Existance Of Theia Inside Earth - ಭೂಮಿಯ ಗರ್ಭದಲ್ಲೊಂದು Alien ಪ್ರಪಂಚ! Giant Impact Hypothesis ರಹಸ್ಯ ಭೇದಿಸಿದ್ರಾ ವಿಜ್ಞಾನಿಗಳು?
Existance Of Theia Inside Earth - ಇದರ ಒಂದು LLSVP ಆಫ್ರಿಕಾ ಖಂಡದ ಕೆಳಭಾಗದಲ್ಲಿದ್ದರೆ, ಇನ್ನೊಂದು ಪ್ರಶಾಂತ ಮಹಾಸಾಗರದ ಕೆಳಭಾಗದಲ್ಲಿದೆ. ಈ ಎರಡು LLSVPಗಳು ಎಷ್ಟೊಂದು ವಿಶಾಲವಾಗಿವೆ ಎಂದರೆ, ಇವುಗಳ ಸಂಬಂಧ ಭೂಮಿಯ ಆಯಸ್ಕಾಂತೀಯ ಶಕ್ತಿ ಶಿಥಿಲಗೊಳಿಸುತ್ತಿವೆ ಎನ್ನಲಾಗಿದೆ. ಈ ಸಂಶೋಧನೆಯ ಕುರಿತು ಹೇಳಿಕೆ ನೀಡಿರುವ ಸಂಶೋಧನಾ ಲೇಖಕ ಕ್ವಾನ್ ಯುವಾನ್, ಈ ಬಂಡೆಗಲ್ಲುಗಳು ಅಕ್ಕಪಕ್ಕದಲ್ಲಿರುವ ಬೇರೆ ಬಂಡೆಗಲ್ಲುಗಳಿಗಿಂತ ಹೆಚ್ಚು ಘನವಾಗಿವೆ ಹಾಗೂ ಇವುಗಳ ರಾಸಾಯನಿಕ ಸಂರಚನೆ ಕೂಡ ವಿಭಿನ್ನವಾಗಿದೆ ಎಂದಿದ್ದಾರೆ. ಪ್ರಾಚೀನ ಗ್ರಹ ಥಿಯಾ ಮೆಂಟಲ್, ಭೂಮಿಗಿಂತ ಹೆಚ್ಚು ಆಳವಾಗಿತ್ತು ಎಂದು ಯುವಾನ್ ಹೇಳುತ್ತಾರೆ.
ನವದೆಹಲಿ: Existance Of Theia Inside Earth - ಭೂಮಿಯೋಳಗಿರುವ ಕೆಲ ಬಂಡೆಗಲ್ಲುಗಳು ಪ್ರಾಚೀನ ಗ್ರಹ ಥಿಯಾ (Theia) ಇರುವಿಕೆಯ ಸಂಕೇತ ನೀಡುತ್ತಿವೆ. ಈ ಕುರಿತು ನಡೆಸಲಾಗಿರುವ ಒಂದು ಅಧ್ಯಯನ, ಲಕ್ಷಾಂತರ ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಈ ಗ್ರಹ ಇದೀಗ ಭೂಮಿಯ ಭಾಗವಾಗಿ ಮಾರ್ಪಟ್ಟಿದೆ ಎನ್ನುತ್ತಿದೆ. ಸೌರ ಮಂಡಲದ ಆರಂಭದ ದಿನಗಳಲ್ಲಿ ಭೂಮಿಗೆ ಮಂಗಳ ಗಾತ್ರದ 'ಥಿಯಾ' ಹೆಸರಿನ ಗ್ರಹ (Theia Planet) ಅಪ್ಪಳಿಸಿತ್ತು ಹಾಗೂ ಇದರಿಂದಲೇ ಚಂದ್ರನ ಸೃಷ್ಟಿಯಾಯಿತು ಎಂದು ಭಾವಿಸಲಾಗುತ್ತಿದೆ. ಭೂಗರ್ಭದಲ್ಲಿ (Cracke Inside The Earth) ಇಂದಿಗೂ ಕೂಡ ದೊಡ್ಡ ಸಂಖ್ಯೆಯಲ್ಲಿ ಹಲವು ಅಪರಿಚಿತ ವಿಶಾಲ ಬಂಡೆಗಳನ್ನು ಗಮನಿಸಲಾಗುತ್ತಿದ್ದು, ಇವುಗಳನ್ನು ಲೋ ಶಿಯರ್ ವೆಲಾಸಿಟಿ ಪ್ರೋವಿನ್ಸೆಜ್ (LLSVP) ಎಂದು ಕರೆಯಲಾಗುತ್ತದೆ. ಇವು ಅದೇ ಪ್ರಾಚೀನ ಗ್ರಹದ ಭಾಗಗಳಾಗಿವೆ ಎಂಬುದು ಏರಿಜೋನಾ ಸ್ಟೇಟ್ ಯೂನಿವರ್ಸಿಟಿ ಸಂಶೋಧನಾ ತಂಡದ ಅಭಿಮತವಾಗಿದೆ.
