ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್-ಮುಕ್ತವಾಗಿಸಲು ಬಳಸಿ ಗೂಗಲ್‌ನ ಈ ಫೀಚರ್

ಆಂಡ್ರಾಯ್ಡ್ 11 ಗೆ ಅಪ್‌ಡೇಟ್‌ನೊಂದಿಗೆ, ಆಟೋ ರಿಸೆಟ್ಟಿಂಗ್ ಪರ್ಮಿಶನ್ ಫೀಚರ್ ಅನ್ನು ವೈಶಿಷ್ಟ್ಯವನ್ನು ತಂದಿದೆ. ಈ ಫೀಚರ್ ಮೂಲಕ, ಫೋನ್‌ನಲ್ಲಿ ದೀರ್ಘಕಾಲದಿಂದ ಬಳಸದೇ ಇರುವ ಅಪ್ಲಿಕೇಶನ್ ಅನ್ನು ಸ್ಟೋರೇಜ್, ಮೈಕ್, ಕ್ಯಾಮೆರಾ ಮತ್ತು ಇತರ ಸೂಕ್ಷ್ಮ ವೈಶಿಷ್ಟ್ಯಗಳಿಗೆ ಬಂದ್ ಮಾಡಲಾಗುತ್ತದೆ. 

Written by - Ranjitha R K | Last Updated : Sep 20, 2021, 04:48 PM IST
  • ಗೂಗಲ್ ತರುತ್ತಿದೆ ಹೊಸ ವೈಶಿಷ್ಟ್ಯ
  • ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ವೈರಸ್ ನಿಂದ ರಕ್ಷಿಸಬಹುದು
  • ಆಂಡ್ರಾಯ್ಡ್ 6 ಮತ್ತು 10ರ ಮೇಲೆ ಕಾರ್ಯನಿರ್ವಹಿಸುತ್ತದೆ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್-ಮುಕ್ತವಾಗಿಸಲು ಬಳಸಿ ಗೂಗಲ್‌ನ ಈ ಫೀಚರ್  title=
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ವೈರಸ್ ನಿಂದ ರಕ್ಷಿಸಬಹುದು (file photo)

ನವದೆಹಲಿ : ಸ್ಮಾರ್ಟ್‌ಫೋನ್‌ಗಳನ್ನು ವೈರಸ್‌ ಫ್ರೀಯಾಗಿರಬೇಕು (Virus free) ಎಂದು ಎಲ್ಲರೂ ಬಯಸುತ್ತಾರೆ. ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್‌ಗಳು ಮತ್ತು ಮಾಲ್‌ವೇರ್‌ಗಳಿಂದ ರಕ್ಷಿಸುವ ಹೊಸ ಫೀಚರ್‌ ಅನ್ನು ಗೂಗಲ್ ಪರಿಚಯಿಸಿದೆ. Google ಪರಿಚಯಿಸಿರುವ ಪ್ರೈವೆಸಿ ಪ್ರೊಟೆಕ್ಷನ್ ಫೀಚರ್ (Privacy protection features), ಫೋನ್ ಅನ್ನು ಸುರಕ್ಷಿತವಾಗಿರಿಸುತ್ತದೆ.  ಕೇವಲ ಒಂದು ಅಪ್‌ಡೇಟ್‌ ನಿಂದ, ದೊಡ್ಡ ಸಮಸ್ಯೆಯಿಂದ ಮುಕ್ತರಾಗಬಹುದು.  

Google ನ ಆಟೋ ರಿಸೆಟ್ಟಿಂಗ್ ಫೀಚರ್ : 
ಆಂಡ್ರಾಯ್ಡ್ 11 ಗೆ (Android 11) ಅಪ್‌ಡೇಟ್‌ನೊಂದಿಗೆ, ಆಟೋ ರಿಸೆಟ್ಟಿಂಗ್ ಪರ್ಮಿಶನ್ ಫೀಚರ್ (auto resetting permission feature)ಅನ್ನು ವೈಶಿಷ್ಟ್ಯವನ್ನು ತಂದಿದೆ. ಈ ಫೀಚರ್ ಮೂಲಕ, ಫೋನ್‌ನಲ್ಲಿ ದೀರ್ಘಕಾಲದಿಂದ  ಬಳಸದೇ ಇರುವ ಅಪ್ಲಿಕೇಶನ್ ಅನ್ನು ಸ್ಟೋರೇಜ್, ಮೈಕ್, ಕ್ಯಾಮೆರಾ ಮತ್ತು ಇತರ ಸೂಕ್ಷ್ಮ ವೈಶಿಷ್ಟ್ಯಗಳಿಗೆ ಬಂದ್ ಮಾಡಲಾಗುತ್ತದೆ. 

