ಶೀಘ್ರದಲ್ಲೇ 300 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ!

MG Elecrtic Car:ಎಂಜಿ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷ ಭಾರತದಲ್ಲಿ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಕೂಡ ಈಗಾಗಲೇ ಘೋಷಿಸಿದೆ. ಇದಕ್ಕೆ ಎಂಜಿ ಕಾಮೆಟ್ ಎಂದು ಹೆಸರಿಡಲಾಗಿದೆ.  

Written by - Nitin Tabib | Last Updated : Mar 2, 2023, 10:50 PM IST
  • ಎಂಜಿ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
  • ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಸಹ ಘೋಷಿಸಿದೆ.
  • ಇದಕ್ಕೆ ಎಂಜಿ ಕಾಮೆಟ್ ಎಂದು ಹೆಸರನ್ನಿಡಲಾಗಿದೆ.
ಶೀಘ್ರದಲ್ಲೇ 300 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ! title=
ಎಂಜಿ ಕಾಮೆಟ್ ಹೊಸ ಇಲೆಕ್ಟ್ರಿಕ್ ಕಾರು ಬಿಡುಗಡೆ

MG Comet Elecrtic Car: ಭಾರತದಲ್ಲಿ ಕೈಗೆಟುಕುವ ಬೆಲೆ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಸ್ಪರ್ಧೆ ನಿರಂತರವಾಗಿ ಹೆಚ್ಚುತ್ತಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ಕಾರ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ. ಟಾಟಾ ಕಳೆದ ವರ್ಷ ಟಾಟಾ ಟಿಯಾಗೊ ಇವಿ ಅನ್ನು ತನ್ನ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರ್ ರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ 8.69 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದೀಗ ಎಂಜಿ ಭಾರತದಲ್ಲಿ ತನ್ನ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ಎಂಜಿ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಸಹ ಘೋಷಿಸಿದೆ. ಇದಕ್ಕೆ ಎಂಜಿ ಕಾಮೆಟ್ ಎಂದು ಹೆಸರನ್ನಿಡಲಾಗಿದೆ. ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕರೋಬರ್ಟ್ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ ಅಪ್ರತಿಮ 1934 ರ ಬ್ರಿಟಿಷ್ ವಿಮಾನದಿಂದ ಈ ಹೆಸರು ಸ್ಫೂರ್ತಿ ಪಡೆಯುತ್ತದೆ. ಎಂಜಿ ಕಾಮೆಟ್ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ವುಲಿಂಗ್ ಏರ್ ಇವಿ ಆಧರಿಸಿದೆ.

ವಿಶೇಷ ಸಂಗತಿಯೆಂದರೆ, ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ ಇಸಿ 3 ಗಿಂತ ಎಂಜಿ ಯ ಹೊಸ ಎಲೆಕ್ಟ್ರಿಕ್ ಕಾರ್ ಗಾತ್ರದಲ್ಲಿ ಚಿಕ್ಕದಾಗಿರಲಿದೆ. ಎಂಜಿ ಕಾಮೆಟ್ ಉದ್ದವು ಸುಮಾರು 2,900 ಮಿ.ಮೀ ಗಳಷ್ಟಿದೆ. ಇದಕ್ಕೆ 3 ಬಾಗಿಲುಗಳನ್ನು ನೀಡಲಾಗಿದೆ ಎನ್ನಲಾಗಿದೆ, ಇದರಲ್ಲಿ ಎರಡು ಬದಿಗಳು ಎರಡು ಮತ್ತು ಒಂದು ಬಾಗಿಲು  ಹಿಂಭಾಗದಲ್ಲಿರುತ್ತದೆ. ಇದು 4 ಆಸನಗಳ ಕಾರು ಆಗಿರಲಿದೆ. ಭಾರತದಲ್ಲಿ ಇದರ ಬೆಲೆ 10 ಲಕ್ಷ ರೂ.ಗಿಂತ ಕಡಿಮೆ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ-Ola ಪಾರುಪತ್ಯಕ್ಕೆ ಬ್ರೇಕ್ ಹಾಕಲು ಬಂತು 'ಹಮಾರಾ ಬಜಾಜ್' ಚೇತಕ್ ಇವಿ, ರೇಂಜ್ ಎಷ್ಟು ಗೊತ್ತಾ?

ಬ್ಯಾಟರಿ ಮತ್ತು ವೈಶಿಷ್ಟ್ಯಗಳು
ಪ್ರಸ್ತುತ, ಈ ಕಾರಿನ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಬಗ್ಗೆ ಮಾಹಿತಿಯನ್ನು ಬಹಿರಂಗಗೊಂಡಿಲ್ಲ. ಬ್ಯಾಟರಿ ಪ್ಯಾಕ್‌ನ ಸಾಮರ್ಥ್ಯವು 20 ಕಿ.ವ್ಯಾ ಗಿಂತ ಸ್ವಲ್ಪ ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಒಂದೇ ಚಾರ್ಜ್‌ನಲ್ಲಿ ಸುಮಾರು 250-300 ಕಿ.ಮೀ ಡ್ರೈವಿಂಗ್ ರೇಂಜ್ ಪಡೆಯುತ್ತದೆ. ವಿದ್ಯುತ್ ಉತ್ಪಾದನೆಯು ಸುಮಾರು 40 ಬಿಎಚ್‌ಪಿ ಇರ್ವಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ-OMG! ಮುಂದಿನ 12 ವರ್ಷಗಳಲ್ಲಿ ಮನುಷ್ಯ ತನ್ನ ಯೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಾನಂತೆ!

ಎಂಜಿ ಕಾಮೆಟ್ ಅತಿದೊಡ್ಡ ವೈಶಿಷ್ಟ್ಯ ಎಂದರೆಅದರ ಒಳಾಂಗಣ. ಇದು ಡ್ಯುಯಲ್ ಸ್ಕ್ರೀನ್‌ಗಳನ್ನು ಹೊಂದಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ, ಇದನ್ನು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿಸುವ ಮೂಲಕ ತಯಾರಿಸಲಾಗಿದೆ ಎನ್ನಲಾಗಿದೆ. ಸಂಪರ್ಕಿತ ಕಾರು ತಂತ್ರಜ್ಞಾನವನ್ನು ಅದರಲ್ಲಿ ಇರುವ ಸಾಧ್ಯತೆಯನ್ನು ಕೂಡ ವರ್ತಿಸಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News