ನವದೆಹಲಿ : ಸೋನಿ ಇಂಡಿಯಾ ಶುಕ್ರವಾರ ಹೊಸ Sony Bravia XR Master Series 85Z9J 85- ಇಂಚಿನ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ಗ್ರಾಹಕರಿಗಾಗಿ ಕಾಗ್ನೆಟಿವ್ ಪ್ರೊಸೆಸರ್ ಎಕ್ಸ್ ಆರ್ ನಿಂದ ನಿಯಂತ್ರಿಸಲ್ಪಡುತ್ತದೆ. 1,299,990 ಬೆಲೆಯ ಈ ಹೊಸ ಟಿವಿ ಶುಕ್ರವಾರದಿಂದ, ಆನ್‌ಲೈನ್ (Online)ಮತ್ತು ಆಫ್‌ಲೈನ್ (Ofline) ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ. ಹೊಸ 8 ಕೆ ಎಲ್ಇಡಿ ಟಿವಿ ಹೆಚ್ಚು ಡೆಫಿಶಿನಲ್ ಡಿಸ್ಕ್ರಿಪ್ಶನ್ ಮತ್ತು ಉತ್ತಮ ಸ್ಪಷ್ಟತೆಯೊಂದಿಗೆ ಅದ್ಭುತ ಚಿತ್ರವನ್ನು ನೀಡುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಅದ್ಬುತ ಸೌಂಡ್ : 
ಮಾನವ ಮೆದುಳಿನಂತೆ ಯೋಚಿಸುವ ಚತುರ ಕಾಗ್ನೆಟಿವ್ ಪ್ರೊಸೆಸರ್ ಎಕ್ಸ್ ಆರ್ ನೊಂದಿಗೆ, ವೀಕ್ಷಕರನ್ನು ರೋಮಾಂಚನಗೊಳಿಸಲಿದೆ. ಈ ದೊಡ್ಡ ಪರದೆಯ ಟಿವಿಯೊಂದಿಗೆ, ಬಳಕೆದಾರರು ಐಮ್ಯಾಕ್ಸ್ ವರ್ಧಿತ, ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಅಸಾಧಾರಣ ದೃಶ್ಯ ಮತ್ತು ಆಡಿಯೋ (Audio) ಅನುಭವವನ್ನುದೊಂದಿಗೆ ಮನೆಯಲ್ಲಿ ಪಡೆಯಬಹುದು. 


ಇದನ್ನೂ ಓದಿ : ಈ ದಿನದಿಂದ ಆರಂಭವಾಗಲಿದೆ Amazon Great Indian Festival, ಆಗಲಿದೆ ಆಫರ್ ಗಳ ಸುರಿ ಮಳೆ


Sony Bravia XR Master Series 85Z9J ವಿಶೇಷತೆ : 
ಫುಲ್ Array LED ಪ್ಯಾನಲ್, ಎಕ್ಸ್‌ಆರ್ ಕಾಂಟ್ರಾಸ್ಟ್ ಬೂಸ್ಟರ್ 15 ಮತ್ತು ಎಕ್ಸ್‌ಆರ್ ಟ್ರೈಲುಮಿನೋಸ್ ಪ್ರೊನೊಂದಿಗೆ ಹೆಚ್ಚು ವಿವರವಾದ ಮತ್ತು ಹೆಚ್ಚು ನಿಖರವಾದ ಬಣ್ಣಗಳನ್ನು ಹೊಂದಿರುವ ಹೈಲೈಟ್ಸ್ , ಗಾಢವಾದ ಕಪ್ಪು ಬಣ್ಣದ ಅನುಭವವನ್ನು ನೀಡುತ್ತದೆ.  ಇತ್ತೀಚಿನ XR 8 ಕೆ ಅಪ್‌ಸ್ಕೇಲಿಂಗ್ ಮತ್ತು ಮೋಷನ್ ಕ್ಲಾರಿಟಿ ತಂತ್ರಜ್ಞಾನವು ಡೇಟಾದ ಕ್ರಾಸ್ ಎನಾಲಿಸಿಸ್ ಮಾಡಲಿದೆ. 


ಗೂಗಲ್ (Google) ಸಪೋರ್ಟ್ ನಿಂದ ನಡೆಸಲ್ಪಡುವ ಗೂಗಲ್ ಟಿವಿ, ವಾಯ್ಸ್ ಸರ್ಚ್ ಮನರಂಜನೆಯನ್ನು ಒದಗಿಸುತ್ತದೆ. ಆಪಲ್ ಏರ್‌ಪ್ಲೇ ಮತ್ತು ಹೋಮ್‌ಕಿಟ್‌ನೊಂದಿಗೆ ಸಿಮ್ ಲೆಸ್ ಕಾರ್ಯ ನಿರ್ವಹಿಸಲಿದೆ. 


ಇದನ್ನೂ ಓದಿ : IPL 2021: : ಲೈವ್ ಪಂದ್ಯಗಳನ್ನು ವೀಕ್ಷಿಸಿ Paytmನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯಿರಿ, ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.