Smartphone ಬಳಕೆದಾರರೆ ಎಚ್ಚರ, ಹೊಸ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ
Smartphone Usage and Suicidal Thoughts: ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಸಂಶೋಧನೆಯಲ್ಲಿ ಅತಿಯಾದ ಸ್ಮಾರ್ಟ್ ಫೋನ್ ಬಳಕೆಯ ಕುರಿತು ಒಂದು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ
Smartphone Usage and Suicidal Thoughts New Research: ಸ್ಮಾರ್ಟ್ ಫೋನ್ ಗಳ ಇಂದಿನ ಯುಗದಲ್ಲಿ ಸ್ಮಾರ್ಟ್ ಫೋನ್ ಬಳಸದೆ ಇರುವ ವ್ಯಕ್ತಿ ಸಿಗುವುದು ತುಂಬಾ ವಿರಳ. ಕಾಲ ಕಳೆಯುತ್ತಿದ್ದಂತೆ ಸ್ಮಾರ್ಟ್ ಫೋನ್ ಮೇಲೆ ನಮ್ಮ ಅವಲಂಬನೆ ಕೂಡ ಹೆಚ್ಚಾಗತೊಡಗಿದೆ. ನಮ್ಮ ಪ್ರತಿಯೊಂದು ಸಣ್ಣ ಪುಟ್ಟ ಕೆಲಸ ಸ್ಮಾರ್ಟ್ ಫೋನ್ ಮುಖಾಂತರವೆ ಪೂರ್ಣಗೊಳ್ಳುತ್ತಿವೆ. ಆದರೆ, ಇತ್ತೀಚೆಗೆ ಸೈಪಿಯನ್ ಲ್ಯಾಬ್ ಹೊಸ ಅಧ್ಯಯನ ವರದಿಯೊಂದನ್ನು ಜಾರಿಗೊಳಿಸಿದ್ದು, ಇದರಿಂದ ಸ್ಮಾರ್ಟ್ ಫೋನ್ ಬಳಕೆದಾರರ ನಡುವೆ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಏಕೆಂದರೆ ಈ ವರದಿ ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ
ವರದಿ ಜಾರಿಗೊಳಿಸಿದ ಸೈಪಿಯನ್ ಲ್ಯಾಬ್
ಸೈಪಿಯನ್ ಲ್ಯಾಬ್ ಇತ್ತೀಚೆಗಷ್ಟೇ ಒಂದು ಅಧ್ಯಯನವನ್ನು ಕೈಗೊಂಡಿದ್ದು, ಅದರ ವಿವರಗಳು ಇದೀಗ ಬಹಿರಂಗಗೊಂಡಿವೆ. ಈ ಅಧ್ಯಯನವನ್ನು ನಡೆಸಿರುವ ಬಳಕೆದಾರರ ಪ್ರಕಾರ 18 ರಿಂದ 24 ವರ್ಷದೊಳಗಿದೆ ಯುವಕರ ಹಾಳಾಗುತ್ತಿರುವ ಮಾನಸಿಕ ಆರೋಗ್ಯದ ಪ್ರಮುಖ ಕಾರಣ ಸ್ಮಾರ್ಟ್ ಫೋನ್ ಬಳಕೆ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವರದಿಯ ಪ್ರಕಾರ, ಮೊದಲು ಇಂಟರ್ನೆಟ್ ಹೆಚ್ಚಾಗಿ ಬಳಕೆಯಾಗುತ್ತಿರಲಿಲ್ಲ. 18 ವಯಸ್ಸು ತಲುಪುವವರೆಗೆ ಯುವಕರು ತಮ್ಮ ಕುಟುಂಬ ಹಾಗೂ ಬಂಧು-ಮಿತ್ರರ ಜೊತೆಗೆ ಸುಮಾರು 15 ರಿಂದ 18 ಸಾವಿರ ಗಂಟೆಗಳು ಕಳೆದಿರುತ್ತಿದ್ದರು. ಇಂದು ಈ ಸಮಯ 15 ಸಾವಿರ ಗಂಟೆಗಳಿಂದ 5 ಸಾವಿರ ಗಂಟೆಗಳಿಗೆ ಇಳಿಕೆಯಾಗಿದೆ ಎನ್ನಲಾಗಿದೆ.
