ಅಡುಗೆ ಮಾಡಲು ಗ್ಯಾಸ್, ವಿದ್ಯುತ್ ಅಗತ್ಯವೇ ಇಲ್ಲ ! ಈ ವಿಶೇಷ ಸ್ಟೌವ್ ಇದ್ದರೆ ಸಾಕು ! ಸೌರ ಒಲೆಗಿಂತ ಸಂಪೂರ್ಣ ಭಿನ್ನ

Surya Nutan Gas Stove : ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಪರಿಹಾರ ನೀಡಲು ವಿನ್ಯಾಸಗೊಳಿಸಲಾದ ವಿಶೇಷ ರೀತಿಯ ತಂತ್ರಜ್ಞಾನವನ್ನು ಸರ್ಕಾರವು ಪ್ರಾರಂಭಿಸಿದೆ. ಈ ಹೊಸ ತಂತ್ರಜ್ಞಾನವೇ ಸೂರ್ಯ ನೂತನ್ ಸೋಲಾರ್ ಸ್ಟೌವ್. 

Written by - Ranjitha R K | Last Updated : Apr 17, 2023, 09:53 AM IST
  • ಅಡುಗೆ ಅನಿಲದ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಗ
  • ಮಾರುಕಟ್ಟೆಗೆ ಒಂದು ವಿಶೇಷ ಸ್ಟೌವ್ ಕಾಲಿಟ್ಟಿದೆ.
  • ಸೂರ್ಯ ನೂತನ್ ಸೋಲಾರ್ ಸ್ಟೌವ್
ಅಡುಗೆ ಮಾಡಲು ಗ್ಯಾಸ್, ವಿದ್ಯುತ್ ಅಗತ್ಯವೇ ಇಲ್ಲ ! ಈ ವಿಶೇಷ ಸ್ಟೌವ್ ಇದ್ದರೆ ಸಾಕು ! ಸೌರ ಒಲೆಗಿಂತ ಸಂಪೂರ್ಣ ಭಿನ್ನ  title=

ಬೆಂಗಳೂರು : ಅಡುಗೆ ಅನಿಲದ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಗ್ಯಾಸ್ ಸಿಲಿಂಡರ್ ದುಬಾರಿ ಎಂದು ಇಂಡಕ್ಷನ್ ಸ್ಟೌವ್, ಓವನ್‌ಗಳನ್ನು ಬಳಸಲು ಮುಂದಾದರೆ ವಿದ್ಯುತ್ ದರದ ಚಿಂತೆ. ಈ ಸಮಸ್ಯೆಗೆ ಪರಿಹಾರದ ರೂಪದಲ್ಲಿ ಮಾರುಕಟ್ಟೆಗೆ ಒಂದು ವಿಶೇಷ  ಸ್ಟೌವ್ ಕಾಲಿಟ್ಟಿದೆ. ಇದನ್ನು ಬಳಸುವುದರಿಂದ ಗ್ಯಾಸ್ ಅಥವಾ ಇಂಡಕ್ಷನ್ ಅಗತ್ಯವಿರುವುದಿಲ್ಲ. ಈ ಸ್ಟೌವ್ ಅನ್ನು ಒಮ್ಮೆ ಖರೀದಿಸಿದರೆ ಸಾಕು ಜೀವನ ಪರ್ಯಂತ ಇಂಧನದ ಬಗ್ಗೆ ಯೋಚಿಸಬೇಕಿಲ್ಲ. ಹಾಗಂತ ಇದು ದುಬಾರಿ ಎನ್ನುವ ಯೋಚನೆ ಕೂಡಾ ಮಾಡಬೇಕಿಲ್ಲ. 

ಸೂರ್ಯ ನೂತನ್ ಸೋಲಾರ್ ಸ್ಟೌವ್ : 
ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಪರಿಹಾರ ನೀಡಲು ವಿನ್ಯಾಸಗೊಳಿಸಲಾದ ವಿಶೇಷ ರೀತಿಯ ತಂತ್ರಜ್ಞಾನವನ್ನು ಸರ್ಕಾರವು ಪ್ರಾರಂಭಿಸಿದೆ. ಈ ಹೊಸ ತಂತ್ರಜ್ಞಾನವೇ ಸೂರ್ಯ ನೂತನ್ ಸೋಲಾರ್ ಸ್ಟೌವ್. ಈ ಸ್ಟೌವ್ ಖರೀದಿಸುವ ಮೂಲಕ ಯಾವುದೇ ಗ್ಯಾಸ್ ಅಥವಾ ವಿದ್ಯುತ್ ವ್ಯಯಿಸದೆ ಜೀವನವಿಡೀ ಅಡುಗೆ ಮಾಡಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಈ ಸ್ಟೌವ್ ಅನ್ನು ಹೊರ ತಂದಿದೆ. ಸೂರ್ಯ ನೂತನ್ ಸ್ಟೌವ್ ಅನ್ನು ಅಡುಗೆಮನೆಯಲ್ಲಿಯೇ ಅಡುಗೆ ಮನೆಯಲ್ಲಿಯೇ ಇಟ್ಟುಕೊಂದು ಬಳಸಬಹುದು.  

ಇದನ್ನೂ ಓದಿ :  ಇವೇ ನೋಡಿ ಸ್ಮಾರ್ಟ್‌ಫೋನ್‌ನಲ್ಲಿ ಹುಡುಗಿಯರು ಅತಿ ಹೆಚ್ಚು ಬಳಸುವ ಆಪ್‌ಗಳು

 24 ಗಂಟೆಗಳ ಕಾಲ ಬಳಸಬಹುದು :
ಈ ಸ್ಟೌವ್ ಅನ್ನು ದಿನದ 24 ಗಂಟೆಗಳ ಕಾಲವೂ ಬಳಸಬಹುದು. ಇದು ಹಳೆಯ ಸೌರ ಒಲೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಸ್ಟೌವ್, ಎರಡು ಘಟಕಗಳಿಂದ ಮಾಡಲ್ಪಟ್ಟಿದೆ. ಒಂದು ಘಟಕವನ್ನು ಅಡುಗೆಮನೆಯಲ್ಲಿ ಇರಿಸಿದರೆ ಇನ್ನೊಂದು ಘಟಕವನ್ನು ಬಿಸಿಲಿನಲ್ಲಿ ಇಡಲಾಗುತ್ತದೆ. ಈ ಮೂಲಕ ಇದನ್ನು ಹಗಲು ರಾತ್ರಿ ಈ ಸ್ಟೌವ್ ಅನ್ನು ಬಳಸಬಹುದು. 

ಬೆಲೆ ಎಷ್ಟು : 
ಸೂರ್ಯ ನೂತನ್ ಸೋಲಾರ್ ಸ್ಟವ್‌ನ ಎರಡು ರೂಪಾಂತರಗಳಲ್ಲಿ  ಲಭ್ಯವಿದೆ. ಒಂದು ವೇರಿಯಂಟ್ ನ ಬೆಲೆ 12 ಸಾವಿರ ರೂಪಾಯಿಯಾದರೆ, ಟಾಪ್ ವೆರಿಯಂಟ್ 23 ಸಾವಿರ ರೂಪಾಯಿಗೆ ಲಭ್ಯವಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈ ಸ್ಟೌವ್ ಅನ್ನು ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಆದರೆ ಇದು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಸ್ಟೌವ್ ಇಂಡಿಯನ್ ಆಯಿಲ್ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಪಂಪ್‌ನಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ.  

ಇದನ್ನೂ ಓದಿ : ಈ ಕಾರುಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದ Hyundai!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News