ನವದೆಹಲಿ : ಸರ್ಚ್ ಇಂಜಿನ್ ಪ್ಲಾಟ್ ಫಾರ್ಮ್ ಗೂಗಲ್ (Google) ಮತ್ತು ಐಫೋನ್ ತಯಾರಕ ಆಪಲ್ (Apple) ತಮ್ಮ ಆಪ್ ಸ್ಟೋರ್ ನಿಂದ (App Store) ಲಕ್ಷಾಂತರ ಆಪ್ ಗಳನ್ನು ನಿಷೇಧಿಸಿವೆ. 2021 ರ ಮೊದಲಾರ್ಧದಲ್ಲಿ 8,13,000 ಕ್ಕಿಂತ ಹೆಚ್ಚು ಆಪ್ ಗಳನ್ನು ಡಿಲೀಟ್ ಮಾಡಲಾಗಿದೆ. ಇದು ಜನರ ಖಾಸಗಿತನಕ್ಕೆ ಧಕ್ಕೆ ತರುತ್ತಿರುತ್ತಿತ್ತು ಎಂದು ಪಿಕ್ಸಲೇಟ್ ನ 'ಎಚ್ 1 2021 ಡಿಲಿಸ್ಟೆಡ್ ಮೊಬೈಲ್ ಆಪ್ಸ್ ವರದಿ' ಬಹಿರಂಗಪಡಿಸಿದೆ.
9 ಬಿಲಿಯನ್ ಜನರಿಂದ ಡೌನ್‌ಲೋಡ್ :
ಈ ಆಪ್‌ಗಳನ್ನು ಡಿಲೀಟ್ ಮಾಡುವ ವೇಳೆಗಾಗಲೇ, ಗೂಗಲ್ ಪ್ಲೇ ಸ್ಟೋರ್‌ನಿಂದ (Google Play store) 9 ಶತಕೋಟಿ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಇದೇ ವೇಳೆ, ಕ್ಯಾಲಿಫೋರ್ನಿಯಾದ ಪಿಕ್ಸಾಲೆಟ್ ಪ್ರಕಾರ, ಈ ಆಪ್‌ಗಳು ಆಪಲ್‌ನ ಆಪ್ ಸ್ಟೋರ್‌ನಿಂದ ತೆಗೆದುಹಾಕುವ ಮೊದಲು, 21 ಮಿಲಿಯನ್ ಗ್ರಾಹಕರ ವಿಮರ್ಶೆಗಳನ್ನು ಮತ್ತು ರೇಟಿಂಗ್‌ಗಳನ್ನು ಹೊಂದಿದ್ದವು. ಆದ್ದರಿಂದ, ಆಪ್ ಸ್ಟೋರ್‌ನಿಂದ (App store) ತೆಗೆದುಹಾಕಿದರೂ, ಲಕ್ಷಾಂತರ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ನು ಕೂಡಾ ಈ ಆಪ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಸದ್ದಿಲ್ಲದೆ ಲಾಂಚ್ ಆಯ್ತು Redmiಯ ಈ Smartphone, 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಎಲ್ಲಾ ವೈಶಿಷ್ಟ್ಯ
12 ವರ್ಷದೊಳಗಿನ ಮಕ್ಕಳೇ ಟಾರ್ಗೆಟ್ :
ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಿಂದ 86 ಪ್ರತಿಶತ ಮೊಬೈಲ್ ಆ್ಯಪ್‌ಗಳು (Mobile app) ಮತ್ತು ಆಪಲ್ ಆಪ್ ಸ್ಟೋರ್‌ನಿಂದ 89 ಪ್ರತಿಶತ ಮೊಬೈಲ್ ಆಪ್‌ಗಳು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಗುರಿಯಾಗಿರಿಸಿಕೊಂಡಿವೆ. 25 ರಷ್ಟು ಪ್ಲೇ ಸ್ಟೋರ್ ಆಪ್‌ಗಳು (Play store app) ಮತ್ತು 59 ಪ್ರತಿಶತ ಆಪ್ ಸ್ಟೋರ್ ಆಪ್‌ಗಳು ಯಾವುದೇ ಗೌಪ್ಯತೆ ನೀತಿಯನ್ನು ಹೊಂದಿಲ್ಲ ಎನ್ನುವುದು ಕೂಡಾ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ರಷ್ಯಾದ ಗೂಗಲ್ ಪ್ಲೇ ಸ್ಟೋರ್‌ನಿಂದ 26 ಪ್ರತಿಶತ ಆಪ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು 60 ಪ್ರತಿಶತ ಆಪ್‌ಗಳನ್ನು ಚೀನೀ ಆಪ್ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ ಎಂದು ವರದಿ ಹೇಳಿದೆ. ಚೀನೀ ಆಪ್ ಸ್ಟೋರ್‌ನಲ್ಲಿ ಯಾವುದೇ ಗೌಪ್ಯತಾ ನೀತಿ ಇರಲಿಲ್ಲ.
ರನ್ಟೈಮ್ ಪರ್ಮಿಶನ್ ಮೂಲಕ ಅಕ್ಸೆಸ್ :
ತೆಗೆದುಹಾಕಲಾದ ಸುಮಾರು 66 ಪ್ರತಿಶತ ಗೂಗಲ್ ಆಪ್‌ಗಳು ಕನಿಷ್ಠ ಒಂದು ಅಪಾಯಕಾರಿ ಪರ್ಮಿಶನ್ ಅನ್ನು ಹೊಂದಿದೆ. ಈ ಅಪಾಯಕಾರಿ ಪರ್ಮಿಶನ್ ಅನ್ನು ರನ್ಟೈಮ್ ಪರ್ಮಿಶನ್ (runtime permision) ಎಂದೂ ಕರೆಯಲಾಗುತ್ತದೆ. ಈ ಕಾರಣದಿಂದಾಗಿ, ಈ ಅಪ್ಲಿಕೇಶನ್‌ಗಳು ಡೇಟಾಕ್ಕೆ ಸುಲಭವಾಗಿ ಅಕ್ಸೆಸ್ ಪಡೆಯುತ್ತವೆ. ಇದು ಸಿಸ್ಟಮ್ ಮತ್ತು ಇತರ ಅಪ್ಲಿಕೇಶನ್‌ಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಬ್ಯಾನ್ ಮಾಡಿರುವ ಅನೇಕ ಆಪ್ ಗಳು ಕ್ಯಾಮರಾಗೂ ಆಕ್ಸೆಸ್ ಪಡೆದಿದ್ದವು.
ಇದನ್ನೂ ಓದಿ : ಸಿಸಿಐನ ಗೌಪ್ಯ ವರದಿಯ ಸೋರಿಕೆಯ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋದ ಗೂಗಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