Telegram New Feature: ಮೆಸೇಜಿಂಗ್ ಆಪ್ ಟೆಲಿಗ್ರಾಂ (Telegram) ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಲೈವ್ ಸ್ಟ್ರೀಮ್ ರೆಕಾರ್ಡಿಂಗ್ (Live Stream Recording) ಮತ್ತು ವಿಡಿಯೋ ಚಾಟ್ (Video Chat) ಸೌಲಭ್ಯವನ್ನು ಬಳಕೆದಾರರಿಗೆ ನೀಡಿದೆ. ಈ ನವೀಕರಿಸಿದ ಅಪ್ಲಿಕೇಶನ್ನಲ್ಲಿ ಎಂಟು ಚಾಟ್ ಥೀಮ್ಗಳು ಲಭ್ಯವಿರಲಿವೆ ಮತ್ತು ಪ್ರತಿ ಥೀಮ್ ಹಗಲು ಮತ್ತು ರಾತ್ರಿ ಆವೃತ್ತಿಗಳನ್ನು ಹೊಂದಿವೆ. ಇದರ ಹೊರತಾಗಿ, ಬಳಕೆದಾರರು ನವೀಕರಿಸಿದ ಆಪ್‌ನಲ್ಲಿ ಹೊಸ ಸಂವಾದಾತ್ಮಕ ಎಮೋಜಿಯನ್ನು ಸಹ ಪಡೆಯಲಿದ್ದಾರೆ.  ಸಂಪೂರ್ಣ ಸ್ಕ್ರೀನ್ ಎಫೆಕ್ಟ್ ನೊಂದಿಗೆ  ಗುಂಪಿನಲ್ಲಿ ಕಳುಹಿಸಿದ ಸಂದೇಶಗಳ ರಸೀದಿಗಳನ್ನು ಕೂಡ ಓದಬಹುದು.  ಅಂದರೆ ಯಾರು ಗುಂಪಿನಲ್ಲಿ ಕಳುಹಿಸಿದ ಸಂದೇಶಗಳನ್ನು ಓದಿದ್ದಾರೆ ಎಂಬುದರ ಮಾಹಿತಿ ಸಿಗುತ್ತದೆ. ಟೆಲಿಗ್ರಾಂ ಈ ಎಲ್ಲ ಹೊಸ ವೈಶಿಷ್ಟ್ಯಗಳ ಬಗ್ಗೆ ಬ್ಲಾಗ್ ಪೋಸ್ಟ್ ಮೂಲಕ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಹೊಸ ವೈಶಿಷ್ಟ್ಯಗಳು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿರುತ್ತವೆ. ಬ್ಲಾಗ್‌ಪೋಸ್ಟ್ ಪ್ರಕಾರ, ಹೊಸ ಚಾಟ್ ಗೆ ಥೀಮ್ ಅನ್ನು ಕೂಡ ಸೇರಿಸಬಹುದು ಮತ್ತು ವೈಯಕ್ತಿಕ ಚಾಟ್‌ಗಳಿಗಾಗಿ ಕಸ್ಟಮೈಸ್ ಮಾಡಬಹುದು. ಹೊಸ ಥೀಮ್ ಅಡಿಯಲ್ಲಿ, ಬಳಕೆದಾರರು ತಮ್ಮ ಚಾಟ್‌ಗಳನ್ನು ಅನಿಮೇಟೆಡ್ ಬ್ಯಾಕ್ಗ್ರೌಂಡ್, ಮೆಸೇಜ್ ಬಬಲ್ಸ್ , ವಿಶೇಷ ಬ್ಯಾಕ್ ಗ್ರೌಂಡ್ ಪ್ಯಾಟರ್ನ್ ಜೊತೆಗೆ ಬಳಕೆದಾರರಿಗೆ ತನ್ನ ಚಾಟ್ ಗಳನ್ನು ಒರ್ಗನೈಸ್ ಮಾಡುವ ವೈಶಿಷ್ಟ್ಯ ಕೂಡ ಸಿಗಲಿದೆ.


Telegram ಅಪ್ಡೇಟ್ ವರ್ಶನ್ ನಲ್ಲಿ ಮಹತ್ವದ ವೈಶಿಷ್ಟ್ಯಗಳು
>> ಬಳಕೆದಾರರು ಥೀಮ್ ಅನ್ನು ಬದಲಾಯಿಸಲು ಬಯಸುವ ಚಾಟ್ ವಿಂಡೋಗೆ ಹೋಗಬೇಕು, ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಥೀಮ್ ಅನ್ನು ಸಕ್ರಿಯಗೊಳಿಸಲು ಬಣ್ಣಗಳ ಬದಲಾವಣೆಯ ಆಯ್ಕೆಯನ್ನು ಆರಿಸಿ. ನೀವು ಚಾಟ್ ಮಾಡುತ್ತಿರುವ ಯಾರಾದರೂ ಈ ಬದಲಾದ ಥೀಮ್ ಅನ್ನು ಸಹ ನೋಡುತ್ತಾರೆ.


