ನವದೆಹಲಿ: Increase Smartphone Signals - ಇಂದಿನ ಕಾಲದಲ್ಲಿ ಯಾರ ಬಳಿ ಸ್ಮಾರ್ಟ್ ಫೋನ್ ಇಲ್ಲ ಹೇಳಿ? ಬಹುತೇಕ ಜನರು ಪರಸ್ಪರ ಸಂಪರ್ಕದಲ್ಲಿರಲು ಸ್ಮಾರ್ಟ್ ಫೋನ್ ಬಳಸುತ್ತಾರೆ. ಹಲವು ಬಾರಿ, ನಾವು ವಾಸಿಸುವ ಕೆಲ ಪ್ರದೇಶಗಳಲ್ಲಿ ಸಿಗ್ನಲ್ (Increase Network) ಸಮಸ್ಯೆ ಇರುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ನಮ್ಮ  ಸ್ವಂತ ಮನೆಯಲ್ಲಿಯೂ ಕೂಡ ಸಿಗ್ನಲ್ ಸಮಸ್ಯೆ ಇರುತ್ತದೆ, ಈ ಸಮಸ್ಯೆ ನಿವಾರಣೆಗೆ ನಾವು ಕೆಲ ಸಲಹೆಗಳನ್ನು ತಂದಿದ್ದೇವೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಚಿಟಿಕೆ ಹೊಡೆಯೋದ್ರಲ್ಲಿ ಸಿಗ್ನಲ್ ಪಡೆಯಬಹುದು.

COMMERCIAL BREAK
SCROLL TO CONTINUE READING

ಫೋನ್ ಕವರ್ ಕಾರಣ ಕೂಡ ಸಿಗ್ನಲ್ ಸಮಸ್ಯೆ ಎದುರಾಗುತ್ತದೆ (Smartphone Signal Problem)
ಈ ವಿಷಯ ನಿಮಗೆ ತಿಳಿದರೆ ನೀವೂ ಕೂಡ ತಬ್ಬಿಬ್ಬಾಗುವಿರಿ. ನಿಮ್ಮ ಸ್ಮಾರ್ಟ್‌ಫೋನ್‌ನ (Smartphone Tricks) ಕವರ್ ಕಡಿಮೆ ಸಿಗ್ನಲ್‌ಗೆ ದೊಡ್ಡ ಕಾರಣವಾಗಿರಬಹುದು. ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ, ಜನರು ತಮ್ಮ ಸ್ಮಾರ್ಟ್‌ಫೋನ್‌ಗೆ ಗಟ್ಟಿಯಾದ ಪ್ಲಾಸ್ಟಿಕ್ ಕವರ್ ಅನ್ನು ಅಳವಡಿಸುತ್ತಾರೆ.ಇದರಿಂದಾಗಿ ಸಿಗ್ನಲ್‌ಗಳು ನಿರ್ಬಂಧಿಸಲ್ಪಡುತ್ತವೆ ಮತ್ತು ಸಿಗ್ನಲ್ ಗಳು ಸ್ಮಾರ್ಟ್‌ಫೋನ್ ಅನ್ನು ಸರಿಯಾಗಿ ತಲುಪುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕರೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಇಂಟರ್ನೆಟ್ ಕಾರ್ಯನಿರ್ವಹಿಸದಿರಲು ಇದು ಕೂಡ ಪ್ರಮುಖ ಕಾರಣವಾಗಿದೆ.


ಇದನ್ನೂ ಓದಿ-Flipkart Mobile Bonanza: ಸ್ಯಾಮ್‌ಸಂಗ್‌ನ ಇತ್ತೀಚಿನ 5G ಸ್ಮಾರ್ಟ್‌ಫೋನ್ ಅನ್ನು 3 ಸಾವಿರ ರೂಪಾಯಿಗೆ ಖರೀದಿಸಿ

ಈ ಜಾಗಗಳಿಗೆ ಹೋಗಿ ಹೆಚ್ಚಿನ ನೆಟ್ವರ್ಕ್ ಪಡೆಯಿರಿ
ಸಂಪೂರ್ಣ ನೆಟ್‌ವರ್ಕ್ ಪಡೆಯುವ ಇನ್ನೊಂದು ವಿಧಾನವೆಂದರೆ, ಸ್ಮಾರ್ಟ್‌ಫೋನ್ ಬಳಸುವಾಗ, ಹೆಚ್ಚಿನ ಕಿಟಕಿಗಳು ಮತ್ತು ಬಾಗಿಲುಗಳನ್ನು ಹೊಂದಿರುವ ಕೋಣೆಯಲ್ಲಿರಲು ಪ್ರಯತ್ನಿಸಿ. ಕಿಟಕಿ ಮತ್ತು ಬಾಗಿಲುಗಳು ಕಡಿಮೆ ಇರುವ ಅಥವಾ ಇಲ್ಲದಿರುವ ಕೊಠಡಿಗಳಲ್ಲಿ ಸಿಗ್ನಲ್ ಸಮಸ್ಯೆ ಎದುರಾಗುತ್ತದೆ. ಸ್ಮಾರ್ಟ್‌ಫೋನ್‌ಗೆ ಸಿಗ್ನಲ್ ತರಲು, ತೆರೆದುಕೊಂಡಿರುವ ಮತ್ತು ಸಿಗ್ನಲ್ ತಲುಪಲು ಯಾವುದೇ ಅಡೆತಡೆ ಉಂಟಾಗದ ಸ್ಥಳದ ಅವಶ್ಯಕತೆ ಇರುತ್ತದೆ. ಹೀಗಾಗಿ, ಸ್ಮಾರ್ಟ್‌ಫೋನ್‌ನ ಸಿಗ್ನಲ್ ಅನ್ನು ಹೆಚ್ಚಿಸಲು, ನೀವು ಮೊದಲು ಓಪನ್ ಆಗಿರುವ ಸ್ಪೇಸ್ ಗೆ ಹೋಗಬೇಕು ಮತ್ತು ನಂತರ ಕರೆ ಮಾಡಬಹುದು ಮತ್ತು ಇಂಟರ್ನೆಟ್ ಅನ್ನು ಬಳಸಬಹುದು.


ಇದನ್ನೂ ಓದಿ-BSNL ಭರ್ಜರಿ ಪ್ಲಾನ್: 50 ಪೈಸೆಗೆ ದಿನಕ್ಕೆ 2GB ಡೇಟಾ

ಈ ಸರಳ ಟ್ರಿಕ್ಸ್ ಗಳನ್ನು ಅನುಸರಿಸುವ ಮೂಲಕ, ನೀವು ಸುಲಭವಾಗಿ ನಿಮ್ಮ ಫೋನ್ ಸಿಗ್ನಲ್ ಅನ್ನು ಹೆಚ್ಚಿಸಬಹುದು ಮತ್ತು ಯಾವುದೇ ಅಡಚಣೆಯಿಲ್ಲದೆ ಫೋನ್ ಕರೆಗಳನ್ನು ಮಾಡಬಹುದು.


ಇದನ್ನೂ ಓದಿ-iPhone 12 ನಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.