ನವದೆಹಲಿ: ಇತ್ತೀಚೆಗೆ, ಮಾರುಕಟ್ಟೆಯಲ್ಲಿ 13200mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಉಲೆಫೋನ್ ಪವರ್ ಆರ್ಮರ್ 13 (Ulefone Power Armor 13) ಸ್ಮಾರ್ಟ್ಫೋನ್ ಬಿಡುಗಡೆಯಾಯಿತು. ಇದು ಇದುವರೆಗಿನ ಅತಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಆಗಿತ್ತು. ಆದರೆ ಈಗ ಇನ್ನೂ ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ. ಹೌದು, ಆಗಸ್ಟ್ 23 ರಂದು, ಔಕಿಟೆಲ್ ಡಬ್ಲ್ಯೂಪಿ 15 5 ಜಿ (Oukitel WP15 5G) ಹೆಸರಿನ ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ, ಈ ಸ್ಮಾರ್ಟ್ ಫೋನ್ ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಚರ್ಚೆಯಲ್ಲಿದೆ. ಇದರಲ್ಲಿ 15,600mAh ಬ್ಯಾಟರಿಯನ್ನು ನೀಡಲಾಗುವುದು ಎಂದು ತಿಳಿದುಬಂದಿದೆ. ವಿಶೇಷವೆಂದರೆ ಈ ಫೋನನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ ಬಳಿಕ ಇಡೀ ವಾರ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ, ಬ್ಯಾಟರಿ ಖಾಲಿಯಾಗುವ ಬಗ್ಗೆ ಚಿಂತಿಸದೆ ನೀವು ಅದರಲ್ಲಿ ಸಾಕಷ್ಟು ಗೇಮಿಂಗ್ ಮತ್ತು ವೀಡಿಯೋಗಳನ್ನು ಆನಂದಿಸಬಹುದು. Oukitel WP15 5G ಸ್ಮಾರ್ಟ್‌ಫೋನ್‌ನ ಸಂಭಾವ್ಯ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...


COMMERCIAL BREAK
SCROLL TO CONTINUE READING

Oukitel WP15 5G ಬಿಡುಗಡೆ ಮತ್ತು ನಿರೀಕ್ಷಿತ ಬೆಲೆ:
Oukitel WP15 5G ಗೆ ಸಂಬಂಧಿಸಿದಂತೆ, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ನೀಡಲಾಗಿದೆ. ಇದು ಅತಿ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದನ್ನು ಆಗಸ್ಟ್ 23 ರಂದು ಬಿಡುಗಡೆ ಮಾಡಲಾಗುವುದು ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಇದನ್ನು ಅಲೈಕ್ಸ್ಪ್ರೆಸ್ (AliExpress) ನಲ್ಲಿ 30,794 ರೂ.ಗಳ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಬಳಕೆದಾರರು ಅದನ್ನು ಮೊದಲೇ ಬುಕ್ ಮಾಡಬಹುದು. ಕಂಪನಿಯು ಈ ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಇನ್ನೂ ಕೂಡ ಖಚಿತ ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿ- Oppo Reno 6 4G: 44MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಿದೆ Oppo Reno 6 4G ಸ್ಮಾರ್ಟ್‌ಫೋನ್, ಅದರ ಬೆಲೆ, ವೈಶಿಷ್ಟ್ಯ ತಿಳಿಯಿರಿ


Oukitel WP15 ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು:
ಔಕಿಟೆಲ್ ಡಬ್ಲ್ಯೂಪಿ 15 (Oukitel WP15) ಸ್ಮಾರ್ಟ್ ಫೋನ್ ಆಗಸ್ಟ್ 23 ರಂದು ಬಿಡುಗಡೆಯಾಗಲಿದ್ದು, ಬ್ಯಾಟರಿಯ ಹೊರತಾಗಿ, ಇದರ ಪ್ರಮುಖ ಅಂಶವೆಂದರೆ ಅದರ ಬಾಡಿ. ಇದು ಒರಟಾದ ಸ್ಮಾರ್ಟ್ ಫೋನ್ (Smartphone) ಆಗಿದ್ದು ಅದು ಬಿದ್ದರೆ ಸುಲಭವಾಗಿ ಮುರಿಯದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ನ ದೇಹವು ಸಾಕಷ್ಟು ಬಲವಾಗಿದೆ. ಅದರ ಹೆಚ್ಚಿನ ವೈಶಿಷ್ಟ್ಯಗಳನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ಇದನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ನಲ್ಲಿ ನೀಡಲಾಗುವುದು ಮತ್ತು ಇದರಲ್ಲಿ 8GB RAM ನೊಂದಿಗೆ 128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.


ಇದನ್ನೂ ಓದಿ- Smartphone Tips And Tricks: ಸ್ಮಾರ್ಟ್ ಫೋನ್ ಕಳೆದುಹೋದರೆ ತಕ್ಷಣ ನೀವು ಮಾಡಲೇ ಬೇಕಾದ ಕೆಲಸ ಇದು


Oukitel WP15 ಸ್ಮಾರ್ಟ್ಫೋನ್ 6.52-ಇಂಚಿನ HD + ಡಿಸ್ಪ್ಲೇಯನ್ನು ಹೊಂದಿರುತ್ತದೆ ಮತ್ತು ಫೋಟೋಗ್ರಫಿಗಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಪಡೆಯುತ್ತದೆ. ಫೋನಿನ ಮುಖ್ಯ ಕ್ಯಾಮೆರಾ 48MP ಆಗಿರುತ್ತದೆ. 2MP ಮ್ಯಾಕ್ರೋ ಲೆನ್ಸ್ ಮತ್ತು 0.3MP ವರ್ಚುವಲ್ ಲೆನ್ಸ್ ನೀಡಲಾಗುವುದು. ಇದರ ಮುಖ್ಯ ಲಕ್ಷಣವೆಂದರೆ 15,600mAh ಬ್ಯಾಟರಿಯನ್ನು ನೀಡಲಾಗಿದೆ, ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಸ್ಮಾರ್ಟ್‌ಫೋನ್‌ ನೀರು ಮತ್ತು ಧೂಳು ನಿರೋಧಕವಾಗಿದೆ ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