Jobs and Free Education : ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಅನೇಕ ಭಾರತೀಯ ಕುಟುಂಬಗಳಿವೆ. ಉದ್ಯೋಗ ಮತ್ತು ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ. ಇಂದಿನ ದಿನಗಳಲ್ಲಿ, ಏನೇ ಸಾಧನೆ ಮಾಡಬೇಕಾದರೂ ಶಿಕ್ಷಣ ಅತ್ಯಂತ ಮುಖ್ಯವಾಗಿದೆ. ಶಿಕ್ಷಣ ಪಡೆದ ನಂತರ  ವ್ಯಕ್ತಿಯು ಉದ್ಯೋಗ ಹುಡುಕುತ್ತಾನೆ. ಆ ಉದ್ಯೋಗದಿಂದ ಮನೆಯನ್ನು ನಡೆಸಬೇಕಾಗುತ್ತದೆ. ಆದರೆ, ಉದ್ಯೋಗದ ಕೊರತೆಯಿಂದ  ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಇಂದು ನಾವು ಸರ್ಕಾರಿ ವೆಬ್‌ಸೈಟ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವೆಬ್ ಸೈಟ್ ನಲ್ಲಿ ಉಚಿತ ಶಿಕ್ಷಣದಿಂದ ಹಿಡಿದು  ಉದ್ಯೋಗದವರೆಗೆ ಎಲ್ಲಾ ಅಧಿಕೃತ ಮಾಹಿತಿ ಇರಲಿದೆ. 


COMMERCIAL BREAK
SCROLL TO CONTINUE READING

ಈ ವೆಬ್‌ಸೈಟ್ ಏನು ? :
ನಾವಿಂದು ಮಾತನಾಡುತ್ತಿರುವ ವೆಬ್‌ಸೈಟ್‌ನ ಹೆಸರು MyScheme.gov.in.ಇದೊಂದು ಸರ್ಕಾರಿ ವೆಬ್ ಸೈಟ್ ಆಗಿದೆ. ಈ ವೆಬ್‌ಸೈಟ್‌ ನಲ್ಲಿ ಎಲ್ಲಾ ರೀತಿಯ ಸ್ಕೀಮ್‌ಗಳ ಬಗ್ಗೆ ಮಾಹಿತಿ ಸಿಗುತ್ತದೆ. ಈ ವೆಬ್‌ಸೈಟ್‌ನಲ್ಲಿ, ಕೃಷಿ-ಗ್ರಾಮೀಣ ಮತ್ತು ಪರಿಸರ, ಬ್ಯಾಂಕಿಂಗ್ ಹಣಕಾಸು ಸೇವೆಗಳು ಮತ್ತು ವಿಮಾ ವ್ಯವಹಾರ ಮತ್ತು ಉದ್ಯಮಶೀಲತೆ, ಶಿಕ್ಷಣ ಮತ್ತು ಕಲಿಕೆ, ಆರೋಗ್ಯ ಮತ್ತು ಸ್ವಾಸ್ಥ್ಯ, ಕೌಶಲ್ಯ ಮತ್ತು ಉದ್ಯೋಗ ಸೇರಿದಂತೆ ವಸತಿ ಮತ್ತು ಆಶ್ರಯದಂತಹ 14 ಸೇವೆಗಳ ಬಗ್ಗೆ ಮಾಹಿತಿ ಇರಲಿದೆ. 


ಇದನ್ನೂ ಓದಿ : ಇಂದಿನಿಂದ ಇಷ್ಟು ದಿನಗಳ ಬಳಿಕ ಕ್ಷಣಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗಲಿದೆಯಂತೆ ಭೂಮಿ... ಏನಿದರ ಸಂಕೇತ?


ವೆಬ್‌ಸೈಟ್‌ ಸೇವೆಯನ್ನು ಪಡೆಯಲು 
- ಮೊದಲು ಫೈಂಡ್ ಸ್ಕೀಮ್ ಫಾರ್ ಯೂ ಆಯ್ಕೆಗೆ ಹೋಗಬೇಕು.
- ಅದರ ನಂತರ ನೀವು ನಿಮ್ಮ ಲಿಂಗವನ್ನು ಆರಿಸಬೇಕಾಗುತ್ತದೆ. 
-ಇದರ ನಂತರ ನೀವು ನಿಮ್ಮ ವಯಸ್ಸನ್ನು ನಮೂದಿಸಬೇಕು. 
-ನೀವು ನಿಮ್ಮ ವಯಸ್ಸನ್ನು ನಮೂದಿಸುತ್ತಿದ್ದಂತೆಯೇ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ. 
-ನೀವು ಹಳ್ಳಿಯಲ್ಲಿ ಅಥವಾ ನಗರದಲ್ಲಿ ವಾಸಿಸುತ್ತಿದ್ದೀರಾ ಎನ್ನುವುದನ್ನು ಕೂಡಾ ಇಲ್ಲಿ ಹೇಳಬೇಕು. 
- ನಂತರ ನೀವು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರೇ?  ವಿದ್ಯಾರ್ಥಿಯಾಗಿದ್ದೀರಾ ಎಂಬುದನ್ನು ಹೇಳಬೇಕು. 
-ನಂತರ  ನಿಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. 
- ಈ ಮಾಹಿತಿಯನ್ನು ನಮೂದಿಸಿದ ತಕ್ಷಣ, ಎಲ್ಲ ಸ್ಕೀಮ್ ಗಳು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. 
- ಇವುಗಳಲ್ಲಿ ನಿಮಗೆ ಸರಿ ಹೊಂದುವ ಸ್ಕೀಮ್ ಆಯ್ಕೆ ಮಾಡುವ ಮೂಲಕ ಆ ಯೋಜನೆಯ ಲಾಭ ಪಡೆದುಕೊಳ್ಳಬಹುದು. 


ಇದನ್ನೂ ಓದಿ : BharOS: ಅಂಡ್ರಾಯಿಡ್ ಗೆ ಸೆಡ್ಡು ಹೊಡೆಯಲು ಬಂತು ಮೇಡ್ ಇನ್ ಇಂಡಿಯಾ BharOS, ಕೇಂದ್ರ ಸರ್ಕಾರದಿಂದಲೂ ಸಿಕ್ತು ಗ್ರೀನ್ ಸಿಗ್ನಲ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.