ಇದನ್ನೂ ಓದಿ-iPhone 12, iPhone 12 mini ಭಾರೀ ರಿಯಾಯಿತಿಗಳಲ್ಲಿ ಲಭ್ಯ

>> ನವೀಕರಿಸಿದ ಆಪ್‌ನಲ್ಲಿ ಹೊಸ ಅನಿಮೇಟೆಡ್ ಎಮೋಜಿಯನ್ನು ನೀಡಲಾಗಿದೆ, ಇದರ ಪರಿಣಾಮವು ಪೂರ್ಣ ಪರದೆಯಲ್ಲಿ ಗೋಚರಿಸುತ್ತದೆ. ಇದು ಚಾಟ್ ಮತ್ತು ಅಭಿವ್ಯಕ್ತಿಗೆ ಸಾಬೀತಾಗುತ್ತದೆ.


>> ಚಾಟ್ ವಿಂಡೋ ಮತ್ತು ಚಾಟ್ ಪಾರ್ಟ್ನರ್ ತೆರೆದಿದ್ದರೆ, ಆನಿಮೇಷನ್ ಮತ್ತು ವೈಬ್ರೇಶನ್ ಎರಡೂ ಸ್ಮಾರ್ಟ್ಫೋನ್ನಲ್ಲಿ ಏಕಕಾಲದಲ್ಲಿ ಸಂಭವಿಸುತ್ತವೆ.


>> ಬಳಕೆದಾರರು ಮುಂದಿನ ಬಳಕೆದಾರರಿಗೆ ಕಳುಹಿಸಿದ ಸಂದೇಶವನ್ನು ಸ್ವೀಕರಿಸಲಾಗಿದೆಯೇ ಅಥವಾ ಇಲ್ಲವೇ ಮತ್ತು ಅವರು ಅದನ್ನು ಓದಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು. ಸಂದೇಶಗಳನ್ನು ಓದಲಾಗಿದೆ ಎಂದು ಡಬಲ್ ಚೆಕ್ ಐಕಾನ್ ಸೂಚಿಸುತ್ತದೆ.


ಇದನ್ನೂ ಓದಿ-Bumper Discount on Samsung Galaxy F22: ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ನಲ್ಲಿ ಸಿಗುತ್ತಿದೆ ಭಾರೀ ರಿಯಾಯಿತಿ


>> ಸಣ್ಣ ಗುಂಪುಗಳಲ್ಲಿ, ನೀವು ಕಳುಹಿಸಿದ ಸಂದೇಶವನ್ನು ಯಾರು ಓದಿದ್ದಾರೆ ಎಂಬುದನ್ನು ಸಹ ನೀವು ನೋಡಬಹುದು. ಆದಾಗ್ಯೂ, ಸಂದೇಶ ಕಳುಹಿಸಿದ ಏಳು ದಿನಗಳಲ್ಲಿ, ಗುಂಪಿನಲ್ಲಿ ಕಳುಹಿಸಿದ ಸಂದೇಶವನ್ನು ಯಾರು ಓದಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ.


>> ನವೀಕರಿಸಿದ ಲೈವ್ ಸ್ಟ್ರೀಮ್ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಅನಿಯಮಿತ ಜನರನ್ನು ಸೇರಿಸಲು ಮಾತ್ರವಲ್ಲದೆ ಅದನ್ನು ರೆಕಾರ್ಡ್ ಮಾಡಬಹುದು. ಇದರಿಂದ ಲೈವ್ ಸ್ಟ್ರೀಮ್ ತಪ್ಪಿಸಿಕೊಂಡವರಿಗೆ  ಅದನ್ನು ವೀಕ್ಷಿಸಲು ಅವಕಾಶ ಸಿಗುತ್ತದೆ.


>> ಗ್ರೂಪ್ ಅಡ್ಮಿನ್ ಬ್ರಾಡ್‌ಕಾಸ್ಟ್ ಮೆನುಗೆ ಹೋಗುವುದರ ಮೂಲಕ ರೆಕಾರ್ಡಿಂಗ್ ಆರಂಭಿಸಬಹುದು, ನಂತರ ಈ ಫೈಲ್ ಅನ್ನು ತಕ್ಷಣವೇ ಸೇವ್ ಮಾಡಿದ ಸಂದೇಶಗಳಿಗೆ ಅಪ್‌ಲೋಡ್ ಮಾಡಲಾಗುತ್ತದೆ.


ಇದನ್ನೂ ಓದಿ-ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್-ಮುಕ್ತವಾಗಿಸಲು ಬಳಸಿ ಗೂಗಲ್‌ನ ಈ ಫೀಚರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.