ಬೆಂಗಳೂರು : Mini Pocket Size Printer at low cost : ಅದು ಆಫೀಸ್ ಪ್ರಾಜೆಕ್ಟ್ ಆಗಿರಲಿ ಅಥವಾ ಮಕ್ಕಳ  ಶಿಕ್ಷಣವೇ ಆಗಿರಲಿ ಈಗ ಮನೆಯಲ್ಲೊಂದು ಪ್ರಿಂಟರ್ ಇರಲೇಬೇಕು. ಇಲ್ಲವಾದರೆ ಪದೇ ಪದೇ ಹತ್ತಿರದ ಫೋಟೋ ಕಾಪಿ ಅಂಗಡಿಗೆ ಅಲೆಯಬೇಕು. ಆದರೆ, ಈ ಪೋರ್ಟಬಲ್ ಪ್ರಿಂಟರ್   ನಿಮ್ಮ ಬಳಿ ಇದ್ದರೆ, ಯಾವುದೇ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಪ್ರಿಂಟ್ ತೆಗೆದುಕೊಳ್ಳಬಹುದು.  ಇದರಿಂದಾಗಿ ಪ್ರಿಂಟ್ ಗಾಗಿ ಹೆಚ್ಚುವರಿ ಹಣ ಖರ್ಚು ಮಾಡಬೇಕಾಗಿಯೂ ಇಲ್ಲ.  ಈ ಪ್ರಿಂಟರ್ ನ ದೊಡ್ಡ ವೈಶಿಷ್ಟ್ಯವೆಂದರೆ ಅದರ ಗಾತ್ರ ತುಂಬಾ ಚಿಕ್ಕದು.  


COMMERCIAL BREAK
SCROLL TO CONTINUE READING

ಮಿನಿ ಪಾಕೆಟ್ ಗಾತ್ರದ ಪ್ರಿಂಟರ್ : 
ಈ ಪಾಕೆಟ್ ಗಾತ್ರದ ಪ್ರಿಂಟರ್‌ನ ಹೆಸರು LayOPO ವೈರ್‌ಲೆಸ್ ಬ್ಲೂಟೂತ್ ಪ್ರಿಂಟರ್. ಗ್ರಾಹಕರು ಇದನ್ನು ಆನ್‌ಲೈನ್ ಶಾಪಿಂಗ್ ಸೈಟ್ Amazon ನಿಂದ ಖರೀದಿಸಬಹುದು. ಈ ಪ್ರಿಂಟರ್ ನ ಗಾತ್ರವೇ  ಗ್ರಾಹಕರನ್ನು ಆಕರ್ಷಿಸಿ ಬಿಡುತ್ತದೆ. ಈ ಪ್ರಿಂಟರ್ ಅನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದಾಗಿದೆ. ನಂತರ ಅಪ್ಲಿಕೇಶನ್  ಇನ್ಸ್ಟಾಲ್ ಮಾಡುವ ಮೂಲಕ ಅದನ್ನು ಬಳಸಬಹುದು. 


ಇದನ್ನೂ ಓದಿ : Swiggy ಯಲ್ಲಿ ನೀವು ಇಲ್ಲಿಯವರೆಗೆ ಎಷ್ಟು ಹಣ ಖರ್ಚು ಮಾಡಿದ್ದೀರಾ? ಈ ರೀತಿ ತಿಳಿಯಿರಿ


ಬೆಲೆ ತುಂಬಾ ಕಡಿಮೆ : 
ಗ್ರಾಹಕರು  ಕೇವಲ 5,899 ರೂಗಳಿಗೆ LayOPO ವೈರ್‌ಲೆಸ್ ಬ್ಲೂಟೂತ್ ಪ್ರಿಂಟರ್ ಅನ್ನು ಅಮೆಜಾನ್‌ನಿಂದ ಖರೀದಿಸಬಹುದು. ಇದರ ನಿಜವಾದ ಬೆಲೆ  7,599 ರೂಪಾಯಿ. ಇದರ ಮೇಲೆ ಗ್ರಾಹಕರಿಗೆ 22 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.  


 ಅದ್ಭುತ ವಿನ್ಯಾಸ  : 
ಈ ಪ್ರಿಂಟರ್‌ನ ವಿನ್ಯಾಸವು ಬಹಳ ಉತ್ತಮವಾಗಿದೆ. ಕೈಯಿಂದ ಬಿದ್ದರೂ ಕೆಲವು ಗೀರುಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಆದ್ದರಿಂದ ಇದನ್ನೂ ಎಲ್ಲಿಗೆ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು.  ನೋಡುವುದಕ್ಕೆ ಮೊಬೈಲ್ ಗಿಂತಲೂ ಚಿಕ್ಕದಾಗಿದ್ದು, ಸುಲಭವಾಗಿ ಜೇಬಿನಲ್ಲಿ ಇಟ್ಟುಕೊಳ್ಳಬಹುದು. 


ಇದನ್ನೂ ಓದಿ : ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಿಂದ ಕಡಿಮೆ ಧ್ವನಿ ಬರುತ್ತಿದೆಯೇ? ಮನೆಯಲ್ಲಿಯೇ ಈ ರೀತಿ ಸರಿಪಡಿಸಿ


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.