ಹೊಸ ಸೂಪರ್ ಕ್ಯಾರಿ ಬಿಡುಗಡೆ ಮಾಡಿದ ಮಾರುತಿ ! ಬೆಲೆ ಕೇವಲ 5.15 ಲಕ್ಷ !
Maruti Super Carry Price and Features: ಮಾರುತಿ ಸೂಪರ್ ಕ್ಯಾರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಒಟ್ಟು ನಾಲ್ಕು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ.
Maruti Super Carry Price and Features : ಮಾರುತಿ ಸುಜುಕಿ ತನ್ನ ಲೈಟ್ ಕಮರ್ಷಿಯಲ್ ವೆಹಿಕಲ್ (LCV) ಮಾರುತಿ ಸೂಪರ್ ಕ್ಯಾರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಸುರಕ್ಷತಾ ವೈಶಿಷ್ಟ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಎಂಜಿನ್ ಇಮೊಬಿಲೈಸರ್ ವಸಿಸ್ಟಮ್ ಅನ್ನು ಇದಕ್ಕೆ ಸೇರಿಸಲಾಗಿದೆ. ಅದರ ಸಿಎನ್‌ಜಿ ಆವೃತ್ತಿಯಲ್ಲಿ ಸಿಎನ್‌ಜಿ ಸಂಪೂರ್ಣ ಖಾಲಿಯಾದ ನಂತರವೂ ಸುಮಾರು 70-75 ಕಿ.ಮೀ. ವರೆಗೆ ಕ್ರಮಿಸಬಹುದು ಎನ್ನುವುದೇ ಈ ಕಾರಿನ ವಿಶೇಷ. ಇದು ಒಟ್ಟು ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.
ಈ ಕಾರಿನ ಬೆಲೆ ಎಷ್ಟು ? :
ಈ ಕಾರು ನಾಲ್ಕು ವೆರಿಯೇಂಟ್ ಗಳಲ್ಲಿ ಬಿಡುಗಡೆಯಾಗಿದ್ದು ಇದರ ಬೆಲೆ ಕ್ರಮವಾಗಿ ಹೀಗಿದೆ.
-ಗ್ಯಾಸೋಲಿನ್ ಡೆಕ್ -5,30,500 ರೂಪಾಯಿ.
-ಗ್ಯಾಸೋಲಿನ್ ಕ್ಯಾಬ್ ಚಾಸಿಸ್ - 5,15,500 ರೂಪಾಯಿ.
-ಸಿಎನ್ ಜಿ ಡೆಕ್ - 6,30,500 ರೂಪಾಯಿ.
-ಸಿಎನ್ ಜಿ ಕ್ಯಾಬ್ ಚಾಸಿಸ್ - 6,15,500 ರೂಪಾಯಿ.
ಇದನ್ನೂ ಓದಿ : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸೆಟ್ಟಿಂಗ್ ಚೇಂಜ್ ಮಾಡಿದ್ರೆ ನೆಟ್‌ವರ್ಕ್ ಇಲ್ಲದಿದ್ರೂ ಕಾಲ್ ಮಾಡಬಹುದು!
ಇಂಜಿನ್ ಮತ್ತು ಪವರ್ :
ಮಾರುತಿ ಸೂಪರ್ ಕ್ಯಾರಿಯು ಕಂಪನಿಯ 1.2L ಅಡ್ವಾನ್ಸ್ಡ್ ಕೆ-ಸೀರೀಸ್ ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನಿಂದ ಚಾಲಿತವಾಗಿದೆ. ಈ ಮಿನಿ-ಟ್ರಕ್‌ನ 4-ಸಿಲಿಂಡರ್ ಎಂಜಿನ್ ಗರಿಷ್ಠ 59.4kW (80.7PS) ಮತ್ತು 104.4Nm ಗರಿಷ್ಠ ಟಾರ್ಕ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಹೊಸ ಎಂಜಿನ್ ಅನ್ನು ಅಪ್ಡೇಟೆಡ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಕನೆಕ್ಟ್ ಮಾಡಲಾಗಿದೆ.
5 ಲೀಟರ್‌ನ ಹೆಚ್ಚುವರಿ ಟ್ಯಾಂಕ್ :
ಈ ಮಿನಿ ಟ್ರಕ್ CNG ಡೆಕ್, ಗ್ಯಾಸೋಲಿನ್ ಡೆಕ್ ಮತ್ತು ಗ್ಯಾಸೋಲಿನ್ ಕ್ಯಾಬ್ ಚಾಸಿಸ್ ರೂಪಾಂತರಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಹೊಸ CNG ಕ್ಯಾಬ್ ಚಾಸಿಸ್ ರೂಪಾಂತರವನ್ನು ಕೂಡಾ ಪರಿಚಯಿಸಿದೆ. ಹೊಸ ಸೂಪರ್ ಕ್ಯಾರಿಯಲ್ಲಿ ಫ್ಲಾಟ್ ಸೀಟ್ ವಿನ್ಯಾಸವನ್ನು ನೀಡಲಾಗಿದೆ. ಇದಲ್ಲದೆ, ಸೂಪರ್ ಕ್ಯಾರಿ ಎಸ್-ಸಿಎನ್‌ಜಿ ರೂಪಾಂತರ 5 ಲೀಟರ್ ತುರ್ತು ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಅಂದರೆ, CNG ಸಂಪೂರ್ಣ ಖಾಲಿಯಾದ ಸಂದರ್ಭದಲ್ಲಿ, ಅದರ ಪೆಟ್ರೋಲ್ ಅನ್ನು ಬಳಸಬಹುದು.
ಇದನ್ನೂ ಓದಿ : ಸರ್ವಿಸ್ ಮಾಡಿಸ್ದೆ ಹಾಗೇ AC ಯೂಸ್ ಮಾಡ್ತೀರಾ, ನಿಮ್ಮ ಪ್ರಾಣಕ್ಕೇ ಕುತ್ತಾಗಬಹುದು ಹುಷಾರ್!
ಸುರಕ್ಷತಾ ವೈಶಿಷ್ಟ್ಯಗಳು :
ಫ್ರಂಟ್ ಡಿಸ್ಕ್ ಬ್ರೇಕ್, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೊಸ ಎಂಜಿನ್ ಇಮೊಬಿಲೈಜರ್ ಸಿಸ್ಟಮ್ ಸೇರಿದಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಸ ಸೂಪರ್ ಕ್ಯಾರಿ ಮಿನಿ-ಟ್ರಕ್ ನಲ್ಲಿ ನೀಡಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.