ನವದೆಹಲಿ : YouTube New Features:: ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯುಟ್ಯೂಬ್ (YouTube) ತನ್ನ ಬಳಕೆದಾರರ ಅನುಭವವನ್ನು ಉತ್ತಮಗೊಳಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ.  ಇದೀಗ ಯೂಟ್ಯೂಬ್ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಈಗ ಕಂಪನಿಯು ಯೂಟ್ಯೂಬ್‌ನಿಂದ ಒಂದು ಪ್ರಮುಖ ಫೀಚರ್ (feature) ಅನ್ನು ತೆಗೆದುಹಾಕಿದೆ. ಇದರಿಂದ ವೀಡಿಯೊ ಅಪ್ ಲೋಡ್ ಮಾಡುವವರಿಗೆ ಇದರಿಂದ  ಸಾಕಷ್ಟು ಪ್ರಯೋಜನವಾಗಲಿದೆ ಎಂದು ಕಂಪನಿ ಹೇಳಿದೆ. 


COMMERCIAL BREAK
SCROLL TO CONTINUE READING

ಡಿಸ್ ಲೈಕ್ ಬಟನ್ ತೆಗೆದು ಹಾಕಲಾಗಿದೆ :
ವರದಿಯ ಪ್ರಕಾರ, ಡಿಸ್ ಲೈಕ್ (Dislike) ಬಟನ್ ಅನ್ನು ಯೂಟ್ಯೂಬ್ ನಿಂದ ತೆಗೆದುಹಾಕಲಾಗುವುದು.  ಈ ಬಗ್ಗೆ  ಯೂಟ್ಯೂಬ್‌ (YouTube) ಟ್ವೀಟ್ ಮೂಲಕ ಖಚಿತಪಡಿಸಿದೆ. ಅದರ ಪ್ರಕಾರ ಡಿಸ್ ಲೈಕ್ ಬಟನ್  ಸ್ಕ್ರೀನ್ ಮೇಲೆ ಕಾಣಿಸಿತ್ತದೆ. ಆದರೆ ವಿಡಿಯೋವನ್ನು ಎಷ್ಟು ಜನ ಲೈಕ್ ಮಾಡಿದ್ದಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಇನ್ನು ಮುಂದೆ ವಿಡಿಯೋವನ್ನು ಎಷ್ಟು ಜನ ನೋಡಿದ್ದಾರೆ ಎಷ್ಟು ಜನ ಲೈಕ್ ಮಾಡಿದ್ದಾರೆ ಎನ್ನುವುದಷ್ಟೇ ಗೊತ್ತಾಗಲಿದೆ. 


ಇದನ್ನೂ ಓದಿ : Data Leak: ನೀವೂ ಮೊಬೈಲ್ ಮೂಲಕ ಹಣ ಪಾವತಿಸುತೀರಾ! ಈ ಆಪ್ ನಿಂದ 35 ಲಕ್ಷ ಜನರ ದತಾಂಶ ಸೋರಿಕೆ


ಯೂಟ್ಯೂಬ್ ಪ್ರಕಾರ, ಚಾನಲ್‌ನಲ್ಲಿ ಲೈಕ್ ಮತ್ತು ಡಿಸ್ ಲೈಕ್ ಆಯ್ಕೆಗಳನ್ನು ಪ್ರತಿಕ್ರಿಯೆಗಾಗಿ ವಿನ್ಯಾಸಗೊಳಿಸಲಾಗಿದ. ಆದರೆ ಈಗ ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಜನರು ಡಿಸ್ ಲೈಕ್ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಡಿಯೋ ಅಪ್ ಲೋಡ್ (Video upload) ಮಾಡುವವರು ಮತ್ತು ಸಂಸ್ಥೆಗಳನ್ನು ಟಾರ್ಗೆಟ್ (target) ಮಾಡಲಾಗುತ್ತಿದೆ. ಡಿಸ್ ಲೈಕ್  ಆಯ್ಕೆಯನ್ನು ಪ್ರತಿಭಟನೆಗಾಗಿ ಬಳಸಲು ಪ್ರಾರಂಭಿಸಿದ್ದಾರೆ. ಹಾಗಾಗಿ ಚಾನಲ್ ನಿಂದ ಡಿಸ್ ಲೈಕ್ ಬಟನ್ (Dislike button) ಅನ್ನು ತೆಗೆದುಹಾಕಿದರೆ,  ವಿಡಿಯೋ ಅಪ ಲೋಡ್ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಕಂಪನಿ ಹೇಳಿದೆ. 


ಇದನ್ನೂ ಓದಿ : Beginning Of Life On Earth: ಬ್ಯಾಕ್ಟೀರಿಯಾ ಕುರಿತಾದ ಈ ಅಧ್ಯಯನ ಭೂಮಿಯ ಮೇಲೆ ಜೀವನ ಆರಂಭದ ಗ್ರಹಿಕೆಗೆ ದೊಡ್ಡ ಚಾಲೆಂಜ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.