ಇದೇ ಗೀಸರ್ ಮನೆಗೆ ಬೆಸ್ಟ್ ಆಯ್ಕೆ ! ಸ್ಪೋಟವಾಗುವ ಭಯ ಇರುವುದೇ ಇಲ್ಲ
ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ.
ಬೆಂಗಳೂರು : ಇದೀಗ ಬಚ್ಚಲು ಮೆಗಳಲ್ಲಿ ಒಲೆಯ ಬಳಕೆ ತೀರಾ ಕಡಿಮೆ . ಎಲ್ಲಾ ಬಾತ್ ರೂಂ ಗಳನ್ನು ಗೀಸರ್ ಆವರಿಸಿ ಬಿಟ್ಟಿದೆ. ಇನ್ನು ಮಳೆ ಮತ್ತು ಚಳಿಗಾಲದಲ್ಲಿ ಗೀಸರ್ ಬಳಕೆ ಹೆಚ್ಚೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಯಾವ ರೀತಿಯ ವಾಟರ್ ಹೀಟರ್ ಖರೀದಿಸುವಾಗ ಗೀಸರ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿರುವುದು ಕೂಡಾ ಬಹಳ ಮುಖ್ಯ.
ವಾಟರ್ ಹೀಟರ್ ಬಳಸುವಾಗ ನಾವು ಜಾಗರೂಕರಾಗಿರುತ್ತೇವೆ ನಿಜ. ಆದರೆ ಖರೀದಿಸುವಾಗ ಅನೇಕ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಗೀಸರ್ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಹ ಮುಖ್ಯ. ಗೀಸರ್ ಖರೀದಿಸುವ ವೇಳೆ ಗಮನಿಸಬೇಕಾದ ಮುಖ್ಯವಾದ ಸುರಕ್ಷತಾ ವೈಶಿಷ್ಟ್ಯ ವೆಂದರೆ ಲೀಕೆಜ್ ಆಗುತ್ತಿದ್ದರೆ, ವಿದ್ಯುತ್ ಸರಬರಾಜು ಸಂಪೂರ್ಣವಾಗಿ ನಿಲ್ಲಬೇಕು. ಪ್ಲಗ್ ಗೆ ನೀರು ಪ್ರವೇಶಿಸಿದ ನಂತರವೂ ಯಾವುದೇ ಆಘಾತವಾಗಬಾರದು.ವಾಟರ್ ಹೀಟರ್ ಉತ್ತಮ ವಸ್ತುಗಳಿಂದ ಮಾಡಲ್ಪಟ್ಟಿರಬೇಕು. ಅಲ್ಲದೆ, ಬಹು ಮುಖ್ಯವಾಗಿ ವಾಟರ್ ಹೀಟರ್ ಶಾಕ್ ಪ್ರೂಫ್ ಆಗಿರಬೇಕು. ಈ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳಿದ್ದರೆ ಸ್ಪೋಟದಂಥಹ ಸಮಸ್ಯೆಯನ್ನು ತಡೆಯಬಹುದು.
ಇದನ್ನೂ ಓದಿ : Reliance Jio ಬಳಕೆದಾರರಿಗೆ ಬಂಪರ್ !ಪ್ರಿಪೈಡ್ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿರಲಿದೆ ಕರೆ, ಎಸ್ಎಂಎಸ್, ಡೇಟಾ
ಯಾವ ಗೀಸರ್ ಬೆಸ್ಟ್ :
ಸಾಮಾನ್ಯವಾಗಿ ಜನರು ಅಗ್ಗದ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಸಣ್ಣ ಗಾತ್ರದ ಹೀಟರ್ ಗಳನ್ನು ಖರೀದಿಸುತ್ತಾರೆ.ಆದರೆ ಈ ಗೀಸರ್ ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ನೀರು ಸಿಗುವುದಿಲ್ಲ.ಅಡುಗೆಮನೆಗೆ ಗೀಸರ್ ಹಾಕುವುದಾದರೆ 1 ಲೀಟರ್, 3 ಲೀಟರ್ ಮತ್ತು 6 ಲೀಟರ್ ಗೀಸರ್ ಉತ್ತಮ ಆಯ್ಕೆ. ಬಚ್ಚಲು ಮನೆಗಾಗಿ ಹೀಟರ್ ಖರೀದಿಸುವುದಾದರೆ 10 ಲೀಟರ್, 35 ಲೀಟರ್ ಗೀಸರ್‌ಗಳೇ ಉತ್ತಮ ಆಯ್ಕೆ.
ಪ್ರಾಡಕ್ಟ್ ರೇಟಿಂಗ್ :
ಹೊಸ ತಂತ್ರಜ್ಞಾನದ ವಾಟರ್ ಹೀಟರ್ ಹೆಚ್ಚು ವಿದ್ಯುತ್ ಬಳಸುತ್ತದೆ.ಹೊಸ ವಾಟರ್ ಹೀಟರ್ ಖರೀದಿಸುವುದಾದರೆ ಸ್ಟಾರ್ ರೇಟಿಂಗ್ ಬಗ್ಗೆ ಗಮನ ಹರಿಸಿ.ಇದರಿಂದ ವಿದ್ಯುತ್ ಉಳಿಸಲು ಸಹಾಯವಾಗುತ್ತದೆ. 5 ಸ್ಟಾರ್ ರೇಟೆಡ್ ಗೀಸರ್‌ಗಳು 25 ಪ್ರತಿಶತದಷ್ಟು ವಿದ್ಯುತ್ ಅನ್ನು ಉಳಿಸುತ್ತವೆ.
ಇದನ್ನೂ ಓದಿ : ಕೇವಲ 38 ಸಾವಿರ ರೂಪಾಯಿಗೆ ಖರೀದಿಸಿ iPhone!ದುಬಾರಿ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಲು ಇದುವೇ ಬೆಸ್ಟ್ ಟೈಮ್ !
ಖರೀದಿ ನಂತರದ ಸರ್ವಿಸ್ :
ಗೀಸರ್ ಖರೀಸುವಾಗ ಕಂಪನಿ ಎಷ್ಟು ವರ್ಷಗಳ ವಾರಂಟಿಯನ್ನು ನೀಡುತ್ತದೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳಲೇ ಬೇಕು. ಗೀಸರ್ ಖರೀದಿಸುವಾಗ ವಾಟರ್ ಹೀಟರ್‌ಗಳ ಮೇಲೆ ದೀರ್ಘಾವಧಿಯ ವಾರಂಟಿ ನೀಡುವ ಹೆಸರಾಂತ ಬ್ರ್ಯಾಂಡ್‌ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ .
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.