Scientists Big Disclosure: ಭೂಮಿಯ ಕುರಿತಾದ ಹಲವು ರಹಸ್ಯಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಭೂಮಿಗಾಗಿ ನಡೆಯುತ್ತಿರುವ ಒಂದು ಸಂಶೋಧನೆಯಲ್ಲಿ, ಭೂಮಿಯ ಮಧ್ಯಭಾಗವು ಒಂದು ದಿನ ತಿರುಗುವುದನ್ನು ನಿಲ್ಲಿಸಲಿದೆ ಮತ್ತು ಸ್ವಲ್ಪ ಸಮಯದ ನಂತರ ಭೂಮಿಯು ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸುತ್ತದೆ ಎಂದು ಬಹಳ ಹಿಂದೆಯೇ ಕಂಡು ಹಿಡಿಯಲಾಗಿದೆ. ಭೂಮಿಯ ಮಧ್ಯಭಾಗವು ನಿಂತಾಗ ಏನಾಗುತ್ತದೆ? ಇದು ಪ್ರಳಯವನ್ನು ಉಂಟುಮಾಡುತ್ತದೆಯೇ? ಭೂಮಿಯ ಕೇಂದ್ರವು ನಿಂತ ತಕ್ಷಣ ವಿನಾಶಕಾರಿ ಭೂಕಂಪ ಸಂಭವಿಸುತ್ತದೆಯೇ? ಭೂಮಿಗೆ ಸಂಬಂಧಿಸಿದ ಈ ಘಟನೆ ಮತ್ತು ಅದರ ಪರಿಣಾಮ ಏನಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಭೂಮಿಯ ಒಳಭಾಗವು ತಿರುಗುತ್ತಲೇ ಇರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ವಿಷಯ. ಬಿಸಿ ಮತ್ತು ಘನ ಕಬ್ಬಿಣದ ಆಂತರಿಕ ಗೋಳದ ತಿರುಗುವಿಕೆಯಿಂದಾಗಿ, ಭೂಮಿಯ ಮೇಲೆ ಕಾಂತೀಯ ಕ್ಷೇತ್ರ ಮತ್ತು ಗುರುತ್ವಾಕರ್ಷಣೆ ಇದೆ. ಈ ಕೇಂದ್ರವು ಒಂದೇ ದಿಕ್ಕಿನಲ್ಲಿ ತಿರುಗುವುದರಿಂದ ಭೂಮಿಯ ಮೇಲೆ ಗುರುತ್ವಾಕರ್ಷಣೆ ಇರುತ್ತದೆ. ಇದೀಗ ಭೂಮಿಯ ಕೇಂದ್ರವು ತಿರುಗುವುದನ್ನು ನಿಲ್ಲಿಸುವ ಘಟನೆಯ ಕುರಿತು ತಿಳಿದುಕೊಳ್ಳೋಣ.
ವಿಜ್ಞಾನಿಗಳು ಮತ್ತು ಭೂಕಂಪ ಶಾಸ್ತ್ರಜ್ಞರು ತಮ್ಮ ಸಂಶೋಧನೆಯಲ್ಲಿ ಭೂಮಿಯ ಮಧ್ಯಭಾಗದ ತಿರುಗುವಿಕೆಯ ದಿಕ್ಕಿನಲ್ಲಿ ಬದಲಾವಣೆಯಾಗಲಿದೆ ಎಂಬುದನ್ನು ಇದೀಗ ಪತ್ತೆಹಚ್ಚಿದ್ದಾರೆ. ಇದು ಸಂಭವಿಸುವ ಮೊದಲು, ಭೂಮಿಯ ಕೇಂದ್ರವು ಸ್ವಲ್ಪ ಸಮಯದವರೆಗೆ ತಿರುಗುವುದನ್ನು ನಿಲ್ಲಿಸಲಿದೆ. ನೇಚರ್ ಜಿಯೋಸೈನ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭೂಮಿಯ ಕೇಂದ್ರದ ತಿರುಗುವಿಕೆಯಿಂದಾಗಿ, ಮೇಲಿನ ಮೇಲ್ಮೈ ಸ್ಥಿರತೆಯನ್ನು ಪಡೆಯುತ್ತದೆ. ಪ್ರತಿ 70 ವರ್ಷಗಳ ನಂತರ ಕೇಂದ್ರದ ತಿರುಗುವಿಕೆಯ ದಿಕ್ಕು ಬದಲಾಗುತ್ತದೆ. ಈ ಬದಲಾವಣೆಯು ಸುಮಾರು 17 ವರ್ಷಗಳಲ್ಲಿ ಸಂಭವಿಸುತ್ತದೆ ಮತ್ತು ಭೂಮಿಯ ಮಧ್ಯಭಾಗವು ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ-ಇನ್ಮುಂದೆ ನೆಲದೊಳಗಲ್ಲ ಗಾಳಿಯಲ್ಲೂ ಆಲೂಗಡ್ಡೆ ಬೆಳೆಸಬಹುದು, ಇಲ್ಲಿದೆ ವಿಧಾನ
ಈಗ ಇದರ ಪರಿಣಾಮದ ಬಗ್ಗೆ ಹೇಳುವುದಾದರೆ. ಭೂಮಿಯ ಮಧ್ಯಭಾಗದ ತಿರುಗುವಿಕೆಯ ದಿಕ್ಕಿನ ಬದಲಾವಣೆಯಿಂದಾಗಿ, ಭೂಮಿಯು ಸ್ಫೋಟಗೊಳ್ಳುವುದಿಲ್ಲ ಅಥವಾ ಯಾವುದೇ ಪ್ರಳಯ ಬರುವುದಿಲ್ಲ. ಈ ಘಟನೆಯಿಂದ ಭೂಮಿಗಾಗಲಿ ಅಥವಾ ಈ ಭೂಮಂಡಲದಲ್ಲಿ ವಾಸಿಸುವ ಜೀವಿಗಳಿಗಾಗಲಿ ಯಾವುದೇ ತೊಂದರೆಯಾಗುವುದಿಲ್ಲ. ಇದನ್ನು 1936 ರಲ್ಲಿ ಕಂಡುಹಿಡಿಯಲಾಗಿದೆ. ಇದನ್ನು ಡಚ್ ಭೂಕಂಪಶಾಸ್ತ್ರಜ್ಞ ಇಂಗೆ ಲೆಹ್ಮನ್ ಪತ್ತೆಹಚ್ಚಿದ್ದಾರೆ.
Seismologists report that after brief but peculiar pauses, the inner core changes how it spins — relative to the motion of Earth’s surface — perhaps once every few decades. And, right now, one such reversal may be underway. https://t.co/Z0xp6xqjDJ
— NYT Science (@NYTScience) January 24, 2023
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.