ವರದಿಯಲ್ಲಿ ಅಪಾಯಕಾರಿ ಅಂಶ ಬಹಿರಂಗ
ಈಗ ಸೈಪಿಯನ್ ಲ್ಯಾಬ್ ವರದಿಯಲ್ಲಿ ಬಹಿರಂಗಗೊಂಡ ಅಪಾಯಕಾರಿ ಸಂಗತಿಯಾದರೂ ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಅಧ್ಯಯನ ನಡೆಸಿರುವ ವಿಜ್ಞಾನಿಗಳ ಪ್ರಕಾರ, ಅತಿಯಾಗಿ ಸ್ಮಾರ್ಟ್ ಫೋನ್ ಬಳಸುವ ಜನರ ಮನಸ್ಸಿನಲ್ಲಿ ಆತ್ಮಹತ್ಯೆಯ ಯೋಚನೆಗಳು ಹೆಚ್ಚು ಬರುತ್ತವೆ ಎಂದಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸೈಪಿಯನ್ ಲ್ಯಾಬ್ ನ ಪ್ರಮುಖ ವಿಜ್ಞಾನಿ ತಾರಾ ತ್ಯಾಗರಾಜನ್, ಸ್ಮಾರ್ಟ್ ಫೋನ್ ಬಳಕೆ ಜನರಲ್ಲಿ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ಜನರು ಪರಸ್ಪರ ಮಾತನಾಡುವುದನ್ನೇ ಮರೆತುಬಿಟ್ಟಿದ್ದಾರೆ ಎಂದಿದ್ದಾರೆ. ಜನರು ಪರಸ್ಪರ ಭೇಟಿಯಾಗದೆ ಹೋದರೆ, ಮುಖದ ಅಭಿವ್ಯಕ್ತಿಗಳನ್ನು ಓದಲು, ದೇಹ ಭಾಷೆಯನ್ನು ಅರ್ಥಮಾಡಿಕೊಳ್ಳಲು, ಜನರ ಭಾವನೆಗಳಿಗೆ ಗಮನ ಕೊಡಲು ಮತ್ತು ನಿಜ ಜೀವನದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಅವರು ಸಮಾಜದೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತಿಲ್ಲ ಮತ್ತು ನಂತರ ಅವರ ಮನಸ್ಸಿನಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳು ಬರುತ್ತವೆ ಎಂದು ತಾರಾ ಹೇಳಿದ್ದಾರೆ.
ಇದನ್ನೂ ಓದಿ-Kisan Credit Card ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ? ಇಲ್ಲಿದೆ ನಿಜಾಂಶ
ಈ ಅಧ್ಯಯನವನ್ನು ನಡೆಸಲು ಸುಮಾರು 34 ದೇಶಗಳ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಹಾಗೂ ಜನರ ಸ್ಮಾರ್ಟ್ ಫೋನ್ ಮೇಲಿನ ಅವಲಂಬನೆ 2010ರಿಂದಲೇ ಆರಂಭಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಿರುವಾಗ ನಿಮ್ಮ ಸ್ಮಾರ್ಟ್ ಫೋನ್ ಗೆ ನೀವು ಗುಲಾಮರಾಗಬಾರದು ಎಂಬುದು ನಮ್ಮ ಸಲಹೆ ಹಾಗೂ ದಿನದಲ್ಲಿ ನೀವು ಎಷ್ಟು ಸಮಯವನ್ನು ಸ್ಮಾರ್ಟ್ ಫೋನ್ ಗೆ ನೀಡುತ್ತಿರುವಿರಿ ಎಂಬುದರ ಮೇಲೆ ನೀವು ಖುದ್ದಾಗಿ ನಿಗಾವಹಿಸಬೇಕು.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.