ಇತರ ಬಂಡೆಗಳಿಗಿಂತ ಇವು ಭಿನ್ನವಾಗಿವೆ (Science News In Kannada)
ಇವುಗಳಲ್ಲಿನ ಒಂದು LLSVP ಆಫ್ರಿಕಾ ಖಂಡದ ಕೆಳಭಾಗದಲ್ಲಿದ್ದರೆ, ಇನ್ನೊಂದು ಪ್ರಶಾಂತ ಮಹಾಸಾಗರದ ಕೆಳಭಾಗದಲ್ಲಿದೆ. ಈ ಎರಡು LLSVPಗಳು ಎಷ್ಟೊಂದು ವಿಶಾಲವಾಗಿವೆ ಎಂದರೆ, ಇವುಗಳ ಸಂಬಂಧ ಭೂಮಿಯ ಆಯಸ್ಕಾಂತೀಯ ಶಕ್ತಿ ಶಿಥಿಲಗೊಳಿಸುತ್ತಿವೆ ಎನ್ನಲಾಗಿದೆ. ಈ ಸಂಶೋಧನೆಯ ಕುರಿತು ಹೇಳಿಕೆ ನೀಡಿರುವ ಸಂಶೋಧನಾ ಲೇಖಕ ಕ್ವಾನ್ ಯುವಾನ್, ಈ ಬಂಡೆಗಲ್ಲುಗಳು ಅಕ್ಕಪಕ್ಕದಲ್ಲಿರುವ ಬೇರೆ ಬಂಡೆಗಲ್ಲುಗಳಿಗಿಂತ ಹೆಚ್ಚು ಘನವಾಗಿವೆ ಹಾಗೂ ಇವುಗಳ ರಾಸಾಯನಿಕ ಸಂರಚನೆ ಕೂಡ ವಿಭಿನ್ನವಾಗಿದೆ ಎಂದಿದ್ದಾರೆ. ಪ್ರಾಚೀನ ಥಿಯಾ ಗ್ರಹದ ಮೆಂಟಲ್ ಕೂಡ ಭೂಮಿಗಿಂತ ಹೆಚ್ಚು ಆಳವಾಗಿತ್ತು ಎಂದು ಯುವಾನ್ ಹೇಳುತ್ತಾರೆ. ಹೀಗಾಗಿ ಭೂಮಿ ಮತ್ತು ಪ್ರಾಚಿನ ಗ್ರಹದ (Ancient Planet) ಈ ಡಿಕ್ಕಿ ನಡೆದ ವೇಳೆ ಪ್ರಾಚೀನ ಗ್ರಹದ ಒಂದು ಭಾಗ ಶಾಶ್ವತವಾಗಿ ಭೂಮಿಯ ಭಾಗವಾಗಿದೆ ಮಾರ್ಪಟ್ಟಿದೆ ಎಂದು ಯುವಾನ್ ಹೇಳಿದ್ದಾರೆ.
ಥಿಯಾಗೆ ಯಾವುದೇ ಸಾಕ್ಷಾಧಾರಗಳಿಲ್ಲ
ವಾಸ್ತವದಲ್ಲಿ ಈ ಮೆಂಟಲ್ ಭೂಮಿಯ ಆಂತರಿಕ ಭಾಗವಾಗಿದ್ದು, ಇದು ಬಹುತೇಕ ಗಟ್ಟಿಯಾಗಿದೆ ಹಾಗೂ 1800 ಮೈಲುಗಳಷ್ಟು ವಿಶಾಲವಾಗಿದೆ. ಇದು ಭೂಮಿಯ ಕೋರ್ ಹಾಗೂ ಕ್ರಸ್ಟ್ ಮಧ್ಯದಲ್ಲಿದೆ. ಇದು ಭೂಮಿಯ ವಾಲ್ಯೂಮ್ ನ ಶೇ.84 ರಷ್ಟಿದೆ. ಇದರ ವಿಶೇಷತೆ ಎಂದರೆ ಈ 'ಗ್ರೇಟ್ ಇಂಪ್ಯಾಕ್ಟ್ ಥೆರಿ' (Giant Impact Hypothesis), ಚಂದ್ರ-ಭೂಮಿಯ ಸಿಸ್ಟಂ ಅನ್ನು ಹೋಲುತ್ತದೆ. ಆದರೆ, ಥಿಯಾ ಇರುವಿಕೆಯ ಕುರಿತು ಇದುವರೆಗೆ ಯಾವುದೇ ಸಾಕ್ಷಾಧಾರಗಳಿಲ್ಲ. ಏಕೆಂದರೆ ಈ ಘಟನೆ 2 ರಿಂದ 10 ಕೋಟಿ ವರ್ಷಗಳ ಹಿಂದೆ ಸಂಭವಿಸಿತ್ತು. ಈ ಥಿಯರಿ ಅನ್ನು ನಂಬುವ ಹಲವರು ಡಿಕ್ಕಿ ಸಂಭವಿಸಿದ ಬಳಿಕ ಎರಡೂ ಗ್ರಹಗಳ ಕೋರ್ ಒಂದರಲ್ಲೊಂದು ಬೆರೆತುಹೋಗಿವೆ ಹಾಗೂ ಆಗ ನಿರ್ಮಾಣಗೊಂಡ ರಾಸಾಯನಿಕ ಸಂರಚನೆಯಿಂದ ಭೂಮಿಯ ಮೇಲೆ ಜೀವರಾಶಿ ಸೃಷ್ಟಿಯಾಗಿರಬಹುದು ಎಂದು ಅವರು ಭಾವಿಸುತ್ತಾರೆ.
