Beginning Of Life On Earth: ಬ್ಯಾಕ್ಟೀರಿಯಾ ಕುರಿತಾದ ಈ ಅಧ್ಯಯನ ಭೂಮಿಯ ಮೇಲೆ ಜೀವನ ಆರಂಭದ ಗ್ರಹಿಕೆಗೆ ದೊಡ್ಡ ಚಾಲೆಂಜ್

Beginning Of Life On Earth - ಈ ಅಧ್ಯಯನ ಜೀವನದ ವಿಕಾಸಕ್ಕೆ ಸಂಬಂಧಿಸಿದ ಗ್ರಹಿಕೆಗೆ ಸವಾಲೆಸಗುವ ಸಾಧ್ಯತೆ ಇದೆ.  ಏಕೆಂದರೆ ಇದುವರೆಗೆ ಆಮ್ಲಜನಕ ಉತ್ಪಾದಿಸುವ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ಭೂಮಿಯ ಮೇಲಿನ ವಿಕಾಸದ ಒಂದು ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಇದಾದ ಬಳಿಕ ಸಂಕೀರ್ಣ ಜೀವನಾಭಿವೃದ್ಧಿಗೆ ಹಲವು ಶತಕೋಟಿ ವರ್ಷಗಳೇ ಬೇಕಾದವು ಎಂದು ನಂಬಲಾಗಿದೆ.

Written by - Nitin Tabib | Last Updated : Mar 31, 2021, 04:02 PM IST
  • ಬ್ಯಾಕ್ಟೀರಿಯಾ ಕುರಿತು ನೂತನ ಸಂಶೋಧನೆ ಪ್ರಕಟ.
  • ಇದು ಭೂಮಿಯ ಮೇಲೆ ಜೀವನವಿಕಾಸದ ಗ್ರಹಿಕೆಗೆ ಚಾಲೆಂಜ್,
  • ಲಂಡನ್ ನ ಇಂಪೀರಿಯಲ್ ಕಾಲೇಜು ಸಂಶೋಧಕರಿಂದ ದೊಡ್ಡ ಸಂಶೋಧನೆ.
Beginning Of Life On Earth: ಬ್ಯಾಕ್ಟೀರಿಯಾ ಕುರಿತಾದ ಈ ಅಧ್ಯಯನ ಭೂಮಿಯ ಮೇಲೆ ಜೀವನ ಆರಂಭದ ಗ್ರಹಿಕೆಗೆ ದೊಡ್ಡ ಚಾಲೆಂಜ್ title=
Evolution Of Life On Earth (File Photo)

ನವದೆಹಲಿ:   Beginning Of Life On Earth - ದ್ಯುತಿಸಂಶ್ಲೇಷಣಾ ಕ್ರಿಯೆ ಅಂದರೆ ಫೋಟೋ ಸಿಂಥೆಸಿಸ್ (Photosynthesis) ಗಿಡ-ಮರಗಳ ಪಾಲಿಗೆ ಒಂದು ಅತ್ಯಾವಶ್ಯಕ ಪ್ರಕ್ರಿಯೆ ಎಂದೇ ಹೇಳಲಾಗುತ್ತದೆ. ಈ ಗಿಡ-ಮರಗಳಿಂದಲೇ ಪ್ರಾಚೀನ ಕಾಲದಲ್ಲಿ ಭೂಮಿಯ ಮೇಲೆ ಸೂಕ್ಷ್ಮಜೀವಿಗಳ ಜೀವನ ಆರಂಭಗೊಂಡಿತ್ತು. ಆದರೆ, ಇತೀಚೆಗೆ ನಡೆಸಲಾಗಿರುವ ತಾಜಾ ಸಂಶೋಧನೆ (Life Science Research), ಆರಂಭಿಕ ಬ್ಯಾಕ್ತಿರೀಯಾಗಳಲ್ಲಿನ (Bacteria) ಒಂದು ಪ್ರಕ್ರಿಯೆ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯ ಪ್ರಮುಖ ಘಟ್ಟದಲ್ಲಿ ಶಾಮೀಲಾಗಿತ್ತು ಎಂದು ಹೇಳಿದೆ. ಈ ಸಂಶೋಧನೆ ಭೂಮಿಯ ಮೇಲೆ ಜೀವನ ರೂಪಗೊಂಡ ನಮ್ಮ ಈವರೆಗಿನ ಕಲ್ಪನೆಯನ್ನು ಬದಲಾಯಿಸುವ ಸಾಧ್ಯತೆ ಇದೆ.