ಇದನ್ನೂ ಓದಿ : New Mobile Portability Rule - ಇನ್ಮುಂದೆ ಕೇವಲ 1 ರೂ.ಗಳಲ್ಲಿ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಿ, ಹೊಸ ನಿಯಮದ ಮಾಹಿತಿ ಇಲ್ಲಿದೆ

ಆಂಡ್ರಾಯ್ಡ್ 11 ಅಪ್ಡೇಟ್ ನಂತರ, ದೀರ್ಘಕಾಲ ಬಳಸದ ಯಾವುದೇ ಆಪ್‌ಗಳು ಇದ್ದರೆ, ಸ್ಟೋರೇಜ್ ನಂತಹ ವೈಶಿಷ್ಟ್ಯಗಳಿಗೆ ಪ್ರತ್ಯೇಕ ಅನುಮತಿಗಳನ್ನು ನೀಡಬೇಕಾಗುತ್ತದೆ. ಏಕೆಂದರೆ ಈ ಹೊಸ ವೈಶಿಷ್ಟ್ಯದ ಅಡಿಯಲ್ಲಿ ಫೋನ್ ಸ್ವಯಂಚಾಲಿತವಾಗಿ ಈ ಅನುಮತಿಗಳನ್ನು ತಿರಸ್ಕರಿಸುತ್ತದೆ. ಇದರೊಂದಿಗೆ, ಈ ಆಪ್‌ಗಳು ಡೇಟಾವನ್ನು ಬಳಸಲು ಸಾಧ್ಯವಾಗುವುದಿಲ್ಲ ಮತ್ತು ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರುತ್ತದೆ. 

ಆಂಡ್ರಾಯ್ಡ್ 11 ಬಳಕೆದಾರರ ಹೊರತಾಗಿ, ಯಾರು ಈ ಪ್ರಯೋಜನವನ್ನು ಪಡೆಯುತ್ತಾರೆ ?
ಆಂಡ್ರಾಯ್ಡ್ 6 ಅಥವಾ ನಂತರದ ಆವೃತ್ತಿಗಳಲ್ಲಿ ಕೆಲಸ ಮಾಡುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಗೂಗಲ್ (google) ಈ ವೈಶಿಷ್ಟ್ಯವನ್ನು ತರುತ್ತಿದೆ. ಈ ಅಪ್ಲಿಕೇಶನ್‌ಗಳು ಹಳೆಯ ಬಳಕೆಯಾಗದ ಸ್ಮಾರ್ಟ್‌ಫೋನ್‌ಗಳಿಂದ (Smartphone) ಡೇಟಾವನ್ನು ತೆಗೆದುಕೊಳ್ಳುವ ಅವಕಾಶವನ್ನು ಪಡೆಯುವುದಿಲ್ಲ.  ಈ ವೈಶಿಷ್ಟ್ಯದೊಂದಿಗೆ, ಲಕ್ಷಾಂತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎನ್ನುವುದು ಗೂಗಲ್ ನಂಬಿಕೆ.

ಇದನ್ನೂ ಓದಿ : WhatsApp Updates: WhatsAppನಿಂದ ಶೀಘ್ರದಲ್ಲಿಯೇ ಈ ಅದ್ಭುತ ಹೊಸ ವಿಶಿಷ್ಟ ಬಿಡುಗಡೆ, ಬಳಕೆದಾರರು ಹೇಳಿದ್ದೇನು ?

'ದಿ ವರ್ಜ್' ನ ವರದಿಯ ಪ್ರಕಾರ, ಆಂಡ್ರಾಯ್ಡ್ 6 ಮತ್ತು ಆಂಡ್ರಾಯ್ಡ್ 10 ಆವೃತ್ತಿಗಳಲ್ಲಿ ಕೆಲಸ ಮಾಡುವ ಎಲ್ಲಾ ಸ್ಮಾರ್ಟ್ ಫೋನ್ ಗಳಿಗೆ ಗೂಗಲ್ ಈ ಅಪ್ಡೇಟ್ (google update)ಅನ್ನು ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುತ್ತದೆ. ಈ ವೈಶಿಷ್ಟ್ಯವು Google Play ಸೇವೆಗಳಲ್ಲಿ ಲಭ್ಯವಿರುತ್ತದೆ ಎಂದು Google ಹೇಳಿದೆ. ಇದನ್ನು ಬೇರೆ ರೀತಿಯಲ್ಲಿ ಡೌನ್ಲೋಡ್ ಮಾಡುವ ಅಗತ್ಯವಿರುವುದಿಲ್ಲ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News