ಇದನ್ನೂ ಓದಿ-Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ
ಭೂಮಿಗಿಂತ ಹೆಚ್ಚು ಘನವಾಗಿದೆ
ಅರಿಜೋನಾ ಸ್ಟೇಟ್ ವಿವಿನ ಪಿಎಚ್ಡಿ ವಿದ್ಯಾರ್ಥಿಯಾಗಿರುವ ಯುವಾನ್ ಅವರ ಇತ್ತೀಚಿನ ಥಿಯರಿ LLSVPಗಳು ಈ ಡಿಕ್ಕಿಯ ಜೊತೆಗೆ ಸಂಬಂಧ ಹೊಂದಿವೆ ಎಂದಿದೆ. ಇದುವರೆಗೆ ಈ ಬಂಡೆಗಲ್ಲುಗಳ ಕುರಿತಾದ ಹಲವು ಪ್ರಮಾಣಗಳನ್ನು ಸಂಗ್ರಹಿಸಲು ಯತ್ನಿಸಲಾಗಿದೆ. ಈ ಕುರಿತು ಹೇಳುವ ಕೆಲ ಸಂಶೋಧಕರು ಇವು ಭೂಮಿಯ ಮ್ಯಾಗ್ಮಾನಿಂದ ಹೊರಬಂದು ಕ್ರಿಷ್ಟಲ್ ನಲ್ಲಿ ಮಾರ್ಪಟ್ಟಿವೆ ಎನ್ನುತ್ತಾರೆ. ಇನ್ನೊಂದೆಡೆ ಈ ಎರಡೂ ಗ್ರಹಗಳು ಡಿಕ್ಕಿ ಹೊಡೆದಾಗ, ಥಿಯಾ ಗ್ರಹದ ಲೋಹದಿಂದ ಕೂಡಿದ ಭಾಗ ಭೂಮಿಯ ಮೆಂಟಲ್ ಭಾಗಕ್ಕೆ ಸೇರಿದೆ ಎಂದು ಯುವಾನ್ ಹೇಳುತ್ತಾರೆ. ಥಿಯೋ ಆಕಾರದ ಇಂಪ್ಯಾಕ್ಟರ್ ನಿಂದ ಇಂತಹ ಬಂಡೆಗಳು ಸಿಗಬಹುದು. ಈ ಕುರಿತಾಗಿ ನಡೆಸಲಾಗಿರುವ ಇನ್ನೊಂದು ಸಂಶೋಧನೆ LLSVPನಿಂದ ಹೊರಹೊಮ್ಮುವ ಕೆಮಿಕಲ್ ಸಿಗ್ನೇಚರ್, ಥಿಯಾ ಇಂಪ್ಯಾಕ್ಟ್ ಕಾಲಕ್ಕೆ ಸಂಬಂಧಿಸಿರಬಹುದು ಎನ್ನುತ್ತದೆ. ಇಂತಹ ಸನ್ನಿವೇಶದಲ್ಲಿ ನಾವು ಇವೆರಡನ್ನು ಒಟ್ಟಿಗೆ ನೋಡಬಹುದು ಎನ್ನುತ್ತದೆ.
ಇದನ್ನೂ ಓದಿ-Earth Rotation:ಭೂಮಿ ತಿರುಗುವಿಕೆ ವೇಗದಲ್ಲಿ ಹೆಚ್ಚಳ, ದಣಿದ ಗಡಿಯಾರಗಳು, ಆತಂಕಕ್ಕೊಳಗಾದ ವಿಜ್ಞಾನಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.