Tata Altroz ​​iCNG Launch: ಟಾಟಾ ಮೋಟಾರ್ಸ್ ತನ್ನ Altroz ​​ಮತ್ತು Punch CNG ಕಾರುಗಳನ್ನು ಆಟೋ ಎಕ್ಸ್ಪೋ 2023 ರಲ್ಲಿ ಪರಿಚಯಿಸಿದೆ. ಅಂದಿನಿಂದ ಇಂದಿನವರೆಗೆ ಈ ಕಾರುಗಳು ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾಯುವಂತಾಗಿದೆ.  ಇದೀಗ ಕಂಪನಿಯು Tata Altroz ​​iCNG ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಗ್ರಾಹಕರ ಕಾಯುವಿಕೆ ಅಂತ್ಯವಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: RCB vs CSK: ಧೋನಿಯನ್ನ ತಬ್ಬಿ ಮುದ್ದಾಡಿದ ವಿರಾಟ್: ಈ ಬಾಂಧವ್ಯದ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಿ


ಕಂಪನಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಟೀಸರ್ ಮೂಲಕ ಟಾಟಾ ಮೋಟಾರ್ಸ್ ಆಲ್ಟ್ರೋಜ್ ಸಿ ಎನ್‌ ಜಿ ಭಾರತದಲ್ಲಿ ಏಪ್ರಿಲ್ 19 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಈ ಕಾರಿನಲ್ಲಿರುವ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.


ಎಂಜಿನ್ ಬಗ್ಗೆ ಮಾತನಾವುದಾದರೆ, ಟಾಟಾ ಅಲ್ಟ್ರೋಜ್ ಸಿ ಎನ್‌ ಜಿ ಆವೃತ್ತಿಯಲ್ಲಿ ಕೇವಲ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 84 bhp ಮತ್ತು 113 Nm ಟಾರ್ಕ್ ಅನ್ನು ಪಡೆದಿದೆ. CNG ಮೋಡ್‌’ನಲ್ಲಿ, ಈ ಎಂಜಿನ್ ಸ್ವಲ್ಪ ಕಡಿಮೆ ಶಕ್ತಿಯನ್ನು ಉತ್ಪಾದಿಸುತ್ತದೆ. ಅದರ ಶಕ್ತಿಯ ಅಂಕಿಅಂಶಗಳು ನೋಡುವುದಾದರೆ, 76 Bhp ಮತ್ತು 97 ಪೀಕ್ ಟಾರ್ಕ್ ಆಗಿದೆ.


ವಿಶೇಷವೆಂದರೆ ಕಂಪನಿಯು ಈ ಕಾರಿನಲ್ಲಿ ಡಬಲ್ ಸಿಲಿಂಡರ್ ಸಿಎನ್‌’ಜಿ ತಂತ್ರಜ್ಞಾನವನ್ನು ಬಳಸಿದೆ. ಈ ತಂತ್ರಜ್ಞಾನದ ಅಡಿಯಲ್ಲಿ, ಕಂಪನಿಯು 60 ಲೀಟರ್ ಸಿಎನ್‌’ಜಿ ಸಿಲಿಂಡರ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಈ ಕಾರಣದಿಂದಾಗಿ, ಈ ಸಿಲಿಂಡರ್ ಹೆಚ್ಚು ಜಾಗವನ್ನು ತೆಗೆದುಕೊಳ್ಳುವುದಿಲ್ಲ.


ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಇದು ಆಲ್ಟ್ರೋಜ್‌’ನ ಪೆಟ್ರೋಲ್ ಆವೃತ್ತಿಯನ್ನು ಹೋಲುತ್ತದೆ. 2023 ರ ಆಟೋ ಎಕ್ಸ್‌’ಪೋದಲ್ಲಿ, ಪ್ರದರ್ಶಿಸಲಾದ ಮಾದರಿಯು ಮುಂಭಾಗ ಮತ್ತು ಹಿಂಭಾಗದ ವಿಂಡ್‌’ಶೀಲ್ಡ್‌’ಗಳಲ್ಲಿನ CNG ಸ್ಟಿಕ್ಕರ್‌ಗಳನ್ನು ಹೊರತುಪಡಿಸಿ ಯಾವುದೇ ವಿಶಿಷ್ಟ ಅಂಶಗಳನ್ನು ಹೊಂದಿಲ್ಲ.


ಇದು 6 ಏರ್‌’ಬ್ಯಾಗ್‌’ಗಳು, ಧ್ವನಿ-ಸಕ್ರಿಯ ಎಲೆಕ್ಟ್ರಿಕ್ ಸನ್‌’ರೂಫ್, ಪ್ರೊಜೆಕ್ಟರ್ ಹೆಡ್‌’ಲ್ಯಾಂಪ್‌’ಗಳು, LED DRLಗಳು ಮತ್ತು 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್’ಗಳನ್ನು ಹೊಂದಿದೆ. 7 ಇಂಚಿನ ಟಚ್‌\ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಹಿಂಭಾಗದ ಎಸಿ ವೆಂಟ್ಸ್, ಹೈಟ್ ಅಡ್ಜಸ್ಟ್’ಮೆಂಟ್ ಮತ್ತು ಅಟೋ-ಫೋಲ್ಡಿಂಗ್ ORVM ಗಳನ್ನು ಸಹ ಹೊಂದಿದೆ.


ಇದನ್ನೂ ಓದಿ: Rajasthan Royalsನ ವಿವಾಹಿತ ಕ್ರಿಕೆಟಿಗನಿಗೆ ಪಬ್ಲಿಕ್’ನಲ್ಲಿಯೇ I Love You ಎಂದ ಸುಂದರಿ! ಆಟಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?


ಟಾಟಾ ಆಲ್ಟ್ರೊಜ್ ಸಿಎನ್‌ಜಿ ಪ್ರೀಮಿಯಂ ಹ್ಯಾಚ್‌’ಬ್ಯಾಕ್ ವಿಭಾಗದಲ್ಲಿ ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಜಾಗೆ ಪ್ರತಿಸ್ಪರ್ಧಿಯಾಗಿದೆ. ಬೆಲೆಗಳ ಬಗ್ಗೆ ಮಾತನಾಡುವುದಾದರೆ, ಆಲ್ಟ್ರೊಜ್ ಸಿಎನ್‌’ಜಿಯ ಬೆಲೆ ಸ್ಟ್ಯಾಂಡರ್ಡ್ ಆವೃತ್ತಿಗಿಂತ 60 ರಿಂದ 80 ಸಾವಿರ ರೂಪಾಯಿಗಳು ಹೆಚ್ಚು ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.