NOKIA ಲಾಂಚ್ ಮಾಡಿದೆ ಅದ್ಬುತ ಸ್ಮಾರ್ಟ್ ಫೋನ್, ಮೂರು ದಿನಗಳವರೆಗೆ ನಿಲ್ಲಲ್ಲಿದೆ ಬ್ಯಾಟರಿ ಚಾರ್ಜ್

Nokia C30 6.82 ಇಂಚಿನ  HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್‌ನ ಮೂರು ವೇರಿಯೆಂಟ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 2 ಜಿಬಿ RAM ಮತ್ತು 32 ಜಿಬಿ ಇನಟರ್ನಲ್  ಸ್ಟೋರೆಜ್ ಅನ್ನು ಹೊಂದಿದೆ. 

Written by - Ranjitha R K | Last Updated : Jul 28, 2021, 05:37 PM IST
  • ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಯಿತು ನೋಕಿಯಾ ಸಿ 30
  • ಫೋನ್ ನಲ್ಲಿ ಸಿಗಲಿದೆ ಅತ್ಯದ್ಬೂತ ಬ್ಯಾಟರಿ
  • ಫೋನ್‌ ನ ಬೆಲೆ ಎಷ್ಟು ತಿಳಿಯಿರಿ
NOKIA ಲಾಂಚ್ ಮಾಡಿದೆ ಅದ್ಬುತ ಸ್ಮಾರ್ಟ್ ಫೋನ್, ಮೂರು ದಿನಗಳವರೆಗೆ ನಿಲ್ಲಲ್ಲಿದೆ ಬ್ಯಾಟರಿ ಚಾರ್ಜ್ title=
ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಯಿತು ನೋಕಿಯಾ ಸಿ 30 (photo zee news)

ನವದೆಹಲಿ  : ಎಚ್‌ಎಂಡಿ ಗ್ಲೋಬಲ್ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು (Smartphones) ಮತ್ತು ಹೊಸ ಆಡಿಯೊ ಪೋರ್ಟ್ಫೋಲಿಯೊವನ್ನು ಬಿಡುಗಡೆ ಮಾಡಿದೆ. ಕಂಪನಿಯು ನೋಕಿಯಾ ಎಕ್ಸ್ ಆರ್ 20, ನೋಕಿಯಾ 6310 ಮತ್ತು ನೋಕಿಯಾ ಸಿ 30 (Nokia C30) ಅನ್ನು ಪರಿಚಯಿಸಿದೆ. ಈ ಪೈಕಿ ನೋಕಿಯಾ ಸಿ 30 ಅನ್ನು ಅತ್ಯಂತ ಪ್ರಬಲ ಫೋನ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಅತ್ಯುತ್ತಮವಾದ ಬ್ಯಾಟರಿಯೊಂದಿಗೆ ದೊಡ್ಡ ಸ್ಕ್ರೀನ್ ನೀಡಲಾಗಿದೆ. ಈ ಫೋನ್ ಲುಕ್ ನಲ್ಲಿಯೂ ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಈ ಫೋನ್ ಅನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ, ಮೂರು ದಿನ ಬರುತ್ತದೆ ಎಂದು ಕಂಪನಿ ಹೇಳಿದೆ. 

ನೋಕಿಯಾ ಸಿ 30 ನ ವೈಶಿಷ್ಟ್ಯಗಳು : 
Nokia C30 6.82 ಇಂಚಿನ  HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್‌ನ ಮೂರು ವೇರಿಯೆಂಟ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 2 ಜಿಬಿ RAM ಮತ್ತು 32 ಜಿಬಿ ಇನಟರ್ನಲ್  ಸ್ಟೋರೆಜ್ ಅನ್ನು ಹೊಂದಿದೆ. ಸ್ಟೋರೆಜ್ ಅನ್ನು  ಹೆಚ್ಚಿಸಲು ಮೈಕ್ರೊ ಎಸ್ಡಿ ಸ್ಲಾಟ್ ಸಹ ನೀಡಲಾಗುತ್ತದೆ. ಈ ಫೋನ್‌ನಲ್ಲಿ 256 ಜಿಬಿ ವರೆಗೆ ಸ್ಟೋರೆಜ್ ಹೆಚ್ಚಿಸಬಹುದು. ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹಿಂಭಾಗ ಫಿಂಗರ್ಪ್ರಿಂಟ್ ಸೆನ್ಸಾರ್ ನೀಡಲಾಗಿದೆ. 

ಇದನ್ನೂ ಓದಿ : ಏರ್ಟೆಲ್ ಬಳಕೆದಾರರಿಗೆ ಆಘಾತ : ದುಬಾರಿಯಾಯಿತು ಏರ್ ಟೇಲ್ ಪ್ರಿಪೇಯ್ಡ್ ಪ್ಲಾನ್ , ನಾಳೆಯಿಂದಲೇ ಹೊಸ ದರ ಜಾರಿ

ಬ್ಯಾಟರಿ :
ಫೋನ್‌ ನಲ್ಲಿ  6000mAH ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟರಿ ಚಾರ್ಜ್ (Battery charge) ಮೂರು ದಿನಗಳವರೆಗೆ ಬರಲಿದೆ ಎಂದು ಕಂಪನಿ ಹೇಳಿದೆ. ಈ ಫೋನ್ ಅನ್ನು ಗ್ರೀನ್ ಮತ್ತು ವೈಟ್ ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಕ್ಯಾಮೆರಾ :
ಫೋನ್‌ನ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್‌ ಪ್ರೈಮರಿ ಕ್ಯಾಮರಾ ಮತ್ತು 2 ಮೆಗಾಪಿಕ್ಸೆಲ್‌ಗಳ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಅದೇ ಸಮಯದಲ್ಲಿ, ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನ್‌ನ (Phone)ಬೆಲೆಯನ್ನು 99 ಯುರೋ ಅಂದರೆ 8,700 ರೂಗಳಾಗಿವೆ. 

ಇದನ್ನೂ ಓದಿ : WhatAppನಲ್ಲಿ ಬಂತು ಹೊಸ ವೈಶಿಷ್ಟ್ಯ, ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿಯೋಣ ಬನ್ನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News