ದ್ಯುತಿಸಂಶ್ಲೇಷಣೆ ಒಂದು ಪ್ರಮುಖ ಪ್ರಕ್ರಿಯೆ
ಈ ಅಧ್ಯಯನ ಜೀವನ ವಿಕಾಸದ ನಮ್ಮ ಈ ಮೊದಲಿನ ಗ್ರಹಿಕೆಗೆ ಸವಾಲೆಸಗುವ ಸಾಧ್ಯತೆ ಇದೆ. ಏಕೆಂದರೆ ಭೂಮಿಯ ಮೇಲೆ ಜೀವನದ ವಿಕಾಸದ ಕ್ರಮದಲ್ಲಿ ಆಕ್ಸಿಜನ್ ಉತ್ಪತ್ತಿಸುವ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯನ್ನು ಒಂದು ಪ್ರಮುಖ ಘಟ್ಟ ಎಂದೇ ಭಾವಿಸಲಾಗುತ್ತದೆ. ಇದು ಪ್ರಕ್ರಿಯೆ ಬಂದ ಬಳಿಕವೇ ಭೂಮಿಯ ಮೇಲೆ ಜಟಿಲವಾದ ಜೀವನ ಆರಂಭಗೊಂಡಿತು ಮತ್ತು ಸಂಪೂರ್ಣ ಜೀವನ ವಿಕಾಸಕ್ಕೆ ಲಕ್ಷಾಂತರ ವರ್ಷಗಳೆ ಬೇಕಾದವು ಎಂದು ಹೇಳಲಾಗುತ್ತದೆ.

ಬ್ಯಾಕ್ಟೀರಿಯಾಗಳಲ್ಲಿ ಪ್ರೋಟೀನ್
ದ್ಯುತಿಸಂಶ್ಲೇಷಣೆಯ ಕೆಲ ಪ್ರಕ್ತಿಯೆಗಳು ಆರಂಭಿಕ ಜೀವನದ ಕಾಲದಲ್ಲಿ ಅಸ್ತಿತ್ವದಲ್ಲಿದ್ದವು ಎಂದು ಈ ಅಧ್ಯಯನ ಹಕ್ಕು ಸಾಧಿಸಿದೆ. ಲಂಡನ್ ಮೂಲದ ಇಂಪೀರಿಯಲ್ ಕಾಲೇಜು ವಿಜ್ಞಾನಿಗಳ ತಂಡ ದ್ಯುತಿಸಂಶ್ಲೇಷಣೆಗೆ ಬೇಕಾಗುವ ಅತ್ಯಾವಶ್ಯಕ ಪ್ರೋಟೀನ್ ನ ವಿಕಾಸ ಹಾಗೂ ಭೂಮಿಯ ಮೇಲೆ ಬ್ಯಾಕ್ಟೀರಿಯಾ ಜೀವನದ ಉತ್ಪತ್ತಿಯ ಸಮಯವನ್ನು ಪತ್ತೆಹಚ್ಚಿದೆ. 

