ಬೆಂಗಳೂರು : ನೀವು ಕೇಂದ್ರ ಸರ್ಕಾರಿ ನೌಕರರೇ? ನಿಮ್ಮ ಮನೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಅಥವಾ ಪಿಂಚಣಿದಾರರು ಇದ್ದಾರೆಯೇ? ಹಾಗಾಗಿ ಮುಂದಿನ ದಿನಗಳಲ್ಲಿ ಬಹಳಷ್ಟು ಒಳ್ಳೆಯ ಸುದ್ದಿಗಳು ನಿಮಗಾಗಿ ಕಾದಿವೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ಎರಡು ಗುಡ್ ನ್ಯೂಸ್ ನೀಡಲು ಸರ್ಕಾರ ಸಜ್ಜಾಗಿದೆ. ಡಿಎ ಜೊತೆಗೆ ಫಿಟ್‌ಮೆಂಟ್ ಅಂಶವನ್ನೂ ಸರ್ಕಾರ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ.
ಎಷ್ಟು ಹೆಚ್ಚಾಗುತ್ತದೆ ತುತ್ತಿಭತ್ಯೆ ? :
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಾಗಲಿದ್ದು, ಒಟ್ಟು ತುಟ್ಟಿ ಭತ್ಯೆ ಶೇ.45ಕ್ಕೆ ಏರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಜೂನ್‌ನಲ್ಲಿ ಸೂಚ್ಯಂಕ ಸಂಖ್ಯೆ 136.4 ಪಾಯಿಂಟ್‌ಗಳಷ್ಟಿತ್ತು. ಇದರ ಆಧಾರದ ಮೇಲೆ ಲೆಕ್ಕ ಹಾಕಿದರೆ ಡಿಎ ಸ್ಕೋರ್ 46.24ಕ್ಕೆ ತಲುಪಿದೆ. ಅಂದರೆ ಡಿಎಯಲ್ಲಿ ಒಟ್ಟು ಶೇ.4ರಷ್ಟು ಹೆಚ್ಚಳವಾಗಲಿದೆ ಎನ್ನುವ ಲೆಕ್ಕಾಚಾರವೂ ಇದೆ. ಒಂದು ವೇಳೆ ತುಟ್ಟಿಭತ್ಯೆ ಶೇ 4 ರಷ್ಟು ಹೆಚ್ಚಾದರೆ ಒಟ್ಟು ಡಿಎ ಕೂಡಾ 46 ರಷ್ಟು ಹೆಚ್ಚಾಗುತ್ತದೆ ಎನ್ನುತಾರೆ ಅರ್ಥಶಾಸ್ತ್ರಜ್ಞರು. ಆದರೆ, ಸರ್ಕಾರದ ಘೋಷಣೆಯ ನಂತರವೇ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎನ್ನುವುದು ಸ್ಪಷ್ಟವಾಗಲಿದೆ.
ಇದನ್ನೂ ಓದಿ : Royal Enfield 350 ಪ್ರಿಯರಿಗೆ ಹಬ್ಬದ ಉಡುಗೊರೆ ನೀಡಿದೆ ಕಂಪನಿ!
