ಈಗಷ್ಟೇ ಡ್ರೈವಿಂಗ್ ಕಲಿಯುತ್ತಿದ್ದೀರಾ? ಲರ್ನರ್ ಡಿಎಲ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ
Learner DL: ನೀವು ಈಗಷ್ಟೇ ಡ್ರೈವಿಂಗ್ ಕಲಿಯುತ್ತಿದ್ದೀರಾ? ಹಾಗಿದ್ದರೆ, ತಡಮಾಡದೆ ಲರ್ನರ್ ಡಿಎಲ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಇದಕ್ಕಾಗಿ, ಇಲ್ಲಿದೆ ಸುಲಭ ಪ್ರಕ್ರಿಯೆ.
How To Get LLR: ದ್ವಿಚಕ್ರ ವಾಹನವಿರಲಿ ಅಥವಾ ಇನ್ನಾವುದೇ ವಾಹನವನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ (Driving License) ತುಂಬಾ ಅಗತ್ಯ. ಆದಾಗ್ಯೂ, ಹೊಸದಾಗಿ ವಾಹನ ಚಲಾಯಿಸುವುದನ್ನು ಕಲಿಯುತ್ತಿರುವವರು ಮೊದಲಿಗೆ ಲರ್ನರ್ ಡಿಎಲ್ (Learner DL) ಪಡೆಯಬೇಕು.
ಹೌದು, ನೀವು ಡ್ರೈವಿಂಗ್ ಲೈಸೆನ್ಸ್ ((Driving License)) ಪಡೆಯುವ ಮೊದಲು ಲರ್ನರ್ ಡ್ರೈವಿಂಗ್ ಲೈಸೆನ್ಸ್ (Learner Driving License) ಪಡೆಯಬೇಕು. ಬಳಿಕವಷ್ಟೇ ಶಾಶ್ವತ ಪರವಾನಗಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಎಲ್ಲಿಯೂ ಹೋಗುವ ಅಗತ್ಯವಿಲ್ಲ. ನೀವಿರುವಲ್ಲಿಯೇ ಲರ್ನರ್ ಡಿಎಲ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ- ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗಿಲ್ಲದಿದ್ದರೆ ಈಗಲೇ ಈ ಕೆಲಸ ಮಾಡಿ, ಇಲ್ಲವೇ ಖಾಲಿಯಾಗುತ್ತೆ ಖಾತೆ!
ಕಲಿಕೆ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
1. ಆಧಾರ್ ಕಾರ್ಡ್ (Aadhaar Card)
2. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
3. ಸಹಿ
ಇದನ್ನೂ ಓದಿ- ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಇದರಿಂದಾಗುವ ಸಮಸ್ಯೆಗಳ ಬಗ್ಗೆ ಈಗಲೇ ಅರಿತುಕೊಳ್ಳಿ
ಈ ಕೆಳಗೆ ಉಲ್ಲೇಖಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ (LLR) ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು:
ಹಂತ- 1: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಅಧಿಕೃತ ವೆಬ್‌ಸೈಟ್‌ಗೆ sarathi.parivahan.gov.in. ಭೇಟಿ ನೀಡಿ.
ಹಂತ- 2: "ಆನ್‌ಲೈನ್ ಸೇವೆಗಳು" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ- 3: "ಕಲಿಕೆ ಪರವಾನಗಿ" ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ- 4: ಮುಂದಿನ ಬಾಕ್ಸ್ ನಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.
ಹಂತ- 5: "ಅರ್ಜಿದಾರ" ಆಯ್ಕೆಯನ್ನು ಆರಿಸಿ.
ಹಂತ- 6: ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ- 7: "ಜನರೇಟ್ OTP" ಮೇಲೆ ಕ್ಲಿಕ್ ಮಾಡಿ.
ಹಂತ- 8: ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ ಓಟಿಪಿ ಅನ್ನು ನಮೂದಿಸಿ.
ಹಂತ- 9: ನಂತರ "ಸಲ್ಲಿಸು" ಕ್ಲಿಕ್ ಮಾಡಿ.
ಹಂತ- 10: ಮುಂದಿನ ಪುಟದಲ್ಲಿ ಕಾಣುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ- 11: ಅರ್ಜಿ ನಮೂನೆಯಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ, ವಿಳಾಸ ಮತ್ತು ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ಹಂತ- 12: ನಿಗದಿತ ಜಾಗದಲ್ಲಿ ನಿಮ್ಮ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಹಂತ- 13: ಎಲ್ಲವನ್ನೂ ಭರ್ತಿ ಮಾಡಿದ ನಂತರ "ಶುಲ್ಕ" ಎಂಬ ಟ್ಯಾಬ್ ಮೇಲೆ ಕ್ಲಿಕ್ಕಿಸಿ.
ಹಂತ- 14: ನಿಮ್ಮ ರಾಜ್ಯ ಸರ್ಕಾರವು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ. ಬಳಿಕ ಸಲ್ಲಿಸಿ.
ಹಂತ- 15: ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಕಲಿಕೆಯ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ 15 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ನೀವು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.