ಬೆಂಗಳೂರು : ಹಲವು ಬಾರಿ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.ಇದು ಯಾಕೆ ಹೀಗಾಗುತ್ತದೆ ಎಂದು ಒಮ್ಮೆಗೆ ಯೋಚಿಸಿದರೂ ಅನಂತರ ಅಷ್ಟು ತಲೆಕೆಡಿಸಿಕೊಳ್ಳದೆ ಬಿಟ್ಟು ಬಿಡುತ್ತೇವೆ. ಆದರೆ ಇದು ಸರಿಯಲ್ಲ.ನಮಗೆ ತಿಳಿಯದೆ ನಮ್ಮ ಫೋನಿನಲ್ಲಿ ಬದಲಾವಣೆ ಕಂಡು ಬರುತ್ತಿದೆ ಎಂದರೆ ಎಲ್ಲೋ ಏನೋ ಎಡವಟ್ಟು ಆಗಿದೆ ಎಂದೇ ಅರ್ಥ.ಹೌದು ನಮ್ಮ ಫೋನಿನಲ್ಲಿ ಕಂಡು ಬರುವ ಈ ಬದಲಾವಣೆಗಳ ಹಿಂದೆ ಫೋನ್ ಟ್ಯಾಪಿಂಗ್ ಒಂದು ದೊಡ್ಡ ಕಾರಣವಾಗಿರಬಹುದು.ಇಂದಿನ ಕಾಲದಲ್ಲಿ,ಇದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುವುದಿಲ್ಲ.


COMMERCIAL BREAK
SCROLL TO CONTINUE READING

ಫೋನ್ ಹ್ಯಾಂಗ್ ಆಗುವುದು : 
ಸ್ಟೋರೇಜ್ ತುಂಬಿ ಹೋದಾಗ ಫೋನ್ ಹ್ಯಾಂಗ್ ಆಗುವುದು ಕಾಮನ್. ಆದರೆ, ಸ್ಟೋರೇಜ್ ಖಾಲಿ ಮಾಡಿದ ನಂತರವೂ ಈ ಸಮಸ್ಯೆ ಮುಂದುವರಿದರೆ,ನಿಮ್ಮ ಫೋನ್ ಹ್ಯಾಕ್ ಆಗಿರಬಹುದು ಅಥವಾ ಸ್ಮಾರ್ಟ್ಫೋನ್ ಅನ್ನು ಟ್ಯಾಪ್ ಮಾಡಿರಬಹುದು. ಹೀಗಾದಾಗ  ಸ್ಮಾರ್ಟ್ಫೋನ್ ಬಳಸುವುದನ್ನು ತಕ್ಷಣ ನಿಲ್ಲಿಸಬೇಕು ಮತ್ತು ಅದನ್ನು ಪರಿಶೀಲಿಸಬೇಕು.


ಇದನ್ನೂ ಓದಿ : ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯ


ಡೇಟಾ ಖಾಲಿಯಾಗುವುದು : 
ಸ್ಮಾರ್ಟ್‌ಫೋನ್‌ನಲ್ಲಿ, ಇಂಟರ್ನೆಟ್ ಅನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದಾಗ, ದೇತಾ ಖಾಲಿಯಾಗುತ್ತದೆ.ಆದರೆ ನೀವು ಲೆಕ್ಕಕ್ಕಿಂತ ಜಾಸ್ತಿ ಇಂಟರ್ ನೆಟ್ ಬಳಸದೆ ಇದ್ದರೂ ನೆಟ್ ಖಾಲಿಯಾಗುತ್ತಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಟ್ಯಾಪ್ ಆಗಿರುವ ಸಾಧ್ಯತೆಯಿದೆ. 


ಬ್ಯಾಟರಿ ಖಾಲಿಯಾಗುವುದು : 
ಸ್ಮಾರ್ಟ್‌ಫೋನ್‌ನ  ಬ್ಯಾಕ್ ಎಂಡ್ ನಲ್ಲಿ ಅಪ್ಲಿಕೇಶನ್ ರನ್ ಆಗುತ್ತಿರುವಾಗ ಅಥವಾ ಯಾವುದೇ ಚಟುವಟಿಕೆಯು ನಿರಂತರವಾಗಿ ನಡೆಯುತ್ತಿರುವಾಗ, ಬ್ಯಾಟರಿ ಡ್ರೈನ್ ಆಗುತ್ತದೆ.  ಆದ್ರೆ ಫೋನ್ ಬಳಸದೆ ಇದ್ದಾಗಲೂ ಬ್ಯಾಟರಿ ಖಾಲಿಯಾಗುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. 


ಇದನ್ನೂ ಓದಿ : ವಾಟ್ಸಾಪ್‌ನಲ್ಲೂ ಬಂತು ಇನ್‌ಸ್ಟಾಗ್ರಾಮ್‌ನಂತ ಫೀಚರ್!


ಡೌನ್‌ಲೋಡ್ ಅಥವಾ ಡೇಟಾ ಶೇರಿಂಗ್ : 
ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿರಂತರ ಡೌನ್‌ಲೋಡ್ ಅಥವಾ ಡೇಟಾ  ಶೇರಿಂಗ್ ಸಮಸ್ಯೆ ಆಗುತ್ತಿದ್ದರೆ ಈ ವಿಷಯವನ್ನು ಕೂಡಾ ಗಂಭೀರವಾಗಿ ಪರಿಗಣಿಸಬೇಕು. ಸ್ಮಾರ್ಟ್‌ಫೋನ್ ಟ್ಯಾಪ್ ಆಗಿರುವುದೇ ಇದರ ಹಿಂದಿನ ಕಾರಣ ಆಗಿರಬಹುದು. 


ಲೋಕೇಶನ್ ಸೆಟ್ಟಿಂಗ್‌ : 
ಸ್ಮಾರ್ಟ್‌ಫೋನ್ ನಲ್ಲಿ ಲೋಕೇಶನ್ ಸೆಟ್ಟಿಂಗ್‌ಗಳನ್ನು ಯಾವಾಗಲೂ ಕ್ಲೋಸ್ ಆಗಿರಬೇಕು. ನೀವು ಇದನ್ನು ಕ್ಲೋಸ್ ಮಾಡಿದ್ದರೂ ಲೋಕೇಶನ್ ಸೆಟ್ಟಿಂಗ್ ತಾನಾಗಿಯೇ ಓಪನ್ ಆಗಿದೆ ಎಂದಾದರೆ ಅದು ಟೆಕ್ನಿಕಲ್ ಎರರ್ ಅಲ್ಲ, ಫೋನ್ ಟ್ಯಾಪ್ ಆಗಿದೆ ಎಂದರ್ಥ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.