ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ SSLV (ಸಣ್ಣ ಉಪಗ್ರಹ ಉಡ್ಡಯನ ವಾಹನ)ವನ್ನು ಉಡಾವಣೆ ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್  7 ರಂದು ಬೆಳಗ್ಗೆ 9:18 ಕ್ಕೆ ಉಡಾವಣೆ ಆಗಲಿದೆ ಎಂದು ತಿಳಿಸಿದೆ.


SSLV ವಿಶೇಷತೆ ಏನು? ಭಾರತೀಯ ಅಂತರಿಕ್ಷ ಚರಿತ್ರೆಯಲ್ಲಿ SSLV ಪ್ರಾಮುಖ್ಯತೆ ಏನು?


SSLV ಅಂದರೆ, ಸಣ್ಣ ಉಪಗ್ರಹ ಉಡ್ಡಯನ ವಾಹನ.ಇಸ್ರೋದಲ್ಲಿ ಈ ವರೆಗೆ  PSLV (ಪೋಲಾರ್ ಉಪಗ್ರಹ ಉಡ್ಡಯನ ವಾಹನ) ಹಾಗೂ GSLV (Geosynchronous ಉಪಗ್ರಹ ಉಡ್ಡಯನ ವಾಹನ) ಹೊಂದಿತ್ತು. ಈಗ ಮೂರನೇ ಉಪಗ್ರಹ ಉಡ್ಡಯನ ವಾಹನವಾದ SSLV ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಸೇರ್ಪಡೆಗೊಂಡಿದೆ.ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!


SSLV ವಿಶೇಷತೆ ಅಂದರೆ, ಸಣ್ಣ ಉಪಗ್ರಹಗಳನ್ನ ಭೂಮಿಯ ಕಡಿಮೆ ಅಂತರದಲ್ಲಿ ಕಕ್ಷಗೆ (LEO: Low earth orbit) ತಲುಪಿಸಲು ಸಹಕಾರಿ ಆಗಲಿದೆ. ಹಾಗಾಗಿ ಈ ಉಪಗ್ರಹ ಉಡ್ಡಯನ ವಾಹನ ಬಳಸಿಕೊಂಡು ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು ತಮಗೆ ಬೇಕಿರುವ ಉಪಗ್ರಹಗಳನ್ನ ISRO ಸಹಾಯದೊಂದಿಗೆ ಉಡಾವಣೆ ಮಾಡಬಹುದು. ಇದರಿಂದ ವಿಶ್ವ ಅಂತರಿಕ್ಷಗಳ ಸ್ಪರ್ಧೆಯಲ್ಲಿ ಭಾರತ ಬಲಿಷ್ಠ ಆಗಲು ಸಹಕಾರಿ ಆಗಲಿದೆ.ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..!


ಮೊದಲ SSLV ಪಯಣದಲ್ಲಿ,  750 ವಿದ್ಯಾರ್ಥಿನಿಯರು 75 ಶಾಲೆಗಳಿಂದ ವಿನ್ಯಾಸ ಮಾಡಿದ "AzaadiSat" ಉಪಗ್ರಹ ಉಡಾವಣೆ ಆಗಲಿದೆ. ಇದರ ಜೊತೆಗೆ ಭೂಮಿ ವೀಕ್ಷಣಾ ಉಪಗ್ರಹ (EOS-2:Earth Observation Sattelites) ಕೂಕಾ ಭೂ ಕಕ್ಷೆ ಸೇರುವ ನಿರೀಕ್ಷೆ ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.