ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಿಂದ ಕಡಿಮೆ ಧ್ವನಿ ಬರುತ್ತಿದೆಯೇ? ಮನೆಯಲ್ಲಿಯೇ ಈ ರೀತಿ ಸರಿಪಡಿಸಿ

Smartphone Cleaning Tips: ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಲ್ಲಿ ಧೂಳು ಮತ್ತು ಕೊಳಕು ಸಂಗ್ರಹವಾಗುವುದು ಸಾಮಾನ್ಯ. ಆದರೆ ಅದನ್ನು ಸ್ವಚ್ಛಗೊಳಿಸಲು ತುಂಬಾ ಸುಲಭ. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ನೀವು ಮನೆಯಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಪೀಕರ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಹೇಗೆ ಎಂದು ತಿಳಿಯಿರಿ.

Written by - Yashaswini V | Last Updated : Sep 2, 2022, 08:46 AM IST
  • ಸ್ಮಾರ್ಟ್‌ಫೋನ್‌ಗಳನ್ನು ಥಿನ್ನರ್ ನಿಂದಲೂ ಸ್ವಚ್ಛಗೊಳಿಸಬಹುದು.
  • ಸ್ಮಾರ್ಟ್‌ಫೋನ್‌ನ ಸ್ಪೀಕರ್ ಅನ್ನು ಹತ್ತಿಯಿಂದ ಸ್ವಚ್ಛಗೊಳಿಸುವುದು ಉತ್ತಮ ಮಾರ್ಗವಾಗಿದೆ.
  • ಕೊಳೆಯನ್ನು ಸ್ವಚ್ಛಗೊಳಿಸಲು ಹತ್ತಿಯನ್ನು ಬಳಸಲಾಗುತ್ತದೆ.
ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಿಂದ ಕಡಿಮೆ ಧ್ವನಿ ಬರುತ್ತಿದೆಯೇ? ಮನೆಯಲ್ಲಿಯೇ ಈ ರೀತಿ ಸರಿಪಡಿಸಿ  title=
Smartphone speaker cleaning tips

ಸ್ಮಾರ್ಟ್‌ಫೋನ್‌ ಕ್ಲೀನಿಂಗ್ ಟಿಪ್ಸ್: ಪ್ರಸ್ತುತ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದೆ ಜೀವನ. ಆದರೆ, ಸದಾ ಬಳಸುವಾಗ ಸ್ಮಾರ್ಟ್‌ಫೋನ್‌ನ ಕೆಲವು ಭಾಗಗಳು ಕೊಳಕಾಗುತ್ತವೆ. ಅವುಗಳಲ್ಲಿ ಸಾಮಾನ್ಯವಾದದ್ದು ಸ್ಮಾರ್ಟ್‌ಫೋನ್‌ನ ಸ್ಪೀಕರ್. ಹೊರಗಡೆ ಇರುವುದರಿಂದ ಸ್ಪೀಕರ್ ನಲ್ಲಿ ಧೂಳು ಮತ್ತು ಕೊಳಕು ಸಂಗ್ರಹವಾಗುತ್ತದೆ. ಇದರಿಂದ ಸರಿಯಾಗಿ ಕೇಳಿಸುವುದಿಲ್ಲ. ಆದರೆ, ಇದನ್ನು ಸರಿಪಡಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಪೀಕರ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಕೇವಲ ಟೂತ್ ಬ್ರಷ್‌ ಇದ್ದರೆ ಅಷ್ಟೇ ಸಾಕು. 

ಕೇವಲ ಟೂತ್ ಬ್ರಷ್‌ನಿಂದ ಸ್ಪೀಕರ್‌ಗಳನ್ನು ಮನೆಯಲ್ಲಿ ಸ್ವಚ್ಛಗೊಳಿಸುವುದು ಹೇಗೆ? ಇದರಿಂದ  ಸ್ಪೀಕರ್‌ಗಳನ್ನು ಮೊದಲಿನಂತೆ ಸರಿಪಡಿಸಬಹುದಾ ಎಂದು ನೀವು ಯೋಚಿಸುತ್ತಿದ್ದರೆ, ಖಂಡಿತ ಸರಿಪಡಿಸಬಹುದು. 

