ನವದೆಹಲಿ: ಪ್ರಸ್ತುತ ಇಡೀ ವಿಶ್ವದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಬೇಗವಾಗಿ ಹೆಚ್ಚಾಗುತ್ತಿದೆ. ಈ ನಡುವೆ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸೋಮವಾರ (ಮಾರ್ಚ್ 06) ವರದಿಯೊಂದು ಬಿಡುಗಡೆ ಆಗಿದ್ದು, ಅದರಲ್ಲಿ 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು 53 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಟರಿ EV ಗಳು (BEV ಗಳು) ಎಲ್ಲಾ EV ಮಾರಾಟಗಳಲ್ಲಿ ಸುಮಾರು 72 ಪ್ರತಿಶತವನ್ನು ಹೊಂದಿವೆ, ಆದರೆ ಪ್ಲಗ್-ಇನ್ ಹೈಬ್ರಿಡ್ EV ಗಳು (PHEV ಗಳು) ಉಳಿದವುಗಳಾಗಿವೆ. 


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಟೆಸ್ಲಾದ ಮಾಡೆಲ್ ವೈ ವಿಶ್ವಾದ್ಯಂತ ಹೆಚ್ಚು ಮಾರಾಟವಾದ ಮಾಡೆಲ್ ಆಗಿದ್ದು, ಅದರ ನಂತರದ ಸ್ಥಾನದಲ್ಲಿ ಚೀನಾದ BYD ಸಾಂಗ್ ಕಾರನ್ನು ಕಾಣಬಹುದು. ಗಮನಾರ್ಹವಾಗಿ, ಟೆಸ್ಲಾ ಮಾಡೆಲ್ Y ಫುಲ್ ಚಾರ್ಜ್‌ನಲ್ಲಿ 525 ಕಿಮೀ ಕ್ರಮಿಸಬಲ್ಲದು. ಟೆಸ್ಲಾ ಮಾಡೆಲ್ ವೈ ವಿಶ್ವದ ಅತ್ಯಂತ ಜನಪ್ರಿಯ ಪ್ಲಗ್-ಇನ್ ಎಲೆಕ್ಟ್ರಿಕ್ ವಾಹನವಾಗಿದ್ದು, 2022 ರಲ್ಲಿ ವಿಶ್ವಾದ್ಯಂತ ಸುಮಾರು 771,300 ಯುನಿಟ್ ಮಾರಾಟವಾಗಿದೆ.


ಇದನ್ನೂ ಓದಿ- 40KM ವರೆಗೆ ಮೈಲೇಜ್ ನೀಡಬಲ್ಲ ಮಾರುತಿಯ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಿವು


ಕಳೆದ ವರ್ಷ 2022ರಲ್ಲಿ  ಚೀನಾ, ಜರ್ಮನಿ ಮತ್ತು ಯುಎಸ್ ಈ ಮೂರು ದೇಶಗಳು ಇವಿ ಮಾರುಕಟ್ಟೆಯಲ್ಲಿ 39 ಕ್ಕೂ ಹೆಚ್ಚು ಪ್ರಯಾಣಿಕ ಕಾರು ಬ್ರಾಂಡ್‌ಗಳನ್ನು ಹೊಂದಿರುವ ಟಾಪ್ 10 EV ಆಟೋಮೋಟಿವ್  ಗ್ರೂಪ್ಸ್ ಹೊಂದಿದ್ದವು. , 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಎಲ್ಲಾ EV ಮಾರಾಟಗಳಲ್ಲಿ ಸುಮಾರು 72 ಪ್ರತಿಶತದಷ್ಟು ಕೊಡುಗೆ ನೀಡಿವೆ ಎಂದು ತಿಳಿದುಬಂದಿದೆ. 


ಸಂಶೋಧನಾ ವಿಶ್ಲೇಷಕ ಅಭಿಕ್ ಮುಖರ್ಜಿ, "ಚೀನಾದಲ್ಲಿ ತಾಜಾ COVID-19 ಸೋಂಕುಗಳು ಇಲ್ಲದಿದ್ದರೆ 2022 ರ ವಾರ್ಷಿಕ ಒಟ್ಟು 11 ಮಿಲಿಯನ್ ಯುನಿಟ್‌ಗಳಿಗೆ ಹತ್ತಿರವಾಗುತ್ತಿತ್ತು." ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಚೀನಾದಲ್ಲಿ ಸೋಂಕುಗಳು ವಾಹನ ಉತ್ಪಾದನೆ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿತು ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ- Nanoಗಿಂತಲೂ ಪುಟ್ಟ ಕಾರು ಇದು! ವಿನ್ಯಾಸ ನೋಡಿ ಮನಸೋತ ಗ್ರಾಹಕರು


2022 ರಲ್ಲಿ, ಅನೇಕ ಚೀನೀ ಬ್ರ್ಯಾಂಡ್‌ಗಳು ಯುರೋಪ್, ಆಗ್ನೇಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಂತಹ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಪ್ರಾರಂಭಿಸಿದವು. ಆಗ್ನೇಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಚೀನೀ ಬ್ರ್ಯಾಂಡ್‌ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಏಕೆಂದರೆ ಈ ಪ್ರದೇಶಗಳಲ್ಲಿ ಕೆಲವೇ ಬ್ರಾಂಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಯುರೋಪ್‌ನಲ್ಲಿ ಮಾರುಕಟ್ಟೆ ಉಪಸ್ಥಿತಿಗಾಗಿ ಯುದ್ಧವನ್ನು ನಿರೀಕ್ಷಿಸಲಾಗಿದೆ  ಎಂದು ಮುಖರ್ಜಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.