Mahindra XUV400 New Features : ಟಾಟಾ ನೆಕ್ಸಾನ್ EV ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ SUV ಆಗಿದೆ.  ಆದರೆ ಈಗ ಈ ಕಾರೂ ಮಹೀಂದ್ರಾ XUV400ನಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ. XUV400ಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರುವುದರಿಂದ ಈ ಸ್ಪರ್ಧೆ ಇನ್ನಷ್ಟು ಹೆಚ್ಚಿದೆ. ನೆಕ್ಸಾನ್ EVಗೆ ಹೋಲಿಸಿದರೆ ಇಲ್ಲಿಯವರೆಗೆ Mahindra XUV400 ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿಲ್ಲ. ಇದನ್ನು ಮನಗಂಡಿರುವ ಮಹೀಂದ್ರಾ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.


COMMERCIAL BREAK
SCROLL TO CONTINUE READING

ಮಹೀಂದ್ರ XUV400ನ ಹೊಸ ವೈಶಿಷ್ಟ್ಯಗಳು : 
ಮಾಧ್ಯಮ ವರದಿಗಳ ಪ್ರಕಾರ, ಮಹೀಂದ್ರಾ  8 ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.  ಇದು ಕ್ರೂಸ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಆಟೋ ಡಿಮ್ಮಿಂಗ್ ಐಆರ್‌ವಿಎಂ, ಫ್ರಂಟ್ ಫಾಗ್ ಲ್ಯಾಂಪ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಪಿ), ನಾಲ್ಕು ಸ್ಪೀಕರ್‌ಗಳು ಮತ್ತು ಎರಡು ಟ್ವೀಟರ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಬೂಟ್  ಲ್ಯಾಂಪ್ ಗಳನ್ನು ದೀಪ ಒಳಗೊಂಡಿದೆ. ಆದರೆ ಈ ಹೆಚ್ಚುವರಿ ವೈಶಿಷ್ಟ್ಯಗಳ ಬಗ್ಗೆ  ಮಹೀಂದ್ರಾ ಅಧಿಕೃತ ಹೇಳಿಕೆ ನೀಡಿಲ್ಲ. 


ಇದನ್ನೂ ಓದಿ : ಮೊಬೈಲ್’ನಲ್ಲಿ ಅನಗತ್ಯ ಸ್ಟೋರೇಜ್ ತುಂಬಿದೆಯೇ? ಕ್ಷಣದಲ್ಲೇ ಸಿಂಪಲ್ ಪರಿಹಾರ ನೀಡಲಿದೆ ಈ ‘ಸ್ಮಾರ್ಟ್ ಲಾಕ್’


 ಈ ಪೈಕಿ ಪರಿಚಯಿಸಲಾಗುವ ಕ್ರೂಸ್ ಕಂಟ್ರೋಲ್ ಕಾರು ಓಡಿಸುವವರಿಗೆ ಹೈ ವೇಯಲ್ಲಿ ಬಹಳಷ್ಟು ಅನುಕೂಲಕರವಾಗಿರುವಂತೆ ಮಾಡುತ್ತದೆ. ಇದರಲ್ಲಿ ಒಂದು ಸ್ಪೀಡ್ಗೆ ಕ್ರೂಸ್ ಸೇಟ್ ಮಾಡಿ ನಂತರ ಎಕ್ಸ್ ಲೇಟರ್ ಪೆಡಲ್ ಅನ್ನು ಬಿಟ್ಟು ಬಿಡಬಹುದಾಗಿದೆ.  ಕಾರು ಸೇಟ್ ಮಾಡಿದ ಸ್ಪೀಡ್ ನಲ್ಲಿಯೇ ಹೈವೇಯಲ್ಲಿ ತನ್ನ ಪಾಡಿಗೆ ಚಲಿಸುತ್ತದೆ. 


ವರದಿಗಳ ಪ್ರಕಾರ, ಈ ಹೊಸ ವೈಶಿಷ್ಟ್ಯಗಳನ್ನು ಸಿಂಗಲ್-ಟೋನ್ ಮತ್ತು ಡ್ಯುಯಲ್-ಟೋನ್ ಬಣ್ಣ ರೂಪಾಂತರಗಳೊಂದಿಗೆ ಟಾಪ್ -ಸ್ಪೆಕ್ EL ಟ್ರಿಮ್‌ನಲ್ಲಿ ಮಾತ್ರ ನೀಡಲಾಗುವುದು. ಈ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ, ಮಹೀಂದ್ರಾ XUV400 ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅಂದರೆ, ಅದರ ಟಾಪ್ ವೆರಿಯೇಂಟ್ ದುಬಾರಿಯಾಗಬಹುದು. 


ಇದನ್ನೂ ಓದಿ : ಸ್ಮಾರ್ಟ್ ಫೋನ್ ನಲ್ಲಿ ಇಂಟರ್ನೆಟ್ ವೇಗ ಕಡಿಮೆಯಾಗಿದೆಯೇ? ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ!


ಮಹೀಂದ್ರಾ XUV400 ಪ್ರಸ್ತುತ 16 ಲಕ್ಷದಿಂದ 19.2 ಲಕ್ಷದಷ್ಟಿದ್ದರೆ ಅದರ ಪ್ರಮುಖ ಪ್ರತಿಸ್ಪರ್ಧಿಯಾದ ಟಾಟಾ ನೆಕ್ಸಾನ್ ಇವಿ ಬೆಲೆ  14.5 ಲಕ್ಷದಿಂದ 19.50 ಲಕ್ಷದವರೆಗೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.