BSNL Broadband Plan Best Offer: ತಂತ್ರಜ್ಞಾನದ ಈ ಯುಗದಲ್ಲಿ ಇಂಟರ್ನೆಟ್ ಇಲ್ಲದೆಯೇ ಒಂದು ದಿನ ಕಳೆಯುವುದು ಕೂಡ ಕಷ್ಟಸಾಧ್ಯವಾಗಿದೆ. ಹೀಗಿರುವಾಗ ಮೊಬೈಲ್ ನಲ್ಲಿನ ಡೇಟಾ ಜೊತೆಗೆ ಜನರು ತಮ್ಮ ತಮ್ಮ ಮನೆಗಳಲ್ಲಿಯೂ ಕೂಡ ವೈಫೈ ಅಳವಡಿಸುತ್ತಿದ್ದಾರೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ಇಂಟರ್ನೆಟ್ ಅಳವಡಿಸಲು ಯೋಜನೆ ರೂಪಿಸುತ್ತಿದ್ದರೆ ಮತ್ತು ಕೈಗೆಟಕುವ ದರದ ಯೋಜನೆಯ ಹುಡುಕಾಟದಲ್ಲಿದ್ದರೆ, ನಮ್ಮ ಬಳಿಗೆ ನಿಮಗಾಗಿಯೇ ಒಂದು ಯೋಜನೆ ಇದೆ. ಈ ಯೋಜನೆಯಲ್ಲಿ ನೀವು ಕೇವಲ 99 ರೂ.ಗಳಲ್ಲಿ 3300 ಜಿಬಿಗಿಂತ ಹೆಚ್ಚಿನ ಡೇಟಾ ಮತ್ತು ಆಕರ್ಷಕ ಪ್ರಯೋಜನೆಗಳನ್ನು ಪಡೆಯಬಹುದು. 

COMMERCIAL BREAK
SCROLL TO CONTINUE READING

ಈ ಕಂಪನಿಯ ಬ್ರಾಡ್ ಬ್ಯಾಂಡ್ ಪ್ಲಾನ್ ತುಂಬಾ ಸೂಪರ್ ಹಿಟ್ ಆಗಿದೆ
ಇಲ್ಲಿ ನಾವು ನಿಮಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ನ ಒಂದು ಪ್ರೀಪೇಯ್ಡ್ ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗೆ ನೋಡಿದರೆ ಈ ಯೋಜನೆಯ ಬೆಲೆ ರೂ.599 ಆಗಿದೆ. ಈ ಪ್ಲಾನ್ ನಲ್ಲಿ ನಿಮಗೆ 3000 ಜಿಬಿಗೂ ಅಧಿಕ ಇಂಟರ್ನೆಟ್ ಜೊತೆಗೆ ಹಲವು ಆಕರ್ಷಕ ಪ್ರಯೋಜನಗಳು ಸಿಗುತ್ತವೆ. ಬಿಎಸ್ಎನ್ಎಲ್ ನ ಬ್ರಾಡ್ ಬ್ಯಾನ್ಸ್ ಸೇವೆಯಾಗಿರುವ ಭಾರತ ಫೈಬರ್ ಅಡಿ ಈ ಪ್ಲಾನ್ ಒದಗಿಸಲಾಗುತ್ತಿದೆ. 


ಇದನ್ನೂ ಓದಿ-Recharge Plan: ನಿತ್ಯ 3ಜಿಬಿ+16ಜಿಬಿ ಹೆಚ್ಚುವರಿ ಡೇಟಾ, 1 ವರ್ಷದ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ, ಯಾವ ಟೆಲಿಕಾಂ ಕಂಪನಿ ಯೋಜನೆ?


ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಈ ಯೋಜನೆ
ಈ ಪ್ಲಾನ್ ಅಡಿ ನಿಮಗೆ 3.3 TBಗೂ ಅಧಿಕ ಇಂಟರ್ನೆಟ್ ನೀಡಲಾಗುತ್ತಿದೆ. ಈ ಇಂಟರ್ನೆಟ್ ನಿಮಗೆ 60 ಎಂಬಿಪಿಎಸ್ ವೇಗದಲ್ಲಿ ಸಿಗುತ್ತದೆ. ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗ 2ಎಂಬಿಪಿಎಸ್ ಗೆ ಇಳಿಕೆಯಾಗಲಿದೆ. ಈ ಪ್ಲಾನ್ ಅಡಿ ನಿಮಗೆ ಅನಿಯಮಿತ ವೈಸ್ ಕಾಲಿಂಗ್ ಹಾಗೂ ಒಂದು ಫಿಕ್ಸಡ್ ಲ್ಯಾಂಡ್ ಲೈನ್ ಕನೆಕ್ಷನ್ ಕೂಡ ಒದಗಿಸಲಾಗುತ್ತದೆ. ಈ ಯೋಜನೆಯಲ್ಲಿ ಹಲವು ಒಟಿಟಿ ಚಂದಾದಾರಿಕೆಯ ಲಾಭಗಳನ್ನು ಕೂಡ ನೀಡಲಾಗುತ್ತಿದೆ. ಆದರೆ, ಈ ಯೋಜನೆಯ ಬೆಲೆಯಲ್ಲಿ ಶೇ.18ರಷ್ಟು ಜಿಎಸ್ಟಿ ಪ್ರತ್ಯೇಕವಾಗಿ ಅನ್ವಯಿಸಲಾಗುತ್ತದೆ. 


ಇದನ್ನೂ ಓದಿ-ಫೋನ್ ರೀಚಾರ್ಜ್ ಮಾಡಿದರೆ ಸಿಗುತ್ತದೆ 2400 ರೂ ಕ್ಯಾಶ್ ಬ್ಯಾಕ್ ..! ಏನಿದು ಆಫರ್ ?


ಕೇವಲ 99 ರೂ.ಗಳಲ್ಲಿ 3300ಜಿಬಿ ಡೇಟಾ ಹಾಗೂ ಎಲ್ಲಾ ಸೌಲಭ್ಯಗಳು ಲಭ್ಯ
ಬಿಎಸ್ಎನ್ಎಲ್ ನ 599 ರೂ.ಗಳ ಯೋಜನೆಯ ಕುರಿತು ಹೇಳುವುದ್ದಾರೆ, ಕಂಪನಿ ಮೊಟ್ಟಮೊದಲ ಬಾರಿಗೆ ಈ ಸೇವೆಯನ್ನು ಬಳಸುವ ಬಳಕೆದಾರರಿಗೆ ಕಂಪನಿ ಶೇ.90 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಅಂದರೆ, ಈ ಪ್ಲಾನ್ ಅನ್ನು ಮೊಟ್ಟಮೊದಲ ಬಾರಿಗೆ ಪಡೆದುಕೊಳ್ಳುವವರಿಗೆ ಮೊದಲ ತಿಂಗಳಿನಲ್ಲಿ ಶೇ.90 ರಷ್ಟು ಅಥವಾ ಮ್ಯಾಕ್ಸಿಮಮ್ 500 ರೂ.ಗಳ ಡಿಸ್ಕೌಂಟ್ ಸಿಗಲಿದೆ. ಈ ರೀತಿ ಈ ಪ್ಲಾನ್ ನಿಮಗೆ ಕೇವಲ 99 ರೂ.ಗಳಿಗೆ ಸಿಗಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.