ವಿಜ್ಯಾನಿಗಳಿಗೆ ಇದು ಮೊದಲಿನಿಂದಲೇ ತಿಳಿದಿತ್ತು
ವಿಜ್ಹಾನಿಗಳ ಈ ನಿಷ್ಕರ್ಷ BBA ಬಯೋಎನರ್ಜೆಟಿಕ್ಸ್  ಜರ್ನಲ್ ನಲ್ಲಿ ಪ್ರಕಾಶಿತಗೊಂಡಿದೆ. ಈ ಕುರಿತು ಮಾತನಾಡಿರುವ ಈ ಅಧ್ಯಯನದ ಪ್ರಮುಖ ಸಂಶೋಧಕ ಹಾಗೂ ಇಂಪೀರಿಯಲ್ ಕಾಲೇಜಿನ ಲೈಫ್ ಸೈನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಡಾ. ತಾನಾಯಿ ಕಾರ್ಡೋನಾ, "ಆಕ್ಸಿಜನ್ ಉತ್ಪತ್ತಿಗೆ ಫೋಟೋಸಿಸ್ಟಂ-2 ಹೆಸರಿನ ಜೈವಿಕತಂತ್ರ ತುಂಬಾ ಹಳೆಯ ವಿಧಾನವಾಗಿದೆ ಎಂಬುದನ್ನು ನಾವು ಮೊದಲೇ ತೋರಿಸಿದ್ದೇವೆ. ಆದರೆ ಅದನ್ನು ಇದುವರೆಗೆ  ಜೀವನದ ಇತಿಹಾಸದಲ್ಲಿ ಸರಿಯಾದ ಸಮಯಾವಧಿಗೆ ಇಡಲು ನಮ್ಮಿಂದ ಸಾಧ್ಯವಾಗಿರಲಿಲ್ಲ" ಎಂದಿದ್ದಾರೆ.

ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯ ಪ್ರಕಾರಗಳು (Science News In Kannada)
'ಫೋಟೋಸಿಸ್ಟಂ-2 ವಿಕಾಸದ ಸ್ವರೂಪವನ್ನು ನಮಗೆ ತೋರಿಸುತ್ತಿದ್ದು. ಅದು ಕೇವಲ ಹಳೆ ಎಂಜೈಮ್ ಗಳಲ್ಲಿ ಮಾತ್ರ ಇರುತ್ತಿತ್ತು ಮತ್ತು ಅವು ಜೀವನದ ವಿಕಾಸಕ್ಕೆ ಕಾರಣವಾಗಿದ್ದವು. ದ್ಯುತಿಸಂಶ್ಲೇಷಣೆಯಲ್ಲಿ ಒಟ್ಟು ಎರಡು ಪ್ರಕಾರಗಳಿವೆ. ಒಂದರಲ್ಲಿ ಆಕ್ಸಿಜನ್ ಉತ್ಪತ್ತಿಯಾಗುತ್ತದ್ದರೆ, ಮತ್ತೊಂದರಲ್ಲಿ ಆಕ್ಸಿಜನ್ ಉತ್ಪತ್ತಿಯಾಗುವುದಿಲ್ಲ. ಆಕ್ಸಿಜನ್ ಉತ್ಪತ್ತಿಸುವ ದ್ಯುತಿಸಂಶ್ಲೇಷಣೆ ಪ್ರಕ್ರಿಯೆ ನಂತರದ ಕಾಲದಲ್ಲಿ ಬೆಳಕಿಗೆ ಬಂದಿದೆ ಎಂದು ನಂಬಲಾಗಿದೆ" ಎಂದು ಕಾರ್ಡೋನಾ ಹೇಳಿದ್ದಾರೆ. 

ಇದನ್ನೂ ಓದಿ- Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ

ಬ್ಯಾಕ್ಟೀರಿಯಾ ಗಳಲ್ಲಿ ಎಂಜೈಮ್ ಎಲ್ಲಿಯವರೆಗಿತ್ತು
ಹೊಸ ಅಧ್ಯಾಯದ ಪ್ರಕಾರ ಆಕ್ಸಿಜನ್ ಉತ್ಪತ್ತಿಸುವ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಯಲ್ಲಿ ಎಂಜೈಮ್ ಗಳು ಆರಂಭಿಕ ಬ್ಯಾಕ್ಟೀರಿಯಾಗಳಲ್ಲಿ ಮಾತ್ರ ಇದ್ದಿರಬಹುದು. ಭೂಮಿಯ ಮೇಲೆ ಆರಂಭಿಕ ಜೀವನದ ಸಂಕೇತಗಳು 3.4 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ ಹಾಗೂ ಕೆಲ ಸಂಶೋಧನೆಗಳು ಇದು ನಾಲ್ಕು ಶತಕೋಟಿ ವರ್ಷಗಳಷ್ಟು ಹಳೆಯದಾಗಿರಬಹುದು ಎಂದೂ ಕೂಡ ಸೂಚಿಸುತ್ತವೆ.

