ಸಿಮ್ ಕಾರ್ಡ್ ನಲ್ಲಿ ಸಣ್ಣದೊಂದು ಸೆಟ್ಟಿಂಗ್ ಮಾಡಿದರೆ ಸೂಪರ್ ಸ್ಪೀಡ್ ನಲ್ಲಿರುತ್ತದೆ ಇಂಟರ್ನೆಟ್
How To Boost Internet Speed:ನೆಟ್‌ವರ್ಕ್ ವೀಕ್ ಇದ್ದಾಗ ಇಂಟರ್ನೆಟ್ ಸ್ಪೀಡ್ ಕೂಡಾ ಕಡಿಮೆಯಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಈ ಸಮಸ್ಯೆ ಇದ್ದರೆ, ಅದಕ್ಕೆ ಸುಲಭ ಪರಿಹಾರವನ್ನು ನಾವು ಹೇಳಲಿದ್ದೇವೆ.
How To Boost Internet Speed: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಚಲಾಯಿಸಲು ಕೆಲವೊಮ್ಮೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನೆಟ್‌ವರ್ಕ್. ಕೆಲವೊಮ್ಮೆ ಇಂಟರ್ ನೆಟ್ ಬಳಸಿ ಕೆಲಸ ಮಾಡಲು ಸಾಧ್ಯವಿಲ್ಲದಷ್ಟು ನೆಟ್‌ವರ್ಕ್ ವೀಕ್ ಆಗಿರುತ್ತದೆ. ನೆಟ್‌ವರ್ಕ್ ವೀಕ್ ಇದ್ದಾಗ ಇಂಟರ್ನೆಟ್ ಸ್ಪೀಡ್ ಕೂಡಾ ಕಡಿಮೆಯಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಈ ಸಮಸ್ಯೆ ಇದ್ದರೆ, ಅದಕ್ಕೆ ಸುಲಭ ಪರಿಹಾರವನ್ನು ನಾವು ಹೇಳಲಿದ್ದೇವೆ. ಈ ಉಪಾಯವನ್ನು ಅನುಸರಿಸುವ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.
ಪೋಜೀಶನ್ ಚೆಕ್ ಮಾಡಿಕೊಳ್ಳಿ :
ಸಿಮ್ ಕಾರ್ಡ್ ಅನ್ನು ಸರಿಯಾದ ಸ್ಲಾಟ್‌ನಲ್ಲಿ ಹಾಕದಿದ್ದರೆ, ಅದರ ಪೋಜಿಶನ್ ನಲ್ಲಿ ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಹೀಗಾದಾಗ ಸಿಮ್ ಕಾರ್ಡ್ ಅನ್ನು ಸರಿಯಾಗಿ ರೀಡ್ ಮಾಡುವುದು ಸಾಧ್ಯವಾಗುವುದಿಲ್ಲ. ಇಂಟರ್ನೆಟ್ ಸ್ಪೀಡ್ ಬೇಕಾಗಿದ್ದರೆ, ಸಿಮ್ ಕಾರ್ಡ್ ಪೋಜೀಶನ್ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ : Smartphone Blast: ಸ್ಮಾರ್ಟ್‌ಫೋನ್ ಅನ್ನು ಮಿಸ್ ಆಗಿ ಈ ರೀತಿ ಬಳಸಿದರೂ ಬಾಂಬ್‌ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್!
ಸಿಮ್ ಸ್ಲಾಟ್ ಅನ್ನು ನೋಡಿಕೊಳ್ಳಿ :
ಯಾವ ಸಿಮ್ ಸ್ಲಾಟ್‌ನಲ್ಲಿ ಸಿಮ್ ಕಾರ್ಡ್ ಹಾಕಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ ಎನ್ನುವ ಭಾವನೆ ಅನೇಕರಲ್ಲಿ ಇರುತ್ತದೆ. ಆದರೆ ಅದು ತಪ್ಪು. ಇಂಟರ್ನೆಟ್ ಸ್ಪೀಡ್ ಸರಿಯಾಗಿರಬೇಕಾದರೆ, ಸಿಮ್ ಕಾರ್ಡ್ ಅನ್ನು ಸರಿಯಾದ ಸಿಮ್ ಸ್ಲಾಟ್‌ನಲ್ಲಿ ಹಾಕಬೇಕು. ಹೀಗಾದಾಗ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ತುಂಬಾ ಸ್ಪೀಡ್ ಆಗಿರುತ್ತದೆ.
ಇನ್ನೂ ಸುಲಭವಾಗಿ ಹೇಳಬೇಕಾದರೆ ಫೋನಲ್ಲಿ ಎರಡು ಸಿಮ್ ಸ್ಲಾಟ್ ಇದ್ದರೆ, ಸಿಮ್ ಕಾರ್ಡ್ ಅನ್ನು ಸಿಮ್ ಸ್ಲಾಟ್ 2 ರಲ್ಲಿ ಹಾಕುವ ಬದಲು, ಸಿಮ್ ಸ್ಲಾಟ್ ಒಂದರಲ್ಲಿ ಬಳಸಬೇಕು. ಹೀಗೆ ಮಾಡಿದರೆ ಕೆಲವೇ ಗಂಟೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
ಇದನ್ನೂ ಓದಿ : ಟ್ವಿಟರ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದ ಎಲೋನ್ ಮಸ್ಕ್, ಈ ಕೆಲಸ ಮಾಡಿದರೆ ತಕ್ಷಣ ಮಾಯವಾಗುತ್ತೆ ಬ್ಲೂ ಟಿಕ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.