4 ಪ್ರತಿಶತದಷ್ಟು ಹೆಚ್ಚಾಗುವುದು ತುಟ್ಟಿಭತ್ಯೆ :
ಮೂಲ ವೇತನ - 18,000 ರೂ. ಮೇಲೆ ಲೆಕ್ಕಾಚಾರ :
ಮೂಲ ವೇತನ - ರೂ 18,000
ಹೊಸ ಡಿಎ (ಶೇ 46) - ತಿಂಗಳಿಗೆ 8280 .ರೂ
ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 7560.ರೂ
ಎಷ್ಟಾಗಿದೆ ಹೆಚ್ಚಳ - ತಿಂಗಳಿಗೆ 720 . ರೂ
ವಾರ್ಷಿಕ ಹೆಚ್ಚಳ ಎಷ್ಟು - 8640 . ರೂ
ಮೂಲ ವೇತನ - 56,900 ರೂ. ಮೇಲೆ ಲೆಕ್ಕಾಚಾರ :
ಹೊಸ ಡಿಎ (ಶೇ 46) - ತಿಂಗಳಿಗೆ 26,174 .ರೂ
ಪ್ರಸ್ತುತ ಡಿಎ (ಶೇ 42) - ತಿಂಗಳಿಗೆ 23,898 .ರೂ
ಎಷ್ಟಾಗಿದೆ ಹೆಚ್ಚಳ - ತಿಂಗಳಿಗೆ 2,276 ರೂ
ವಾರ್ಷಿಕ ಹೆಚ್ಚಳ ಎಷ್ಟು - 27,312
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಬಂಪರ್ ಲಾಭ, 56,900 ಬೇಸಿಕ್ ಸ್ಯಾಲರಿ ಇರುವವರ ಡಿಎ 3,14,088 ರೂ.ಗಳಿಗೆ ತಲುಪಲಿದೆ!
ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ಪ್ರಯೋಜನ :
ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಹಿಂದೆ ಮಾರ್ಚ್‌ನಲ್ಲಿ ನೌಕರರ ಡಿಎ ಹೆಚ್ಚಿಸಲಾಗಿತ್ತು. ಆಗ ತುಟ್ಟಿಭತ್ಯೆಯನ್ನು 4% ಹೆಚ್ಚಳದೊಂದಿಗೆ 38% ರಿಂದ 42% ಕ್ಕೆ ಏರಿಸಲಾಗಿತ್ತು. ಜುಲೈ 2023 ರ ತುಟ್ಟಿಭತ್ಯೆ ಹೆಚ್ಚಳದ ದಿನಾಂಕದ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ. ಆದರೆ, ನವರಾತ್ರಿಗೂ ಮುನ್ನವೇ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಎರಡು ಬಾರಿ ಡಿಎ ಹೆಚ್ಚಳ :
ಏಳನೇ ವೇತನ ಆಯೋಗದ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ದರಗಳು ಜನವರಿ ಮತ್ತು ಜುಲೈನಿಂದ ಜಾರಿಗೆ ಬರುತ್ತವೆ. ಸರ್ಕಾರ ಈಗ ಡಿಎ ಹೆಚ್ಚಿಸಿದರೆ ಜುಲೈ 1 ರಿಂದಲೇ ಈ ಹೆಚ್ಚಳ ಜಾರಿಗೆ ಬರಲಿವೆ. ಅಂದರೆ ಈ ಬಾರಿ ಬರುವ ವೇತನದೊಂದಿಗೆ ನೌಕರರು ಆರ್ಯರ್ ಮೊತ್ತವನ್ನು ಪಡೆಯುತ್ತಾರೆ.
ಇದನ್ನೂ ಓದಿ : ದಸರಾಗೂ ಮುನ್ನವೇ ಸರ್ಕಾರಿ ನೌಕರರ ವೇತನ ಹೆಚ್ಚಳ ಖಚಿತ ! 27,000 ದಷ್ಟು ಏರಿಕೆಯಾಗಲಿದೆ ಸ್ಯಾಲರಿ
ಫಿಟ್‌ಮೆಂಟ್ ಅಂಶವೂ ಹೆಚ್ಚಾಗುವುದು :
ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಸರ್ಕಾರ ಕೂಡಾ ಈ ಬಾರಿ ನೌಕರರ ಬೇಡಿಕೆಯನ್ನು ಪರಿಗಣಿಸುವ ಸಾಧ್ಯತೆ ಇದೆ. ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಈ ರೀತಿಯಲ್ಲಿ ಸರ್ಕಾರಿ ಉದ್ಯೋಗಿಗಳು ಶೀಘ್ರದಲ್ಲೇ ಎರಡು ಸಿಹಿ ಸುದ್ದಿಗಳನ್ನು ಪಡೆಯಲಿದ್ದಾರೆ. ಅವುಗಳೆಂದರೆ ಡಿಎ ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ ನಲ್ಲಿ ಹೆಚ್ಚಳ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.