈನಲ್ಲಿ ಸಕ್ರಿಯವಾಗಿರುವ ರಾಕ್ಟ್ ಆಗಾಗ್ಗೆ ಮುಂಬೈ (Mumbai) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗ್ರಾಹಕರನ್ನು ಕರೆದೊಯ್ಯುವ ವೇಳೆ ಕೆಲವರು ದೂರ ಹೋಗಿ ಜಿಪಿಎಸ್ ಟ್ರ್ಯಾಕರ್ ಆಫ್ ಮಾಡುತ್ತಾರೆ. ಮತ್ತೆ ಜಿಪಿಎಸ್ ಆನ್ ಮಾಡಿದಾಗ ಆ ಒಂದು ನಿಮಿಷದಲ್ಲಿ ಜಿಪಿಎಸ್ ಮೀಟರ್‌ಗೆ ಹೆಚ್ಚು ಕಿಲೋಮೀಟರ್ ತೋರಿಸುತ್ತಿತ್ತು. ಇದು ವಾಸ್ತವವಾಗಿ ಒಂದು ದೋಷವಾಗಿದ್ದು ಚಾಲಕರು ಅದರ ಲಾಭವನ್ನು ಪಡೆಯುತ್ತಿದ್ದರು.
ಮಾಹಿತಿಯ ಪ್ರಕಾರ ಚಾಲಕರು ಅನೇಕ ಬಾಹ್ಯ ವಂಚನೆ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಜಿಪಿಎಸ್ ಅನ್ನು ಹಾಳು ಮಾಡುವುದು ಸಾಮಾನ್ಯವಾಗಿದೆ. ಮೀಟರ್‌ಗಳಲ್ಲಿ ಹೆಚ್ಚು ಕಿಲೋಮೀಟರ್‌ಗಳನ್ನು ಸೇರಿಸುವ ಮೂಲಕ ಬಿಲ್ ಅನ್ನು ಹೆಚ್ಚಿಸಲು, ಅದರ ಮೇಲೆ ಅಗ್ರಿಗೇಟರ್ ಸುಲಭವಾಗಿ ನಿಗಾ ವಹಿಸಬಹುದು, ಇದಕ್ಕಾಗಿ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಜಾಗರೂಕ ಸಾಫ್ಟ್‌ವೇರ್‌ಗಳಿವೆ.
ಈ ರೀತಿಯ ವಂಚನೆ ತಪ್ಪಿಸಲು ಏನು ಮಾಡಬೇಕು?
ಈ ರೀತಿಯ ವಂಚನೆ ತಪ್ಪಿಸಲು ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳುವಾಗ ಗ್ರಾಹಕರು ತನ್ನದೇ ಆದ ಜಿಪಿಎಸ್ ಅನ್ನು ಆನ್ ಮಾಡಬೇಕು ಮತ್ತು ಕ್ಯಾಬ್ ಅಗ್ರಿಗೇಟರ್ ವಿಧಿಸುವ ಬಿಲ್ ಅನ್ನು ಲೆಕ್ಕ ಹಾಕಬೇಕು ಅಥವಾ ಚಾಲಕನ ವಂಚನೆಯನ್ನು ತಪ್ಪಿಸಬೇಕು. ಕಿಲೋಮೀಟರ್‌ಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರೆ ಆಗ ಅಗ್ರಿಗೇಟರ್‌ಗೆ ದೂರು ಸಲ್ಲಿಸುವ ಮೂಲಕ ಗ್ರಾಹಕರು ಮರುಪಾವತಿ ಪಡೆಯಬಹುದು.