Excellent Recharge Plan - Vi (ವೊಡಾಫೋನ್-ಐಡಿಯಾ) ಭಾರತೀಯ ಟೆಲಿಕಾಂ ಉದ್ಯಮದಲ್ಲಿ ಮೂರನೇ ಅತಿದೊಡ್ಡ ಕಂಪನಿಯಾಗಿದೆ. ವೊಡಾಫೋನ್ ಐಡಿಯಾದ ಪ್ರಿಪೇಯ್ಡ್ ರೀಚಾರ್ಜ್ ಪೋರ್ಟ್‌ಫೋಲಿಯೊ ಅನೇಕ ಉತ್ತಮ ಯೋಜನೆಗಳನ್ನು ಒಳಗೊಂಡಿದೆ. ಅಂತಹುದೇ ಒಂದು ರೀಚಾರ್ಜ್ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ಯೋಜನೆಯಲ್ಲಿ, ನಿಮಗೆ ದೈನಂದಿನ ಡೇಟಾದೊಂದಿಗೆ ಹೆಚ್ಚುವರಿ ಇಂಟರ್ನೆಟ್ ಅನ್ನು ಒದಗಿಸಲಾಗುತ್ತದೆ. ಇದು ಮಾತ್ರವಲ್ಲದೆ, ಈ ರೀಚಾರ್ಜ್ ಯೋಜನೆಯಲ್ಲಿ ಟೆಲಿಕಾಂ ಪ್ರಯೋಜನಗಳ ಜೊತೆಗೆ, ಕಂಪನಿಯು ಬಳಕೆದಾರರಿಗೆ ಉಚಿತವಾಗಿ ಅವರ ಮನರಂಜನೆಗಾಗಿ OTT ಚಂದಾದಾರಿಕೆಯನ್ನು 1 ವರ್ಷದ ಅವಘಿಗಾಗಿ ನೀಡುತ್ತದೆ.
ಡೇಟಾ ಪ್ರಯೋಜನಗಳು
ವೊಡಾಫೋನ್(Vi) ನ ಈ ರೀಚಾರ್ಜ್ ಯೋಜನೆಯ ಬೆಲೆ 601 ರೂ. ಪ್ರಯೋಜನಗಳ ಕುರಿತು ಹೇಳುವುದಾದರೆ, ಕಂಪನಿಯ ಈ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 3GB ಡೇಟಾ ಪ್ರವೇಶವನ್ನು ಪಡೆಯುತ್ತಾರೆ. ದೈನಂದಿನ ಡೇಟಾ ಕೋಟಾ ಮುಗಿದ ನಂತರ ಇಂಟರ್ನೆಟ್ ವೇಗವು 64Kbps ಗೆ ಇಳಿಯುತ್ತದೆ. ಆದರೆ ಡೇಟಾ ಪ್ರವೇಶದ ವಿಷಯದಲ್ಲಿ, ಈ ಯೋಜನೆಯು ದಿನದ ಅವಧಿಯಲ್ಲಿ ಕೇವಲ 3 GB ಗೆ ಸೀಮಿತವಾಗಿಲ್ಲ, ಆದರೆ ಇದರ ಜೊತೆಗೆ, 16GB ಹೆಚ್ಚುವರಿ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿದೆ. ಈ 16 GB ಡೇಟಾಗಾಗಿ ಕಂಪನಿಯು ಬಳಕೆದಾರರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ ಕಂಪನಿಯ ಈ ಯೋಜನೆಯು ಕೇವಲ 28 ದಿನಗಳ ಸಿಂಧುತ್ವ ಹೊಂದಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಕರೆ ಮತ್ತು SMS
ಡೇಟಾದ ಹೊರತಾಗಿ, ಇತರ ಯೋಜನೆಗಳಂತೆ, ಈ ಯೋಜನೆಯು ಅನಿಯಮಿತ ಧ್ವನಿ ಕರೆ ಸೌಲಭ್ಯ ಒಳಗೊಂಡಿದೆ, ಇದರಲ್ಲಿ ನೀವು ಸ್ಥಳೀಯ ಮತ್ತು ರಾಷ್ಟ್ರೀಯ ಸಂಖ್ಯೆಗಳಲ್ಲಿ ಅನಿಯಮಿತ ಕರೆಯ ಆನಂದವನ್ನು ಅನುಭವಿಸಬಹುದು. ಇದರೊಂದಿಗೆ, ಯೋಜನೆಯಲ್ಲಿ ಪ್ರತಿದಿನ 100 ಉಚಿತ SMS ಸಹ ಉಚಿತವಾಗಿ ನೀಡಲಾಗುತ್ತದೆ.
