Rajasthan Royalsನ ವಿವಾಹಿತ ಕ್ರಿಕೆಟಿಗನಿಗೆ ಪಬ್ಲಿಕ್’ನಲ್ಲಿಯೇ I Love You ಎಂದ ಸುಂದರಿ! ಆಟಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

Jos Buttler Proposed by Girl: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಇಂದು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ರಾಜಸ್ಥಾನ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ಸ್ಟಾರ್ ಓಪನರ್ ಜೋಸ್ ಬಟ್ಲರ್ ಅವರನ್ನು ಅಭಿಮಾನಿಯೊಬ್ಬರು ಭೇಟಿ ಮಾಡಿದ್ದಾರೆ.

Written by - Bhavishya Shetty | Last Updated : Apr 17, 2023, 12:43 AM IST
    • ರಾಜಸ್ಥಾನ ರಾಯಲ್ಸ್ ಸ್ಟಾರ್ ಕ್ರಿಕೆಟಿಗರೊಬ್ಬರು ಅಭಿಮಾನಿಯನ್ನು ಭೇಟಿ ಮಾಡಲು ಮುಂದಾಗಿದ್ದಾರೆ.
    • ಆದರೆ ಅಲ್ಲೊಂದು ಘಟನೆ ನಡೆದಿದ್ದು, ಸಖತ್ ಫನ್ನಿ ಎನಿಸಿದೆ
    • ಬಟ್ಲರ್’ಗೆ ಹುಡುಗಿ I Love You ಎಂದು ಪಬ್ಲಿಕ್’ನಲ್ಲಿಯೇ ಪ್ರಪೋಸ್ ಮಾಡಿದ್ದಾಳೆ
Rajasthan Royalsನ ವಿವಾಹಿತ ಕ್ರಿಕೆಟಿಗನಿಗೆ ಪಬ್ಲಿಕ್’ನಲ್ಲಿಯೇ I Love You ಎಂದ ಸುಂದರಿ! ಆಟಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? title=
Jos Buttler Proposed by Girl

Jos Buttler Proposed by Girl: ಪಂದ್ಯ ಮುಗಿದ ಬಳಿಕ, ಅಭ್ಯಾಸದ ವೇಳೆ ಹೀಗೆ ಸಮಯ ಸಿಕ್ಕಾಗಲೆಲ್ಲಾ ಕ್ರಿಕೆಟಿರು, ಅಭಿಮಾನಿಗಳನ್ನು ಭೇಟಿಯಾಗಿ ಅವರ ಜೊತೆ ಮಾತನಾಡುತ್ತಾರೆ. ಫೋಟೋ ಕ್ಲಿಕ್ಕಿಸಿಕೊಂಡು ಕೊಂಚ ಸಮಯ ಅವರೊಂದಿಗೆ ಕಳೆಯುತ್ತಾರೆ. ಇದೀಗ ಅದೇ ರೀತಿ ರಾಜಸ್ಥಾನ ರಾಯಲ್ಸ್ ಸ್ಟಾರ್ ಕ್ರಿಕೆಟಿಗರೊಬ್ಬರು ಅಭಿಮಾನಿಯನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆದರೆ ಅಲ್ಲೊಂದು ಘಟನೆ ನಡೆದಿದ್ದು, ಸಖತ್ ಫನ್ನಿ ಎನಿಸಿದೆ.

ಇದನ್ನೂ ಓದಿ: Watch: ಪಂದ್ಯ ಗೆಲ್ಲುತ್ತಿದ್ದಂತೆ ಗಂಗೂಲಿಯಲ್ಲಿ ಗುರಾಯಿಸಿ, ಆ ರೀತಿ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ!

ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಇಂದು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ರಾಜಸ್ಥಾನ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ಸ್ಟಾರ್ ಓಪನರ್ ಜೋಸ್ ಬಟ್ಲರ್ ಅವರನ್ನು ಅಭಿಮಾನಿಯೊಬ್ಬರು ಭೇಟಿ ಮಾಡಿದ್ದಾರೆ. ಪ್ರತಿಷ್ಠಿತ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಟ್ಲರ್’ಗೆ ಹುಡುಗಿ I Love You ಎಂದು ಪಬ್ಲಿಕ್’ನಲ್ಲಿಯೇ ಪ್ರಪೋಸ್ ಮಾಡಿದ್ದಾಳೆ.

2022 ರ ಟಿ20 ವಿಶ್ವಕಪ್ ವಿಜೇತ ನಾಯಕನೊಂದಿಗಿನ ಈ ಹುಡುಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ಬಳಿಕ ಆಟೋಗ್ರಾಫ್ ತೆಗೆದುಕೊಂಡಿದ್ದಾಳೆ. ಇನ್ನು ಇಂದು ನಡೆದ ಪಂದ್ಯಕ್ಕೂ ಕೂಡ ಆಗಮಿಸಿದ್ದಳು ಈಕೆ. ಅಭಿಮಾನಿಯನ್ನು ಸಂತೋಷದಿಂದ ಬಟ್ಲರ್ ಆದರಿಸಿ, ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ IPL ಅಂದ್ರೆ ಇಷ್ಟನಾ? ಎಂದು ಬಟ್ಲರ್ ಕೇಳಿದಾಗ, ಆಕೆ ಹೌದು ಎಂದು ಉತ್ತರಿಸಿದ್ದಾಳೆ.

ಇದನ್ನೂ ಓದಿ: ಕೊನೆಯ ಬಾರಿ ಒಂದಾಗಲಿದೆ ಈ ಕ್ರಿಕೆಟ್ ಜೋಡಿ! ಆ ‘ಗೆಳತನ’ಕ್ಕೆ ಭಾವನಾತ್ಮಕವಾಗಿ ಕೊನೆಯಾಗಲಿ CSK vs RCB ಪಂದ್ಯ

ಖಾತೆ ತೆರೆಯದ ಜೋಸ್ ಬಟ್ಲರ್!

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯದ ಜೋಸ್ ಬಟ್ಲರ್ ಪೆವಿಲಿಯನ್‌’ಗೆ ಮರಳಿದ್ದಾರೆ. ಮೊಹಮ್ಮದ್ ಶಮಿ ಬೌಲಿಂಗ್’ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನಿಂಗ್ಸ್‌’ನ ಮೂರನೆ ಓವರ್’ನ 5 ನೇ ಎಸೆತದಲ್ಲಿ ಔಟ್ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News