Super Earth Found - ನವದೆಹಲಿ: ಭೂಮಿಯನ್ನು ಹೊರತುಪಡಿಸಿ ಇತರ ಗ್ರಹಗಳ ಮೇಲೆ ಜೀವನದ ಅಸ್ತಿತ್ವ ಹುಡುಕಾಟಕ್ಕಾಗಿ ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ, ಭೂಮಿಯ ಮಾದರಿಯಲ್ಲಿಯೇ ಜೀವನದ ಅಸ್ತಿತ್ವ ಇರುವ ಗ್ರಹ ಇದುವರೆಗೆ ಪತ್ತೆಯಾಗಿಲ್ಲ. ಆದರೆ, ನಮ್ಮ ಆಕಾಶಗಂಗೆಯ ಒಂದು ನಕ್ಷತ್ರದ ಸುತ್ತ ಸುತ್ತುತ್ತಿರುವ ಇಂತಹ ಒಂದು ಗ್ರಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ಗ್ರಹದಲ್ಲಿ ತಾಪಮಾನ ಹಾಗೂ ಬಂಡೆಗಲ್ಲುಗಳೂ ಕೂಡ ಇವೆ ಎನ್ನಲಾಗುತ್ತಿದೆ. ಈ ಗ್ರಹಕ್ಕೆ ವಿಜ್ಞಾನಿಗಳು ಸೂಪರ್ ಅರ್ಥ (Super Earth) ಎಂದು ನಾಮಕರಣ ಮಾಡಿದ್ದಾರೆ. ಆಕಾರದಲ್ಲಿ ಇದು ಭೂಮಿಗಿಂತ ಶೇ.50 ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಗ್ರಹದಲ್ಲಿ ಹಲವು ಅಂಶಗಳ ಪತ್ತೆ 
ಅಮೆರಿಕಾದ ಆಸ್ಟ್ರೋನಾಮಿಕಲ್ ಸೊಸೈಟಿಯ ಸಭೆಯಲ್ಲಿ ಈ ಹೊಸ ಸಂಶೋಧನೆಯನ್ನು ಮಂಡಿಸಲಾಗಿದೆ. TOI-561b ಹೆಸರಿನ ಈ ಗ್ರಹ ತನ್ನ ನಕ್ಷತ್ರದ ಸುತ್ತ ಒಂದು ಸುತ್ತು ಪೂರ್ಣಗೊಳಿಸಲು ಕೇವಲ ಅರ್ಧ ದಿನ ಮಾತ್ರ ಸಾಕು. ತನ್ನ ನಕ್ಷತ್ರಕ್ಕೆ ತುಂಬಾ ಹತ್ತಿರವಾಗಿರುವ ಕಾರಣ ಈ ಗ್ರಹದ ಮೇಲ್ಮೈ ಉಷ್ಣಾಂಶ 2000K ಇದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾಗಿರುವ NASA ಮಿಷನ್ವೊಂದು ಈ ಸೂಪರ್ ಅರ್ಥ್ ಅನ್ನು ಪತ್ತೆಹಚ್ಚಿದೆ. ಈ ಗ್ರಹ ಪತ್ತೆಯಾದ ಜಾಗದಲ್ಲಿ ಲೋಹ ಹಾಗೂ  ಮೆಗ್ನೀಷಿಯಂಗಳಂತಹ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರದೇಶಗಳಲ್ಲಿ ಗ್ರಹಗಳ ಅಸ್ತಿತ್ವದ ನಿರೀಕ್ಷೆ ಮಾಡಲಾಗುವುದಿಲ್ಲ. ಸಂಶೋಧಕರು Hawaiiಯ WM ಒಬ್ಸೆರ್ವೇಟರೀ ಸಹಾಯದಿಂದ ಈ ಗ್ರಹದ ದ್ರವ್ಯರಾಶಿ, ಘನತ್ವ ಹಾಗೂ ಪರಿಧಿಯನ್ನು ಪತ್ತೆಹಚ್ಚಲಾಗಿದೆ.


ಇದನ್ನು ಓದಿ-ಕಣ್ಮರೆಯಾದ Supermassive Black Hole, ಭೂಮಿಗೇನು ಅಪಾಯ?


ಈ ಗ್ರಹದ ಮೇಲೆ ಜೀವನದ ಸಾಧ್ಯತೆ
ಈ ಗ್ರಹದ ದ್ರವ್ಯರಾಶಿಯ ಹೊರತಾಗಿ ಇದರ ಘನತ್ವ ಭೂಮಿಗೆ ಸಮನಾಗಿದ್ದು, ಇದನ್ನು ಕಂಡ ಸಂಶೋಧಕರು ಆಶ್ಚರ್ಯಚಕಿತರಾಗಿದ್ದಾರೆ. ಇದರಿಂದ ಈ ಗ್ರಹ ಎಷ್ಟೊಂದು ಹಳೆ ಗ್ರಹವಾಗಿದೆ ಎಂಬ ಸಂಕೇತಗಳನ್ನು ಕಲೆಹಾಕಲಾಗಿದೆ. ಈ ಗ್ರಹದ ಒಳಭಾಗದ ಮಾಹಿತಿಯನ್ನು ಗಮನಿಸಿದರೆ, ಗ್ರಹದಲ್ಲಿ ಜೀವನ ನಡೆಸುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಭೂಮಿಯ ಮಾದರಿಯಲ್ಲಿ ಈ ಗ್ರಹ ಬೆಟ್ಟ-ಗುಡ್ಡಗಳನ್ನು ಹೊಂದಿದ್ದರೂ ಕೂಡ ಈ ಗ್ರಹದ ತಾಪಮಾನ ತುಂಬಾ ಅಧಿಕವಾಗಿದೆ. ಹೀಗಾಗಿ ಹಿಂದೊಮ್ಮೆ ಈ ಗ್ರಹದಲ್ಲಿ ಜೀವನ ಅಸ್ತಿತ್ವದಲ್ಲಿತ್ತಾ? ಎಂಬುದನ್ನು ಅರಿಯುವುದು ವಿಜ್ಞಾನಿಗಳ ಪಾಲಿಗೆ ಕುತೂಹಲಕಾರಿ ಸಂಗತಿಯಾಗಿದೆ.


ಇದನ್ನು ಓದಿ- Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್


ಈ ಅಧ್ಯಯನದ ಮುಖ್ಯ ಲೇಖಕ ಲಾರನ್ ವೇಸ್ ಹೇಳುವ ಪ್ರಕಾರ, ಇದುವರೆಗೆ ಪತ್ತೆಹಚ್ಚಲಾಗಿರುವ ಬಂಡೆಗಲ್ಲುಗಳಿಂದ ಕೂಡಿದ ಗ್ರಹಗಳಲ್ಲಿ ಈ ಗ್ರಹ ಅತ್ಯಂತ ಹಳೆ ಗ್ರಹವಾಗಿದೆ ಎಂದು ಹೇಳಿದ್ದಾರೆ. ನಮ್ಮ ಆಕಾಶಗಂಗೆ ಅಂದರೆ ಮಿಲ್ಕಿ ವೇ ಗ್ಯಾಲಕ್ಸಿ 12 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿದೆ ಎಂದು ಹೇಳಲಾಗುತದೆ. ಪ್ರಸ್ತುತ ದೊರೆತಿರುವ ನಕ್ಷತ್ರ ಹಾಗೂ ಅದರ ಗ್ರಹಗಳು 10 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿವೆ. ನಮ್ಮ ಸೂರ್ಯನಿಗೆ 4.5 ಶತಕೋಟಿ ವರ್ಷಗಳು ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನು ಓದಿ- ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.