ಇದನ್ನೂ ಓದಿ- ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಬಿಡುಗಡೆ-ಬೆಲೆ, ವೈಶಿಷ್ಟ್ಯ ತಿಳಿಯಿರಿ

ಸ್ಮಾರ್ಟ್‌ಫೋನ್‌ ಸ್ಪೀಕರ್‌ಗಳನ್ನು ಥಿನ್ನರ್ ನಿಂದಲೂ ಸ್ವಚ್ಛಗೊಳಿಸಬಹುದು:
ಸ್ಮಾರ್ಟ್‌ಫೋನ್‌ಗಳನ್ನು ಥಿನ್ನರ್ ನಿಂದಲೂ  ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಸ್ವಲ್ಪ ಬ್ರಷ್ ಅನ್ನು ಸಹ ಬಳಸಬೇಕಾಗುತ್ತದೆ. ಆದರೆ ನೀವು ತುಂಬಾ ವೇಗವಾಗಿ ಬಳಸಿದರೆ, ಸ್ಪೀಕರ್ ಹಾನಿಗೊಳಗಾಗಬಹುದು. ಸ್ಪೀಕರ್‌ಗಳು ನೀರಿನಿಂದ ಹಾನಿಗೊಳಗಾಗುತ್ತವೆ, ಆದ್ದರಿಂದ ನೀವು ಅದನ್ನು ಸ್ವಚ್ಛಗೊಳಿಸಲು ಥಿನ್ನರ್ ಬಳಸಬೇಕಾಗುತ್ತದೆ. ಆದರೆ, ನೆನಪಿಡಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನೀವು ಥಿನ್ನರ್  ಅನ್ನು ಅತಿಯಾಗಿ ಬಳಸುವುದರಿಂದ ಮದರ್‌ಬೋರ್ಡ್‌ಗೆ ಹಾನಿಯಾಗಬಹುದು. ಹಾಗಾಗಿ, ಸ್ವಲ್ಪವೇ ಸ್ವಲ್ಪ ಥಿನ್ನರ್ ಬಳಸಿ ಸ್ಮಾರ್ಟ್‌ಫೋನ್‌ ಸ್ವಚ್ಚಗೊಳಿಸಿ.

ಇಯರ್‌ಬಡ್‌ಗಳು ಸಹ ಒಂದು ಆಯ್ಕೆಯಾಗಿದೆ:
ಇಯರ್‌ಬಡ್‌ಗಳನ್ನು ಕಿವಿ ಕ್ಲೀನಿಂಗ್‌ಗಾಗಿ ಬಳಸಲಾಗುತ್ತದೆ. ಆದರೂ, ಇದರೊಂದಿಗೆ ಸ್ಪೀಕರ್‌ಗಳನ್ನು ಸಹ ಸುಲಭವಾಗಿ ಸ್ವಚ್ಛಗೊಳಿಸಲಾಗುತ್ತದೆ. ಇದರ ವಿಶೇಷತೆ ಎಂದರೆ ಸ್ಪೀಕರ್ ಅನ್ನು ತುಂಬಾ ನೀಟ್ ಆಗಿ ಕ್ಲೀನ್ ಮಾಡುತ್ತದೆ.  ಆದರೆ ಹೆಚ್ಚು ಒತ್ತಡದಿಂದ ಸ್ವಚ್ಛಗೊಳಿಸುವುದರಿಂದ ಸ್ಪೀಕರ್ ಹಾಳಾಗಬಹುದು. 

ಇದನ್ನೂ ಓದಿ- ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ ಚಂದಾದಾರಿಕೆಗಳನ್ನು ಫ್ರೀ ಆಗಿ ಪಡೆಯಲು ಉತ್ತಮ ಅವಕಾಶ

ಹತ್ತಿಯಿಂದ ಕೂಡ ಸ್ವಚ್ಛಗೊಳಿಸಬಹುದು:
ಸ್ಮಾರ್ಟ್‌ಫೋನ್‌ನ ಸ್ಪೀಕರ್ ಅನ್ನು ಹತ್ತಿಯಿಂದ ಸ್ವಚ್ಛಗೊಳಿಸುವುದು ಉತ್ತಮ ಮಾರ್ಗವಾಗಿದೆ. ಕೊಳೆಯನ್ನು ಸ್ವಚ್ಛಗೊಳಿಸಲು ಹತ್ತಿಯನ್ನು ಬಳಸಲಾಗುತ್ತದೆ. ಸ್ಪೀಕರ್ ಒಳಗೆ ತಲುಪಬಹುದಾದ ಯಾವುದಾದರೂ ಹತ್ತಿಯನ್ನು ಇರಿಸಿ. ನೀವು ಹತ್ತಿಯಲ್ಲಿ ಸ್ವಲ್ಪ ಥಿನ್ನರ್ ಅನ್ವಯಿಸಬಹುದು. ಇದರಿಂದ ಸ್ಪೀಕರ್ ಸಂಪೂರ್ಣ ಸ್ವಚ್ಛವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News