E Aadhaar Card : ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ಗುರುತಿನ ದಾಖಲೆಯಾಗಿದೆ.ಸರ್ಕಾರಿ ಯೋಜನೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ಡಿಜಿಟಲ್ ಗುರುತಿನ ಪುರಾವೆಯಾಗಿಯೂ ಇದನ್ನು ಬಳಸಲಾಗುತ್ತದೆ.ಅಂತಹ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ,ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ.ಆದರೆ ಈಗ ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. UIDAI ಕಾರ್ಡ್‌ದಾರರಿಗೆ ಮತ್ತೆ ಆಧಾರ್ ಮಾಡಲು ಸೌಲಭ್ಯವನ್ನು ಒದಗಿಸುತ್ತದೆ. 


COMMERCIAL BREAK
SCROLL TO CONTINUE READING

ಇ-ಆಧಾರ್ ಪಡೆಯುವುದು ಹೇಗೆ? :
ತನ್ನ ಆಧಾರ್ ಸಂಖ್ಯೆಯನ್ನು ತಿಳಿದಿರುವ ಯಾವುದೇ ವ್ಯಕ್ತಿ ಇ-ಆಧಾರ್ ಅನ್ನು ನೇರವಾಗಿ UIDAI ವೆಬ್‌ಸೈಟ್ ಅಥವಾ mAadhaar ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು.


ಇದನ್ನೂ ಓದಿ : Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?


೧.ಇದಕ್ಕಾಗಿ UIDAI ವೆಬ್‌ಸೈಟ್ myaadhaar.uidai.gov.in/ ಗೆ ಹೋಗಿ.
೨.'ಡೌನ್‌ಲೋಡ್ ಆಧಾರ್' ಮೇಲೆ ಕ್ಲಿಕ್ ಮಾಡಿ.
೩.ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
೪.ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 4 ಅಂಕಿಯ OTP ಅನ್ನು ನಮೂದಿಸಿ. 
೫.OTP ನಮೂದಿಸಿದ ಬಳಿಕ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
೬. ನಿಮ್ಮ ಇ-ಆಧಾರ್ ಅನ್ನು PDF ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿ ಕೊಳ್ಳಬಹುದು. 
೭.ಭವಿಷ್ಯದ ಬಳಕೆಗಾಗಿ PDF ಫೈಲ್ ಅನ್ನು  ಸೇವ್ ಮಾಡಿಕೊಳ್ಳಿ. 


PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡುವುದು ಹೇಗೆ? :
ಈಗ ತಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಿವಿಸಿ ಕಾರ್ಡ್‌ಗೆ ಪರಿವರ್ತಿಸಬಹುದು.UIDAI ವೆಬ್‌ಸೈಟ್‌ಗೆ ಭೇಟಿ ನೀಡಿ 50 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.


ಇದನ್ನೂ ಓದಿ ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ


UIDAI ವೆಬ್‌ಸೈಟ್ atuidai.gov.in/ ಗೆ ಹೋಗಿ ಮತ್ತು ನನ್ನ ಆಧಾರ್ ಟ್ಯಾಬ್ ಕ್ಲಿಕ್ ಮಾಡಿ. ನಂತರ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಅನ್ನು ಕ್ಲಿಕ್ ಮಾಡುವ ಮೂಲಕ ಆರ್ಡರ್ ಮಾಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.