ಬೆಂಗಳೂರು : ಮಾರುತಿ ಬಲೆನೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಎಂಟ್ರಿ ಲೆವೆಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಇದು ಬಹಳ ಜನಪ್ರಿಯಾವಾಗಿದೆ. ಆದರೆ, ಈ ಕಾರನ್ನು ಕೂಡಾ ಇಷ್ಟಪಡದವರು ಇದ್ದಾರೆ. ಕೆಲವು ಗ್ರಾಹಕರಿಗೆ ಬಲೆನೊ ಯಾಕೆ ಇಷ್ಟವಾಗುತ್ತಿಲ್ಲ ಎನ್ನುವುದಕ್ಕೆ ನಾನಾ ಕಾರಣಗಳು ಇರಬಹುದು. ಅಂಥಹ   ಗ್ರಾಹಕರಿಗೆ ಪರ್ಯಾಯವಾಗಿ ಇರಲಿದೆ ಟಾಟಾ ಕಂಪನಿಯ ಈ ಕಾರು. ಬಲೋನೋ ಇಷ್ಟವಾಗದ ಗ್ರಾಹಕರಿಗೆ ಟಾಟಾ ಆಲ್ಟ್ರೋಜ್ ಉತ್ತಮ ಆಯ್ಕೆಯಾಗಿದೆ.  


COMMERCIAL BREAK
SCROLL TO CONTINUE READING

ಈ 5-ಆಸನಗಳ ಪ್ರೀಮಿಯಂ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ನ ಬೆಲೆಯು 6.45 ಲಕ್ಷದಿಂದ ಪ್ರಾರಂಭವಾಗಿ 10.40 ಲಕ್ಷದವರೆಗೆ (ಎಕ್ಸ್ ಶೋರೂಂ)ವರೆಗೆ ಇರುತ್ತದೆ. ಟಾಟಾ ಆಲ್ಟ್ರೋಜ್ ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಇದಲ್ಲದೇ ಇದರಲ್ಲಿ ಸಿಎನ್‌ಜಿ ಆಯ್ಕೆಯೂ ಲಭ್ಯವಾಗಿದ್ದು, ಈ ಕಾರಿನ ಬುಕ್ಕಿಂಗ್ ನಡೆಯುತ್ತಿದೆ. 


ಇದನ್ನೂ ಓದಿ : ಬಿಸಿಲ ಬೇಗೆ ಕಡಿಮೆ ಮಾಡುತ್ತದೆ ಈ ಮಿನಿ ಎಸಿ ! ಬೆಲೆ ಕೇವಲ 990 ರೂಪಾಯಿ


ಕೈಗೆಟುಕುವ ಪ್ರೀಮಿಯಂ CNG  :
ಇದು ಅತ್ಯಂತ ಕೈಗೆಟುಕುವ ಪ್ರೀಮಿಯಂ CNG ಹ್ಯಾಚ್‌ಬ್ಯಾಕ್ ಆಗಿದ್ದು, CNG ಆವೃತ್ತಿಯ ಬೆಲೆಯು 7.55 ಲಕ್ಷದಿಂದ (ಎಕ್ಸ್ ಶೋರೂಂ, ) ಪ್ರಾರಂಭವಾಗುತ್ತದೆ. ಆದರೆ ಬಲೆನೊ CNG 8.35 ಲಕ್ಷದಿಂದ ಪ್ರಾರಂಭವಾಗುತ್ತದೆ. Glanza CNG ಬೆಲೆ  8.50 ಲಕ್ಷದಿಂದ ಪ್ರಾರಂಭವಾಗುತ್ತದೆ.ಅದೇ  Grand i10 Nios CNG ಬೆಲೆ 7.58 ಲಕ್ಷದಿಂದ ಪ್ರಾರಂಭವಾಗುತ್ತದೆ. ಅಂದರೆ CNG ಆವೃತ್ತಿಯಲ್ಲಿ ಅಗ್ಗದ ಕಾರು ಇದೇ ಆಗಿರುತ್ತದೆ.  


ಇದರ 1.2-ಲೀಟರ್  ಪೆಟ್ರೋಲ್ ಎಂಜಿನ್ 86 ನ್ಯಾಚ್ಯುರಲಿ ಆಸ್ಪಿರೆಟೆಡ್   PS/113Nm ಅನ್ನು ಜನರೇಟ್ ಮಾಡುತ್ತದೆ. CNG ಯಲ್ಲಿ ಅದೇ ಎಂಜಿನ್ 73.5 PS ಮತ್ತು 103 Nm ಜನರೆಟ್ ಮಾಡುತ್ತದೆ. ಜೊತೆಗೆ, 1.2L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 110PS/140Nm ಅನ್ನು ಜನರೆಟ್ ಮಾಡುತ್ತದೆ.  ಆದರೆ 1.5L ಡೀಸೆಲ್ ಎಂಜಿನ್ 90PS/200Nm ಉತ್ಪಾದಿಸುತ್ತದೆ.


ಇದನ್ನೂ ಓದಿ : ಇನ್ನು ಚಾಲಕ ರೈಡ್ ಕ್ಯಾನ್ಸಲ್ ಮಾಡುವಂತಿಲ್ಲ : ola ಇಂದಿನಿಂದಲೇ ಆರಂಭಿಸಿದೆ Premium Plus Service


ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ DCT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ. ಹ್ಯಾಚ್‌ಬ್ಯಾಕ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್, ABS, EBD ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಕೂಡಾ ಹೊಂದಿದೆ. ಗ್ಲೋಬಲ್ ಎನ್‌ಸಿಎಪಿಯಿಂದ ಕ್ರ್ಯಾಶ್ ಟೆಸ್ಟ್‌ನಲ್ಲಿ ಆಲ್ಟ್ರೋಜ್ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.