ಇದನ್ನೂ ಓದಿ- Existance Of Theia Inside Earth - ಭೂಮಿಯ ಗರ್ಭದಲ್ಲೊಂದು Alien ಪ್ರಪಂಚ! Giant Impact Hypothesis ರಹಸ್ಯ ಭೇದಿಸಿದ್ರಾ ವಿಜ್ಞಾನಿಗಳು?

ನಿಧಾನಗತಿಯಲ್ಲಿ ವಿಕಾಸಗೊಂಡ ಬ್ಯಾಕ್ಟೀರಿಯಾಗಳು
ಯಾವರೀತಿ ಆರಂಭದಲ್ಲಿ ಕಣ್ಣು ವಿಕಾಸಗೊಳ್ಳುವ ವೇಳೆ ಕೇವಲ ಬೆಳಕನ್ನು ಮಾತ್ರ ಅನುಭವಿಸುತ್ತಿದ್ದವೋ ಅದೇ ರೀತಿ ಆರಂಭಿಕ ಸಮಮಯದಲ್ಲಿ ದ್ಯುತಿ ಸಂಶ್ಲೇಷಣೆ ಅಕ್ಷಮ ಹಾಗೂ ಮಂದಗತಿಯಲ್ಲಿ ಇರುತ್ತಿತ್ತು. ಭೂಮಿಯ ಮೇಲಿನ ಬ್ಯಾಕ್ಟಿರಿಯಾಗಳು ಸೈನೋಬ್ಯಾಕ್ಟೀರಿಯಾಗಳಾಗಿ ವಿಕಾಸಗೊಳ್ಳಲು ಒಂದು ಶತಕೋಟಿ ಕಾಲ ಸಮಯಾವಕಾಶ ತಗುಲಿದೆ. ಆದರೆ, ಈ ಬದಲಾವಣೆಯಾಗಲು ತುಂಬಾ ಕಡಿಮೆ ಸಮಯ ಬೇಕಾಗಿರಬಹುದು ಎಂಬುದು ತಜ್ಞರ ಅಭಿಮತ. ಎಕೆಂದರ ವಾತಾವರಣದಲ್ಲಿ ಆಕ್ಸಿಜನ್ ಉತ್ಪತ್ತಿ ಮಾಡುವ ಅಂಶಗಳಿದ್ದವು. ಫೋಟೋಸಿಂಥೆಸಿಸ್ ಪ್ರೋಟೀನ್ ವಿಕಾಸದ ಕ್ರಮಗಳು ಹಳೆ ಎಂಜೈಮ್ ರೀತಿಯಲ್ಲಿಯೇ ಇವೆ. ಹೀಗಾಗಿ ಈ ಸಂಶೋಧನೆ ಬೇರೆ ಗ್ರಹಗಳ ಮೇಲಿನ ಜೀವನದ ಹುಡುಕಾಟಕ್ಕೆ ಸಹಾಯಕ ಎಂದೇ ಸಾಬೀತಾಗಲಿದೆ.. 

ಇದನ್ನೂ ಓದಿ- NASA, GJ 1132 b: ಎರಡನೇ ಭೂಮಿಯ ಕುರಿತು ಸಿಕ್ಕ ಸಂಕೇತ! ಲಾವಾರಸದಿಂದ ಕೂಡಿದ ಈ Alien ಗ್ರಹ (Alien Planet) ತನ್ನದೇ ವಾಯುಮಂಡಲ ಸೃಷ್ಟಿಸುತ್ತಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News