How to Call Without Mobile Network: ಸಾಮಾನ್ಯವಾಗಿ, ಮೊಬೈಲ್‌ನಲ್ಲಿ ಕರೆ ಮಾಡಲು ಸಿಮ್ ಅಂದರೆ ಮೊಬೈಲ್ ನೆಟ್‌ವರ್ಕ್ ಹೊಂದಿರುವುದು ಅವಶ್ಯಕ, ಆದರೆ ಮೊಬೈಲ್ ನೆಟ್‌ವರ್ಕ್ ಇಲ್ಲದಿದ್ದರೂ ಕೂಡ ನೀವು ಯಾರಿಗೆ ಬೇಕಾದರೂ ಕೂಡ ಕರೆ ಮಾಡಬಹುದಾದ ಎಂದು ಹೇಳಿದರೆ, ನಿಮಗೆ ನಂಬಿಕೆಯಾಗದೆ ಇರಬಹುದು. ಆದರೆ ಇದು ನಿಜ. ಸ್ಮಾರ್ಟ್‌ಫೋನ್‌ಗಳು ಈ ವಿಶೇಷ ವೈಶಿಷ್ಟ್ಯವನ್ನು ಹೊಂದಿವೆ, ಈ ವಿಶೇಷ ವೈಶಿಷ್ಟ್ಯದ ಸಹಾಯದಿಂದ ನೀವು ಮೊಬೈಲ್ ನೆಟ್‌ವರ್ಕ್ ಇಲ್ಲದೆ ಯಾರಿಗೆ ಬೇಕಾದರೂ ಕೂಡ ಕರೆ ಮಾಡಬಹುದು. ಬನ್ನಿ ಹಾಗಾದರೆ ಈ ಟ್ರಿಕ್ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

COMMERCIAL BREAK
SCROLL TO CONTINUE READING

ಈ ವೈಶಿಷ್ಟ್ಯ ಏನು?
ಮೊಬೈಲ್ ನೆಟ್‌ವರ್ಕ್ ಇಲ್ಲದೆಯೇ ನೀವು ಯಾರಿಗೆ ಬೇಕಾದರೂ ಕೂಡ ಕರೆ ಮಾಡಬಹುದಾದ ಈ ವೈಶಿಷ್ಟ್ಯದ ಹೆಸರು 'ವೈಫೈ ಕಾಲಿಂಗ್'. ಈ ವೈಶಿಷ್ಟ್ಯವು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿದೆ. ಅದನ್ನು ಸಕ್ರಿಯಗೊಳಿಸಿದ ನಂತರ, ನೀವು ಸುಲಭವಾಗಿ ಕರೆ ಮಾಡಬಹುದು ಮತ್ತು ನೆಟ್‌ವರ್ಕ್ ಇಲ್ಲದೆ ಯಾವುದೇ ಸ್ನೇಹಿತ ಅಥವಾ ಪರಿಚಯಿಸ್ಥರ ಜೊತೆಗೆ ಮಾತನಾಡಬಹುದು. ಆದರೆ, ಈ ವೈಶಿಷ್ಟ್ಯ ಬಳಸಲು ನೀವು ವೈಫೈ ಪ್ರದೇಶದಲ್ಲಿ ಇರಬೇಕಾದ ಅಗತ್ಯವಿದೆ. ವಾಸ್ತವವಾಗಿ, ಈ ವೈಶಿಷ್ಟ್ಯವು ವೈಫೈ ನೆಟ್‌ವರ್ಕ್ ಬೆಂಬಲದ ಸಹಾಯದಿಂದ ಮಾತ್ರ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ-New Feature In Two Wheelers - ಇನ್ಮುಂದೆ ದ್ವಿಚಕ್ರ ವಾಹನಗಳಲ್ಲಿಯೂ ಕೂಡ 'ಟೈಯರ್ ಮಾನಿಟರಿಂಗ್ ಸಿಸ್ಟಮ್' ಅಳವಡಿಸಬಹುದು

ಐಫೋನ್ ಬಳಕೆದಾರರು ಈ ಸೆಟ್ಟಿಂಗ್ ಅನ್ನು ಹೇಗೆ ಸಕ್ರೀಯಗೊಳಿಸಬೇಕು?
ನೀವು ಐಫೋನ್ ಬಳಕೆದಾರರಾಗಿದ್ದರೆ ಮತ್ತು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಬಯಸುತ್ತಿದ್ದರೆ, ನೀವು ಮೊದಲು ಸೆಟ್ಟಿಂಗ್‌ ವಿಭಾಗಕ್ಕೆ ಭೇಟಿ ನೀಡಬೇಕು. ಅಲ್ಲಿ ನೀವು ಮೊಬೈಲ್ ಡೇಟಾ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಈಗ ನಿಮ್ಮ ಮುಂದೆ ಹಲವು ಆಯ್ಕೆಗಳು ಕಾಣಿಸಿಕೊಳ್ಳಲಿವೆ. ಕೆಳಭಾಗದಲ್ಲಿ 'ವೈಫೈ ಕರೆ' ಆಯ್ಕೆ ಇರುವುದನ್ನು ಕೂಡ ನೀವು ಗಮನಿಸಬಹುದು. ಅದರ ಮೇಲೆ ಕ್ಲಿಕ್ಕಿಸಿ. ನಿಮ್ಮ ಫೋನ್ ನಲ್ಲಿ ಈ ವೈಶಿಷ್ಟ್ಯವು  ಸಕ್ರೀಯಗೊಳ್ಳಲಿದ್ದು, ನೀವು ವೈ-ಫೈ ವಲಯಕ್ಕೆ ಹೋಗಿ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದೆಯೇ ಸುಲಭವಾಗಿ ನೀವು ಯಾರಿಗೆ ಬೇಕಾದರೂ ಕೂಡ ಕರೆಮಾಡಬಹುದು. 


ಇದನ್ನೂ ಓದಿ-ಸದ್ದಿಲ್ಲದೇ ಬಿಡುಗಡೆ ಆಗಿದೆ ಒಪ್ಪೋದ ಹೊಸ ಸ್ಮಾರ್ಟ್‌ಫೋನ್, ಬೆಲೆ ಎಷ್ಟು ಗೊತ್ತಾ?

ಆಂಡ್ರಾಯ್ಡ್ ಬಳಕೆದಾರರು  ಸೆಟ್ಟಿಂಗ್ ಅನ್ನು ಹೇಗೆ ಸಕ್ರೀಯಗೊಳಿಸಬಹುದು
ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು ಮೊದಲು ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಿ. ಈಗ ವೈಫೈ ಆಯ್ಕೆಯನ್ನು ಆಯ್ದುಕೊಳ್ಳಿ. ಅದನ್ನು ಕ್ಲಿಕ್ ಮಾಡಿದಾಗ ವೈಫೈ ಕಾಲಿಂಗ್ ಆಯ್ಕೆ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ನೀವು ಅದನ್ನು ಆನ್ ಮಾಡಬೇಕು. ಈ ವೈಶಿಷ್ಟ್ಯದ ಪ್ರಯೋಜನವನ್ನು ಪಡೆಯಲು ನೀವು ವೈ-ಫೈ ಜೋನ್ ಗೆ ಹೋಗಿ ನೆಟ್ವರ್ಕ್ ಸಹಾಯ ಇಲ್ಲದೆಯೇ ಕರೆಯನ್ನು ಮಾಡಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.