ಈ ವಸ್ತುವನ್ನು ಒಮ್ಮೆ ಬಳಸಿದರೆ ಸಾಕು ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಕಲೆ ಥಟ್ ಅಂತ ಮಾಯವಾಗುವುದು !
ಇಡೀ ಶರ್ಟ್ ಉತ್ತಮ ಸ್ಥಿತಿಯಲ್ಲಿ ಇದ್ದರೂ ಕಾಲರ್ ಸವೆದು ಹೋಗಿರುವ ಕಾರಣದಿಂದ ಶರ್ಟ್ ನಿಷ್ಪ್ರಯೋಜಕವಾಗುತ್ತದೆ.
ಬೆಂಗಳೂರು : ಶರ್ಟ್ ಒಗೆಯುವುದು ಸುಲಭ. ಆದರೆ ಶರ್ಟ್ ಕಾಲರ್ ನಲ್ಲಿ ಅಂಟಿ ಕುಳಿತಿರುವ ಹಠಮಾರಿ ಕಲೆ ತೆಗೆಯುವುದು ಅಷ್ಟು ಸುಲಭವಲ್ಲ. ಈ ಕಲೆಯನ್ನು ತೆಗೆಯಲು ಅತಿಯಾಗಿ ಉಜ್ಜಬೇಕಾಗುತ್ತದೆ. ಹೀಗೆ ಉಜ್ಜುವಾಗ ತಿಕ್ಕುವಾಗ ಕಾಲರ್ ಹಾಳಾಗುತ್ತದೆ. ಇಡೀ ಶರ್ಟ್ ಉತ್ತಮ ಸ್ಥಿತಿಯಲ್ಲಿ ಇದ್ದರೂ ಕಾಲರ್ ಸವೆದು ಹೋಗಿರುವ ಕಾರಣದಿಂದ ಶರ್ಟ್ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಕಾಲರ್ ಕೊಳೆಯನ್ನು ಕೂಡಾ ಸುಲಭವಾಗಿ ತೆಗೆದು ಹಾಕಬಹುದು.
ಬೇಕಿಂಗ್ ಸೋಡಾ ಮತ್ತು ವಾಟರ್ ಪೇಸ್ಟ್ :
ಅಡಿಗೆ ಸೋಡಾ ನೈಸರ್ಗಿಕ ಕ್ಲೀನರ್ ಆಗಿದೆ. ಇದು ಕಲೆಗಳನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಇದಕ್ಕಾಗಿ 2-3 ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಬೇಕು.ಶರ್ಟ್‌ನ ಕಾಲರ್‌ನಲ್ಲಿರುವ ಬೆವರು ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿ 30 ನಿಮಿಷಗಳ ಹಾಗೆಯೇ ಬಿಡಬೇಕು.ನಂತರ, ಸಾಮಾನ್ಯ ನೀರಿನಿಂದ ಶರ್ಟ್ ಅನ್ನು ನಿಧಾನವಾಗಿ ಉಜ್ಜಿ ತೊಳೆಯಬೇಕು. ಹೀಗೆ ಮಾಡಿದರೆ ಕಲೆ ಮಾಯವಾಗುತ್ತದೆ.
ಇದನ್ನೂ ಓದಿ : ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸಮಸ್ಯೆಗಳನ್ನು ಎದುರಿಸೋದು ಗ್ಯಾರಂಟಿ
ಬಿಳಿ ವಿನೆಗರ್ ಮತ್ತು ನೀರು :
ಬೆವರಿನ ಕಲೆಗಳನ್ನು ಹೋಗಲಾಡಿಸಲು ವಿನೆಗರ್ ಕೂಡಾ ಉತ್ತಮ ಪರಿಹಾರ. ಒಂದು ಚಮಚ ಬಿಳಿ ವಿನೆಗರ್ ಅನ್ನು ಎರಡು ಚಮಚ ನೀರಿನಲ್ಲಿ ಮಿಶ್ರಣ ಮಾಡಿ ಕಲೆ ಇರುವ ಜಾಗಕ್ಕೆ ಹಚ್ಚಿ, 20-30 ನಿಮಿಷಗಳ ಕಾಲ ಬಿಡಿ.ಇದರ ನಂತರ ಸಾಮಾನ್ಯ ಸೋಪ್ ಅಥವಾ ಡಿಟರ್ಜೆಂಟ್ ನಿಂದ ಶರ್ಟ್ ಅನ್ನು ತೊಳೆಯಿರಿ.ವಿನೆಗರ್‌ನಲ್ಲಿರುವ ಆಸಿಡ್ ಕಲೆಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಅಲ್ಲದೆ,ಬಟ್ಟೆಯ ಹೊಳಪನ್ನು ಕಾಪಾಡುತ್ತದೆ.
ನಿಂಬೆ ರಸ ಮತ್ತು ಉಪ್ಪು :
ನಿಂಬೆ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿದ್ದು, ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಶರ್ಟ್‌ನ ಕಾಲರ್‌ಗೆ ನಿಂಬೆ ರಸವನ್ನು ಹಚ್ಚಿ ಅದರ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ.ಸ್ವಲ್ಪ ಸಮಯ ಬಿಟ್ಟು ನಂತರ ಲಘು ಕೈಗಳಿಂದ ಉಜ್ಜಿ. ನಂತರ ಶರ್ಟ್ ಅನ್ನು ತೊಳೆಯಿರಿ.ಈ ಪ್ರಕ್ರಿಯೆಯು ಮೊಂಡುತನದ ಬೆವರಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಹೆಚ್ಚು ಬಾಳಿಕೆ ಬರಬೇಕಾದರೆ ಚಳಿಗಾಲದಲ್ಲಿ ಇಷ್ಟೇ ಇರಲಿ ಫ್ರಿಜ್ ಟೆಂಪರೇಚರ್ !
ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಡಿಟರ್ಜೆಂಟ್
ಕಲೆಗಳು ತುಂಬಾ ಹಳೆಯದಾಗಿದ್ದರೆ, ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸುವುದು ಪರಿಣಾಮಕಾರಿಯಾಗಿರುತ್ತದೆ.ಒಂದು ಭಾಗ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಒಂದು ಭಾಗ ಡಿಟರ್ಜೆಂಟ್ ಮಿಶ್ರಣ ಮಾಡಿ ಮತ್ತು ಅದನ್ನು ಕಲೆಯಿರುವ ಜಾಗಕ್ಕೆ ಹಚ್ಚಿ, 15-20 ನಿಮಿಷಗಳ ಕಾಲ ಬಿಡಬೇಕು. ನಂತರ ಶರ್ಟ್ ಅನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಎಂಥ ಕಠಿಣ ಕಲೆಯಾಗಿದ್ದರೂ ಸುಲಭವಾಗಿ ಮಾಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