Upcoming Smartphones: ಮುಂದಿನ ವಾರ ಬಿಡುಗಡೆಯಾಗಲಿರುವ ಸ್ಮಾರ್ಟ್ಫೋನ್ಗಳು
Upcoming Smartphones Next Week: ಮುಂದಿನ ಕೆಲವು ದಿನಗಳಲ್ಲಿ ಕೇವಲ 3 ಹೊಸ ಸ್ಮಾರ್ಟ್‍ಫೋನ್‍ಗಳು ಮಾತ್ರ ಬಿಡುಗಡೆಯಾಗಲಿವೆ. ಇವುಗಳಲ್ಲಿ 2 foldable, ಒಂದು ಬಜೆಟ್ ಮಾದರಿಯಾಗಿದೆ. ಒಂದು ಫೋಲ್ಡಬಲ್ ಮತ್ತು ಬಜೆಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇನ್ನೊಂದು ಫೋಲ್ಡಬಲ್ ಚೀನಾದಲ್ಲಿ ಬಿಡುಗಡೆಯಾಗಲಿದೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‍ಗಳ ಬಿಡುಗಡೆ ವಿರಳವಾಗಿದೆ. ಮುಂದಿನ ವಾರ ಕೇವಲ 3 ಹೊಸ ಸ್ಮಾರ್ಟ್‍ಫೋನ್‍ಗಳು ಮಾತ್ರ ಬಿಡುಗಡೆಯಾಗುತ್ತಿವೆ. ಈ ಪೈಕಿ 2 foldable ಆದರೆ, ಒಂದು ಬಜೆಟ್ ಮಾದರಿಯಾಗಿದೆ. 1 ಫೋಲ್ಡಬಲ್ ಮತ್ತು ಬಜೆಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇನ್ನೊಂದು ಫೋಲ್ಡಬಲ್ ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಎಲ್ಲಾ 3 ಸಾಧನಗಳು ಮುಂದಿನ ವಾರದ ಮಧ್ಯದಲ್ಲಿ ಲಭ್ಯವಿರುತ್ತವೆ. ಈ ಫೋನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಮುಂಬರುವ ಸ್ಮಾರ್ಟ್‌ಫೋನ್‌ಗಳು
Samsung Galaxy A05s: ಸ್ಯಾಮ್‌ಸಂಗ್‌ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ Galaxy A05s ಅಕ್ಟೋಬರ್ 18ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಭಾರತದಲ್ಲಿನ ಮೊದಲ Galaxy Ax5 ಸರಣಿಯ ಸಾಧನವಾಗಿದೆ. ಫೋನ್ 6.7-ಇಂಚಿನ ಪೂರ್ಣ HD+ ಡ್ಯೂಡ್ರಾಪ್ ನಾಚ್ ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಚಿಪ್ಸೆಟ್, 50MP ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಮತ್ತು 13MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಹ್ಯಾಂಡ್ಸೆಟ್ ಹಸಿರು, ನೇರಳೆ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಸ್ಟೇಟ್ ಮೆಂಟ್ ಚೆಕ್ ಮಾಡುವುದನ್ನು ಮರೆಯಬೇಡಿ.. ಯಾಕೆ ಗೊತ್ತಾ..?
Oppo Find N3 ಮತ್ತು OnePlus ಫೋಲ್ಡ್: Oppo Find N3 ಬಿಡುಗಡೆಗೆ ಸಿದ್ಧವಾಗಿದ್ದು, ಇದು ಅಕ್ಟೋಬರ್ 19ರಂದು ಮಧ್ಯಾಹ್ನ 2:30ಕ್ಕೆ ಚೀನಾದಲ್ಲಿ ಲಾಂಚ್ ಆಗಲಿದೆ. ಈವೆಂಟ್ ವೀಬೊ ಮತ್ತು ಇತರ ಪ್ರಮುಖ ಚೈನೀಸ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶನ ಮತ್ತು ಲೈವ್-ಸ್ಟ್ರೀಮ್ ಆಗಲಿದೆ. ಈ ಫೋನ್ ಭಾರತದಲ್ಲಿಯೂ ಸಹ ಬಿಡುಗಡೆಯಾಗಲಿದೆ. ಇದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಜಾಗತಿಕ ಮಾರುಕಟ್ಟೆಗಳಿಗೆ ಲಭ್ಯವಿರುತ್ತದೆ. ಈ ಫೋನ್‌ನ ಅಂತಾರಾಷ್ಟ್ರೀಯ ಮೇಕ್ಅಪ್ ಅನ್ನು OnePlus ಫೋಲ್ಡ್ ಮೂಲಕ ಪ್ರಾರಂಭಿಸಲಾಗುವುದು.
ಈ ಫೋನ್ 7.8-ಇಂಚಿನ 2K ಒಳಗಿನ ಡಿಸ್ಪ್ಲೇ, 6.31-ಇಂಚಿನ FHD+ ಬಾಹ್ಯ ಸ್ಕ್ರೀನ್, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 ಚಿಪ್, LPDDR5x RAM, UFS 4.0 ಸ್ಟೋರೇಜ್, ಹ್ಯಾಸೆಲ್ಬ್ಲಾಡ್-ಟ್ಯೂನ್ಡ್ 48MP (wide) + 48MP (ultrawide) + 64 (3x periscope). ಹೊಂದಿದೆ. ಜೊತೆಗೆ ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಮತ್ತು 4,800mAh ಬ್ಯಾಟರಿ ಇರುತ್ತದೆ.
ಇದನ್ನೂ ಓದಿ: Whirlpool 6 kg ವಾಷಿಂಗ್ ಮಷಿನ್ ಈಗ ಕೇವಲ 1,240 ರೂಪಾಯಿಗೆ ಲಭ್ಯ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.