ಇದನ್ನೂ ಓದಿ-ಟಿಕ್ ಟಾಕ್ ಗೆ ಸೆಡ್ಡು ಹೊಡೆದ ಯೂಟ್ಯೂಬ್, ಶಾರ್ಟ್ಸ್ ಗಳಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ?
ಉಚಿತ OTT ಚಂದಾದಾರಿಕೆ
ಮೇಲೆ ಉಲ್ಲೇಖಿಸಲಾಗಿರುವ ಪ್ರಯೋಜನಗಳು ಸಾಮಾನ್ಯ ಟೆಲಿಕಾಂ ಪ್ರಯೋಜನಗಳಾಗಿವೆ... ಇವೆಲ್ಲವನ್ನೂ ಹೊರತುಪಡಿಸಿ... ಕಂಪನಿಯು ಈ ಪ್ಯಾಕ್‌ನಲ್ಲಿ ತನ್ನ ಬಳಕೆದಾರರಿಗೆ ಮನರಂಜನೆ ಸಂಪೂರ್ಣ ವ್ಯವಸ್ಥೆ ಮಾಡಿದೆ. Vi ನ ರೂ 601 ರೀಚಾರ್ಜ್ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ನ ಮೊಬೈಲ್ OTT ಚಂದಾದಾರಿಕೆಯನ್ನು ಸಹ ಒದಗಿಸುತ್ತದೆ. ವಿಶೇಷತೆ ಎಂದರೆ ಈ ಚಂದಾದಾರಿಕೆಯು 1 ತಿಂಗಳಿಗೆ ಮಾತ್ರವಲ್ಲದೆ ಇಡೀ 1 ವರ್ಷದ ಸಿಂಧುತ್ವ ಹೊಂದಿದೆ.
ಇದನ್ನೂ ಓದಿ-OPPO: ನೀರಿನಲ್ಲಿಯೂ ಹಾಳಾಗಲ್ಲ ಈ ಸ್ಮಾರ್ಟ್‌ಫೋನ್- ಇಲ್ಲಿದೆ ಇದರ ವೈಶಿಷ್ಟ್ಯಗಳು!
ರಾತ್ರಿ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನ ಕೂಡ ಲಭ್ಯ
Vi ನ ಈ ಯೋಜನೆಯಲ್ಲಿ ರಾತ್ರಿ ಡೇಟಾ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ಸೌಲಭ್ಯ ಕೂಡ ಒದಗಿಸಲಾಗಿದೆ. ರಾತ್ರಿ ಡೇಟಾ ಪ್ರಯೋಜನದ ಅಡಿಯಲ್ಲಿ, ಗ್ರಾಹಕರು ಮಧ್ಯಾಹ್ನ 12 ರಿಂದ ಬೆಳಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು ಬಳಸಬಹುದು, ಅದು ಸಂಪೂರ್ಣವಾಗಿ ಉಚಿತವಾಗಿದೆ ಎಂಬುದು ಇಲ್ಲಿ ಗಮನಾರ್ಹ. ಇದಲ್ಲದೇ, ವೀಕೆಂಡ್ ಡೇಟಾ ರೋಲ್‌ಓವರ್ ಬೆನಿಫಿಟ್‌ನಲ್ಲಿ, ಬಳಕೆದಾರರು ಸೋಮವಾರದಿಂದ ಶುಕ್ರವಾರದವರೆಗೆ ಉಳಿದ ದೆತಾವನ್ನು ಶನಿವಾರ ಮತ್ತು ಭಾನುವಾರದಂದು ಉಪಯೋಗಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.